Home ಮೇ 23 ಕ್ಕೆ ಮೂಡಿಗೆರೆಯಲ್ಲಿ ರೈತರಿಗಾಗಿ “ನಮ್ಮ ಭೂಮಿ ನಮ್ಮ ಹಕ್ಕು” ಸಮಾವೇಶ. 
HomeKadurLatest Newsnamma chikmagalur

ಮೇ 23 ಕ್ಕೆ ಮೂಡಿಗೆರೆಯಲ್ಲಿ ರೈತರಿಗಾಗಿ “ನಮ್ಮ ಭೂಮಿ ನಮ್ಮ ಹಕ್ಕು” ಸಮಾವೇಶ. 

Share
Share
ಕಡೂರು:  ರೈತರ ಪರವಾಗಿ ಇರಬೇಕಾದ ಸರ್ಕಾರ ಅವರ ಬೆನ್ನೆಲುಬನ್ನೇ ಮುರಿಯಲು ಹೊರಟಂತಿದೆ, 2010 ರಿಂದ 2023 ರ ಅವಧಿಯಲ್ಲಿ ರೈತರಿಗೆ ಫಾರಂ ನಂ 50/53 ರ ಅಕ್ರಮ ಸಕ್ರಮ ಸಮಿತಿಯ ಅಡಿಯಲ್ಲಿ ಮಂಜೂರಾಗಿ ಭೂಮಿಗೆ ನೀಡಿದ್ದ ಸಾಗುವಳಿ  ಚೀಟಿಯನ್ನು ಸಕಾರಣವಿಲ್ಲದೆ ವಜಾ ಮಾಡಿದೆ. ಈ ನಿಲುವನ್ನು ಪ್ರಶ್ನೆಯಾಗ
 ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡುವ ಸಲುವಾಗಿ ರೈತರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಮಾಡಬೇಕಾದ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮೇ 23 ರ ಶನಿವಾರ ಮೂಡಿಗೆರೆಯ ರೈತ ಭವನದಲ್ಲಿ “ನಮ್ಮ ಭೂಮಿ ನಮ್ಮ ಹಕ್ಕು” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.
 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುಉದ್ಧಿಗಾರರೊಂದಿಗೆ ಮಾತನಾಡಿ  2010 ರಿಂದ 2013 ರ ವರೆಗೆ ವಿಶ್ವನಾಥ್, 2013 ರಿಂದ 2018 ನಂತರ ತಾವು, 2026ರಿಂದ 2023 ರ ವರೆಗೆ ಬೆಳ್ಳಿ ಪ್ರಕಾಶ್  ಬಗರ್ ಹುಕುಂ ಕಮಿಟಿ ಅಧ್ಯಕ್ಷರಾಗಿ ಬಡ ರೈತರಿಗೆ ಧಾಖಲೆ ಇಲ್ಲದೆ ಸಾಗುವಳಿ ಮಾಡುತ್ತಿದ್ದವರಿಗೆ ಮೂರೂ ಅವಧೀಯಲ್ಲಿ ಸಾವಿರಾರು  ಸಾಗುವಳಿ ಪತ್ರ ನೀಡಲಾಗಿತ್ತು. 2023 ರ ಮೇಲೆ ಸಾಗುವಳಿ ಪತ್ರ ನೀಡಿರುವ ವಿಧಾನ ತಪ್ಪಾಗಿದೆ, ನಿಯಮ ಮೀರಿ ಅರಣ್ಯ ಭೂಮಿ, ಅಮೃತ್ ಮಹಲ್ ಕಾವಲ್, ಎಮ್ಮೆದೊಡ್ಡಿ ಭಾಗದಲ್ಲಿ ಸಾಗುವಳಿ ಚೀಟಿ ನೀಡಿದ್ದಾರೆ ತನಿಖ ಆಗಬೇಕು ಎಂದು ಸರ್ಕಾರ ಆದೇಶ ನೀಡಿತು, ಇದೆಲ್ಲದರಿಂದ ಬಡ ರೈತರಿಗೆ ನೀಡಿದ್ದ ಸಾಗುವಳಿ ಚೀಟಿ ರದ್ದು ಪಡಿಸಿದೆ.  ಇದು ನಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. ಸಾಗುವಳಿ ಚೀಟಿ ರದ್ದಾದ ಕಾರಣ ರೈತರಿಗೆ ಗೊಬ್ಬರ ಪಡೆಯುವುದೂ ಕಷ್ಟವಾಗಿದೆ ಎಂದರು.
 ಈ ನಡೆಯನ್ನು ಪ್ರಶ್ನಿಸಿ ಮೂಡಿಗೆರೆಯ ಕೆಲವು ರೈತರು ಹೈಕೋರ್ಟಿನಲ್ಲಿ ದಾವೆ ಹೂಡಿದ್ದಾರೆ, ಅವರಿಗೆ ಕೆಲವರು ಮಾನವೀಯ ದೃಷ್ಟಿಯಿಂದ ಸಹಾಯ ಮಾಡಿದ್ದಾರೆ, ಜನಾರ್ದನ ಎಂಬ ವಕೀಲರ ಮಾರ್ಗದರ್ಶನದಲ್ಲಿ ದಾವೆ ಹೂಡಿಲಾಗಿ ಹೈಕೋರ್ಟ್ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಆದೇಶ ಕೇವಲ ದಾವೆ ಹೂಡಿದವರಿಗೆ ಮಾತ್ರ ಅನ್ವಯ ಆಗುತ್ತದೆ. ಆದ್ದರಿಂದ ಸಾಗುವಳಿ ಚೀಟಿ ರದ್ದಾದ ಪ್ರತಿ ರೈತರಿಂದ ಹೈಕೋರ್ಟಿನಲ್ಲಿ ದಾವೆ ಹಾಕಿಸುವ ನಿಟ್ಟಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕಡೂರು