Home namma chikmagalur chikamagalur ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕು ಮೊಟಕುಗೊಳಿಸುವ ಹುನ್ನಾರ
chikamagalurHomeLatest Newsnamma chikmagalur

ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕು ಮೊಟಕುಗೊಳಿಸುವ ಹುನ್ನಾರ

Share
Share

ಚಿಕ್ಕಮಗಳೂರು: – ಕಾರ್ಮಿಕರ ಹಕ್ಕನ್ನು ಮೊಟಕುಗೊಳಿಸಲು ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ. ಈ ವಿರುದ್ಧ ಎಲ್ಲಾ ಕ್ಷೇತ್ರದ ಕಾರ್ಮಿಕರ ಎಚ್ಚೆತ್ತುಕೊಂಡು ಹೋರಾಟ ರೂಪಿಸಲು ಮುಂದಾಗಬೇಕು ಸಿಪಿಐ ಹಿರಿಯ ಮುಖ ಂಡ, ಚಿಂತಕ ಡಾ.ಸಿದ್ದನಗೌಡ ಪಾಟೀಲ್ ಹೇಳಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಎ.ಐ.ಟಿ.ಯು.ಸಿ. ವತಿಯಿಂದ ಗುರುವಾರ ಆಯೋಜಿಸಿದ್ಧ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿ ದೇಶದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ರೈತರಿಗೆ ಭೂಮಿ ಕೊಡಲು ಬದಲು ಉಳ್ಳವರಿಗೆ ನೀ ಡುತ್ತಾ ಅವರಿಗೆ ಬೆಂಬಲವಾಗಿ ನಿಂತಿದೆ. ಮೋದಿ ಸರ್ಕಾರ ಕಾರ್ಮಿಕ ಪರವಿರುವ ಸರ್ಕಾರವಲ್ಲ. ಉದ್ಯಮಿ ಗಳ ಸಾಲಮನ್ನಾ ಮಾಡಿ, ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ನಿಂತಿರುವ ಉದ್ಯಮಿ ಸರ್ಕಾರವಾಗಿದೆ ಎಂದು ಟೀಕಿಸಿದರು.

ದೇಶದ ಸಂಪತ್ತು ಬಂಡವಾಳ ಶಾಹಿಗಳಿಂದ ಬೆಳೆಯುತ್ತಿದೆ ಎಂಬ ಭ್ರಮೆ ಸೃಷ್ಟಿಸಲಾಗುತ್ತಿದೆ. ಬಡವ ರು, ಶ್ರಮಜೀವಿಗಳಿಂದ ಸಂಪತ್ತು ಹೆಚ್ಚಾಗುತ್ತದೆಯೇ ಹೊರತು ಬಂಡವಾಳ ಶಾಹಿಗಳಿಂದಲ್ಲ. ಬಂಡವಾಳ ಶಾಹಿ ವ್ಯವಸ್ಥೆ ಎಷ್ಟು ಶೋಷಣೆ ಮಾಡುತ್ತದೆಯೇ ಅಷ್ಟೇ ಆಕ್ರೋಶ ಹೆಚ್ಚಾಗಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ೪೪ ಕಾಯ್ದೆಗಳನ್ನು ರದ್ದುಪಡಿಸಿ ಶೋಷಿತ ಸಮುದಾಯದ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಶೋಷಣೆ, ದಬ್ಬಾಳಿಕೆ ಹೆಚ್ಚಾದರೆ ವಿಚಲಿತ ಆಗುವುದು ಬೇಡ. ಇದು ಹೋರಾಟವಾ ಗಿ ಪರಿವರ್ತನೆ ಆಗಬೇಕಿದೆ. ಹೀಗಾಗಿ ಎಲ್ಲಾ ಕ್ಷೇತ್ರದ ಕಾರ್ಮಿಕರು ವಿರೋಧಿ ಕಾಯ್ದೆ ವಿರುದ್ಧ ಹೋರಾಡ ಬೇಕಿದೆ ಎಂದರು.

