ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಜಕ್ಕಣಕ್ಕಿಯ ರೈತರ ಗೋದಾಮಿನಲ್ಲಿಟ್ಟಿದ್ದ ಅಡಿಕೆಯನ್ನು ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹಾದಿ ಓಣಿ ಗ್ರಾಮದ ಅಮ್ಮಿ ನಿವಾಸಿ ಕೃಷ್ಣಮೂರ್ತಿ ಅವರು ಜಕ್ಕಣಕ್ಕಿಯಲ್ಲಿರುವ ತೋಟದ ಗೋದಾಮಿನಲ್ಲಿ ಶೇಖರಿಸಿ ಇಟ್ಟಿದ ಅಡಿಕೆ ಮೂಟೆಗಳಲ್ಲಿ 70 ಕೆ.ಜಿ.ಯ 7 ಮೂಟೆಗಳು ಕಳವಾಗಿವೆ ಎಂದು ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಠಾಣಾಧಿಕಾರಿ ಅಂಬರೀಷ್ ನೇತೃತ್ವದ ತಂಡ ಆರೋಪಿಗಳಾದ ಮೂಡಿಗೆರೆ ಸಮೀಪದ ದಾರದಹಳ್ಳಿಯಲ್ಲಿ ಚಾಲಕ ವೃತ್ತಿ ನಡೆಸುವ ಮಂಜು ಅಲಿಯಾಸ್ ಸನ್ನು, ಬಿಳಗುಳ ಗ್ರಾಮದ ಇಂದಿರಾನಗರದ ಸಂತೋಷ್ ಎಂಬುವರನ್ನು ಬಂಧಿಸಿ ಸುಮಾರು ₹2.7 ಲಕ್ಷ ಮೌಲ್ಯದ 10 ಚೀಲ ಅಡಿಕೆ, ಕೃತ್ಯಕ್ಕೆ ಬಳಸಿದ್ದ ಸುಮಾರು ₹ 3 ಲಕ್ಷ ಮೌಲ್ಯದ ಮಾರುತಿ ಅಮ್ಮಿ ಹಾಗೂ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಸಿಪಿಐ ಗುರುದತ್ ಕಾಮತ್, ಸಿಬ್ಬಂದಿ ಶಂಕರ್, ಮನು, ಶಂಕರಪ್ಪ, ಆನಂದ್ ಬಿರಾದಾರ್, ಚನ್ನಯ್ಯ, ಕಿರಣ್ ಕುಮಾರ್, ಭೀಮಸೇಸ್ ಕೆ.ರಘು, ಗಿರೀಶ್ ಕುಮಾರ್, ತಾಂತ್ರಿಕ ವಿಭಾಗದ ನಯಾಜ್ ಭಾಗವಹಿಸಿದ್ದರು.
Suspects in areca nut theft case arrested
Leave a comment