ತಾಲೂಕಿನ ಸುಮಾರು 4000, ಮೂಡಿಗೆರೆ ತಾಲ್ಲೂಕಿನ ಸುಮಾರು 3000 ರೈತರಿಗೆ ಸಾಗುವಳಿ ಚೀಟಿ ನೀಡಲಾಗಿತ್ತು ಬಹುತೇಕ ಎಲ್ಲರ ಪಹಣಿಗಳನ್ನು ನೋಟೀಸ್ ನೀಡಿ ವಜಾ ಮಾಡಲಾಗಿದೆ. ಆಗಿರುವ ಅನ್ಯಾಯವಕ್ಕೆ ನ್ಯಾಯಾಂಗದ ಮೂಲಕ ಹೋರಾಟ ಮಾಡುವುದರ ಜತೆಗೆ ಸರ್ಕಾರಕ್ಕೂ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು, ಇದರಲ್ಲಿರುವ ಲೋಪದೋಷಗಳನ್ನು ತಿಳಿಸಬೇಕು, ಈ ಸಂಬಂಧ ಮೂಡಿಗೆರೆಯಲ್ಲಿ ನಡೆಯುವ ಸಮಾವೇಶಕ್ಕೆ ಸಂತ್ರಸ್ತರೆಲ್ಲರೂ ಆಗಮಿಸಿ ಕಾನೂನು ಹೋರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಉಚ್ಚನ್ಯಾಯಾಲಯದ ಹಿರಿಯ ನ್ಯಾಯಾವಾದಿಗಳಾದ ಎಂ.ಶಿವಪ್ರಸಾದ್ ಮತ್ತು ಹೆಚ್. ಎಂ.ಪ್ರಸಾದ್ ಅವರಿಂದ ಪಡೆಯಬಹುದು.ಇದರಲ್ಲಿ ಸಮಾನ ಮನಸ್ಕರು, ರೈತ ಹಿತರಕ್ಷಣಾ ಸಮಿತಿ ಚಿಕ್ಕಮಗಳೂರು, ಕಡೂರು ಮೂಡಿಗೆರೆ ರೈತರು ಪಕ್ಷಾತೀತವಾಗಿ ಸೇರಲಿದ್ದಾರೆ ಎಂದರು.
   ಈ ಸಾಗುವಳಿ ಚೀಟಿಗಳನ್ನು 1964 ಕಂದಾಯ ಇಲಾಖೆಯ ಕಾಯ್ದೆ 94 ಎ ಅಡಿಯಲ್ಲಿ ನೀಡಲಾಗಿತ್ತು, ಆದರೆ 108 ಕೆ ಕಾಯ್ದೆಯ ಅಡಿಯಲ್ಲಿ ರದ್ದು ಮಾಡಲಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಕಾರ್ಯದರ್ಶಿ ಇವರ ಅಡಿಯಲ್ಲಿ ಸ್ಥಳೀಯ ಸದಸ್ಯರೂ ಇರುತ್ತಾರೆ. ಶಾಸಕನೊಬ್ಬನೇ ಸಾಗುವಳಿ ಚೀಟಿ ನೀಡುವ ನಿರ್ಧಾರ ತೆಗೆದುಕೊಂಡಿಲ್ಲ, ಕಂದಾ ಇಲಾಖೆಯ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿ ಪಡೆದು ನೀಡಲಾಗಿದೆ. ಇಷ್ಟೆಲ್ಲ ಕೆಲಸದ ನಡುವೆ ಆಗಿರುವ ಕೆಲವೇ ತಪ್ಪನ್ನು ಸರಿಪಡಿಸುವ ಬದಲು ಎಲ್ಲರ ಸಾಗುವಳಿ ಚೀಟಿ ರದ್ದು ಮಾಡಾದ್ದಾರೆ. ಅಧಿಕಾರಿಗೆ ಕಾನೂನಿನ ಅರಿವಿನ ಜತೆಗೆ ಮಾನವೀಯತೆಯ ಇರಬೇಕು ಇದಿಲ್ಲದ ಕಾರಣ ರೈತರು ಇಂದು ಅನುಭವಿಸುತ್ತಿದ್ದಾರೆ. ಪರಿಭಾವಿತಅರಣ್ಯ ಎಂಬ ಭೂತವನ್ನು ತಂದು ರೈತರಿಗೆ ಮೋಸ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿದ ನಂತರ ನಿರ್ಧಾರ ತೆಗೆದುಕೊಳ್ಳದೆ ಸಾಗುವಳಿ ಚೀಟಿ ರದ್ದು ಮಾಡಲಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಂಢಾರಿ ಶ್ರೀನಿವಾಸ್ ಮಾತನಾಡಿ ಸರ್ಕಾರ ಸಾಗುವಳಿ ಚೀಟಿ ವಜಾ ಮಾಡಿರುವುದನ್ನು ಪರಿಶೀಲನೆ ಮಾಡಿ ರೈತರ ಪರವಾಗಿ ವರ್ತಿಸಿದರೆ ರೈತರಿಗೆ ಒಳಿತಾಗುತ್ತದೆ. ರೈತರಿಗೆ ಜಾತಿ ಮತ್ತು ಪಕ್ಷ ಇಲ್ಲ ರೈತರಿಗೆ ಒಳಿತಾಗುವುದಾದರೆ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಿ ರೈತರಿಗೆ ಸಾಗುವಳಿ ಚೀಟಿ ಕೊಡಿಸುಲು ಬದ್ಧರಾಗಿರುವುದಾಗಿ ಹೇಳಿದರು.  ಪತ್ರಿಕಾ ಘೋಷ್ಟಿಯಲ್ಲಿ ತಾಲೂಕಿನ ರೈತ ಮುಖಂಡರು ಸಂತ್ರಸ್ತ ರೈತರು ಇದ್ದರು.
“Our Land Our Rights” conference for farmers in Mudigere on May 23rd.
Share