ಸ್ವಾತಂತ್ರ್ಯ ಚಳವಳಿ ಧಮನಕ್ಕೆ ಬ್ರಿಟಿಷರು ಹಲವು ರೀತಿಯ ಕಾಯ್ದೆಗಳನ್ನು ಅನುಷ್ಟಾನಕ್ಕೆ ತಂದಿದ್ದರು. ಕಾರಣವಿಲ್ಲದೇ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಮೂಲಕ ಕೇಂದ್ರ ಸರ್ಕಾರ ಬ್ರಿಟಿಷರಂತೆ ವರ್ತಿಸುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತು ವವರನ್ನು ಮಣಿಸಲು ಈ ಕಾಯ್ದೆ ಬಳಸುವ ಹುನ್ನಾರ ನಡೆಸಿದೆ ಎಂದರು.

ಸಾಂವಿಧಾನಿಕ ಸಂಸ್ಥೇಯಾಗಿರುವ ಚುನಾವಣಾ ಆಯೋಗವನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡು ದೇಶದ ಅನೇಕ ರಾಜ್ಯಗಳಲ್ಲಿ ಅಧಿಕಾರಕ್ಕೆ ಏರುತ್ತಿದೆ. ನಕಲಿ ಮತದಾರರನ್ನು ಸೃಷ್ಟಿಸಿ ಮತಗಳ್ಳತನ ಮಾಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದ ಅವರು ಚುನಾವಣಾ ಆ ಯೋಗವನ್ನು ರಕ್ಷಿಸಲು ಹೋರಾಟ ಸಿಪಿಐ ನಡೆಸುತ್ತಿದೆ ಎಂದು ಹೇಳಿದರು.

ಎಐಟಿಯುಸಿ ಕೆಂಬಾವುಟ ಕೇವಲ ಬಟ್ಟೆಯಲ್ಲ. ಅನೇಕ ಕಾರ್ಮಿಕರು ತ್ಯಾಗ, ಬಲಿದಾನದ ಸಂಕೇತ. ಸರ್ಕಾರಿ ಅಧಿಕಾರಿಗಳು ದಿನದ ಎಂಟೆ ಗಂಟೆ ಕರ್ತವ್ಯವಾದರೆ, ದುಡಿಯುವ ವರ್ಗ ಮಾತ್ರ ೧೨ ತಾಸುಗಳ ಕಾರ್ಯನಿರ್ವಹಿಸುವುದು ಸರಿಯೇ. ಈ ವಿರುದ್ಧ ಎಐಟಿಯುಸಿ ನಿರಂತರ ಹೋರಾಡಿ ಯಶಸ್ವಿಗೊಂಡರೂ, ಕೆಲವೆಡೆ ಇನ್ನೂ ನಿಗಧಿತ ಸಮಯ ಮೀಸಲಾಗಿಲ್ಲ ಎಂದು ಹೇಳಿದರು.

ದೇಶದಲ್ಲಿ ಸುಮಾರು ೪೫ ಕೋಟಿ ಮಂದಿ ಕಾರ್ಮಿಕರು ಅನಕ್ಷರಸ್ಥರಾಗಿದ್ದಾರೆ. ದೇಶದ ಎರಡು ರಾಷ್ಟ್ರೀ ಯ ಪಕ್ಷಗಳು ಕಾರ್ಮಿಕ ವರ್ಗಕ್ಕೆ ಮೂಲಸೌಕರ್ಯ ಕಲ್ಪಿಸದೇ ಕೇವಲ ಮತಬ್ಯಾಂಕ್‌ಗಾಗಿ ಪರಿವರ್ತಿಸಿಕೊ ಂಡು ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೇಯನ್ನು ಬುಡಮೇಲು ಮಾಡಿ ದೊಡ್ಡ ದ್ರೋಹವೆಸಗುತ್ತಿದೆ ಎಂದು ತಿಳಿಸಿದರು.

ಸಿಪಿಐ ಜಿಲ್ಲಾ ಮುಖಂಡ ಹೆಚ್.ಎಂ.ರೇಣುಕಾರಾಧ್ಯ ಮಾತನಾಡಿ ಕಮ್ಯೂನಿಸ್ಟ್ ಪಕ್ಷ ಅರ್ಥ ಎಂದರೆ, ದುಡಿಯುವ ವರ್ಗವು ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದು. ಕಾರ್ಮಿಕರು ಸರ್ಕಾರದ ಸವಲತ್ತು ಜೊತೆಗೆ ನೈಜವಾಗಿ ಲಭಿಸಬೇಕಾದ ಅಂಶಗಳನ್ನು ಪಡೆದುಕೊಳ್ಳುವುದು ಕರ್ತವ್ಯ. ಹಾಗಾಗಿ ಸಿಪಿಐ ಅನೇಕ ವರ್ಷಗಳಿಂದ ಹೋರಾಟ ರೂಪಿಸುತ್ತಿದೆ ಎಂದರು.

ಜಿಲ್ಲೆ ಸೇರಿದಂತೆ ಹಲವೆಡೆ ಕಾರ್ಮಿಕರಿಗೆ ಜನಪ್ರತಿನಿಧಿಗಳು ನಿವೇಶನ ಒದಗಿಸುವಲ್ಲಿ ವಿಫಲತೆ ಹೊಂ ದಿದೆ. ಎರಡು ಪಕ್ಷಗಳು ಪರಸ್ಪರ ಕೆಸರೆರಾಟದಲ್ಲಿ ತೊಡಗಿಸಿಕೊಂಡು ಕಾರ್ಮಿಕರನ್ನು ಮೂಲೆಗುಂಪು ಮಾ ಡುತ್ತಿವೆ. ರಕ್ತವನ್ನೇ ಬೆವರಿನಂತೆ ಸುರಿಸುತ್ತಿರುವ ಕಾರ್ಮಿಕರು ದೇಶದ ಜನಪ್ರತಿನಿಧಿಗಳಾಗಿಸುವುದು ಸಿಪಿಐನ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿ ಜಾತಿ, ಧರ್ಮ ಆಧಾ ರದಲ್ಲಿ ಹಬ್ಬಗಳ ಆಚರಣೆ ನಡೆಯುತ್ತವೆ. ಆದರೆ ಜಾತಿ, ಧರ್ಮರಹಿತವಾಗಿ ಎಲ್ಲರೂ ಒಂದುಗೂಡಿಸಿ ಆಚ ರಿಸುವ ಹಬ್ಬವೇ ಕಾರ್ಮಿಕರ ದಿನಾಚರಣೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿಯುಸಿ ಸದಸ್ಯ ಎಸ್.ವಿಜಯ್‌ಕುಮಾರ್ ದೊ ಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಸಾಲಮನ್ನಾ ಮಾಡುವ ಕೇಂದ್ರ ಸರ್ಕಾರ, ಕಾರ್ಮಿಕರ ಮೂಲ ಬೇಡಿಕೆ ಈಡೇರಿಸುವಲ್ಲಿ ವಿಫಲವತೆ ಹೊಂದುತ್ತಿದೆ. ಈ ವಿರುದ್ಧ ಗಟ್ಟಿಧ್ವನಿಯಿಂದ ಪ್ರತಿ ಕ್ಷೇತ್ರದ ಕಾರ್ಮಿಕರು ಒಂದಾಗಿ ಆಡಳಿತ ಸರ್ಕಾರದ ವಿರುದ್ಧ ಹೋರಾಡಬೇಕಿದೆ ಎಂದರು.