Leave a comment

Leave a Reply

Your email address will not be published. Required fields are marked *

Don't Miss

ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಗೆ 451 ಅಭ್ಯರ್ಥಿಗಳ ಗೈರು

ಚಿಕ್ಕಮಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಭಾನುವಾರ ರಾಜ್ಯಾದ್ಯಂತ ನಡೆದ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) ಹುದ್ದೆಗಳ ಲಿಖಿತ ಪರೀಕ್ಷೆಯು ಚಿಕ್ಕಮಗಳೂರು ಜಿಲ್ಲೆಯ ೧೬ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ...

ವಿಧಾನ ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಇಂದು ಪ್ರಮಾಣ ವಚನ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸದಸ್ಯೆಯಾಗಿ ನೇಮಕಗೊಂಡಿರುವ ಶ್ರೀಮತಿ ಗಾಯತ್ರಿ ಶಾಂತೇಗೌಡ ಅವರು ಸೋಮವಾರ (ಆಗಸ್ಟ್ 3) ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಮಾಣ...

Related Articles

ದೇವಸ್ಥಾನ ಪ್ರವೇಶದ ವಿಚಾರಕ್ಕೆ ಬಾಲಕನ ಮೇಲೆ ಕತ್ತಿಯಿಂದ ಹಲ್ಲೆಗೆ ಯತ್ನ

ಚಿಕ್ಕಮಗಳೂರು: ದೇವಸ್ಥಾನ ಪ್ರವೇಶದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕನಿಗೆ ಅವಾಚ್ಯವಾಗಿ...

ಸ್ಕೂಟರ್ ಮರದ ಬಿಳಲಿಗೆ ಡಿಕ್ಕಿಗೆ ಮಹಿಳೆ ಸ್ಥಳದಲ್ಲೇ ಸಾವು

ಕಡೂರು: ಸ್ಕೂಟರ್ ನಿಯಂತ್ರಣ ತಪ್ಪಿ ಆಲದ ಮರದ ಬಿಳಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ...

ಜಲಜೀವನ್ ಮಿಷನ್ ಕಾಮಗಾರಿ ಸ್ಥಳದಿಂದ ಜನರೇಟರ್, ಪೈಪ್ ಕಳವು

ಚಿಕ್ಕಮಗಳೂರು: ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಬಳಸುತ್ತಿದ್ದ 10 ಕೆವಿಎ ಡೀಸೆಲ್...

ಬೀರೂರಿನ ಫೈನಾನ್ಸ್ ಕಂಪನಿಗೆ ₹9.91 ಲಕ್ಷ ವಂಚನೆ

ಬೀರೂರು: ಬೇರೊಬ್ಬ ವ್ಯಕ್ತಿಯಂತೆ ನಟಿಸಿ ಫೈನಾನ್ಸ್‌ನಲ್ಲಿ ಗಿರವಿ ಇಟ್ಟಿರುವ ಚಿನ್ನ ಬಿಡಿಸಿಕೊಡುವುದಾಗಿ ನಂಬಿಸಿ ನವರತ್ನ ಗೋಲ್ಡ್...