ಇದೇ ವೇಳೆ ನೂರಾರು ಸಂಖ್ಯೆಯಲ್ಲಿ ವಿವಿಧ ಕ್ಷೇತ್ರದ ಕಾರ್ಮಿಕರು, ಪಕ್ಷದ ಕಾರ್ಯಕರ್ತರು ನಗರದ ಸಿಪಿಐ ಕಚೇರಿಯಿಂದ ಆಜಾದ್‌ಪಾರ್ಕ್ ವೃತ್ತದವರೆಗೆ ಮೆರವಣಿಗೆ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ವಿ.ಲೋಕೇಶ್, ಪ್ಲಾಂಟೇಷನ್ ಯೂನಿಯುನ್ ಜಿಲ್ಲಾ ಕಾರ್‍ಯ ದರ್ಶಿ ಜಿ.ರಮೇಶ್, ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಮುಖಂಡರುಗ ಳಾದ ಹೆಡದಾಳ್ ಕುಮಾರ್, ಹೆಚ್.ಕೆ.ಸೋಮೇಗೌಡ, ಮಂಜೇಗೌಡ, ರಮೇಶ್ ಮತ್ತಿತರರು ಉಪಸ್ಥಿತರಿ ದ್ದರು.

The central government is intent on curtailing workers’ rights.

Share

Leave a comment

Leave a Reply

Your email address will not be published. Required fields are marked *

Don't Miss

ಮೆಸ್ಕಾಂ ಇಂಜಿನಿಯರ್ ತಿರುಪತಿ ನಾಯ್ಕ್ ಲೋಕಾಯುಕ್ತ ಬಲೆಗೆ.

ಕಡೂರು: ಕಡೂರಿನ ಮೆಸ್ಕಾಂ ನಲ್ಲಿ ಸಹಾಯಕ ಇಂಜಿನಿಯರ್ ತಿರುಪತಿ ನಾಯ್ಕ್ ಲೋಕೇಶ್ ಎಂಬುವರಿಂದ 5,000 ರೂ ಲಂಚ ಪೆಡೆಯುವಾಗ ಲೋಕಾಯುಕ್ತಾದವರು ದಾಳಿ ನಡೆಸಿ ಬಂಧಿಸಿದ್ದಾರೆ. ಲೋಕೇಶ್ ಶಿರಾ ಮೂಲದವರಾಗಿದ್ದು ಕಡೂರಿನ‌ ತಂಗಲಿ...

ಮಕ್ಕಳಿಗೆ ಶಿಕ್ಷಣ ನೀಡಿ ಬದುಕನ್ನು ಹಸನಾಗಿಸಬೇಕು

ಚಿಕ್ಕಮಗಳೂರು : ಕೃಷಿಕರು, ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಹಸನಾಗಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ೨೦೨೫-೨೬...

Related Articles

ಮಹಿಳೆಯ ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೀಸ್ ಕಳವು

ಚಿಕ್ಕಮಗಳೂರು: ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ತರಾತುರಿಯಲ್ಲಿದ್ದ ಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು, ಅವರ ವ್ಯಾನಿಟಿ...

ಆಧುನಿಕ ಭಾರತ ನಿರ್ಮಾಣಕ್ಕೆ ರಾಜೀವ್‌ಗಾಂಧಿ ಕೊಡುಗೆ ಅಪಾರ

ಚಿಕ್ಕಮಗಳೂರು: ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಕ್ರಾಂತಿ ಹಾಗೂ ಯುವಜನರಿಗೆ ಮತದಾನದ ಹಕ್ಕು ತರುವುದರ ಮೂಲಕ ರಾಜೀವ್‌ಗಾಂಧಿಯವರು...

ನಗರಸಭೆ ನೂತನ ಅಧ್ಯಕ್ಷರಾಗಿ ಭವ್ಯ ಮಂಜುನಾಥ್ ಅವಿರೋಧ ಆಯ್ಕೆ

ಚಿಕ್ಕಮಗಳೂರು-ನಗರಸಭೆ ನೂತನ ಅಧ್ಯಕ್ಷರಾಗಿ ೩೨ನೇ ವಾರ್ಡಿನ ಬಿಜೆಪಿ ಸದಸ್ಯೆ ಭವ್ಯ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರಸಭೆ...

ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಜಟಾಪಟಿ

ಚಿಕ್ಕಮಗಳೂರು: ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿದ್ದು, ಕಾರ್ಯಕರ್ತರು ಗುರುವಾರ...