Home namma chikmagalur chikamagalur ಬಿದರೆ ಗ್ರಾಮದ ಕೋಳಿ ಗೂಡಿನಲ್ಲಿ ಮೂರು ನಾಗರಹಾವು ಪತ್ತೆ
chikamagalurHomeLatest Newsnamma chikmagalur

ಬಿದರೆ ಗ್ರಾಮದ ಕೋಳಿ ಗೂಡಿನಲ್ಲಿ ಮೂರು ನಾಗರಹಾವು ಪತ್ತೆ

Share
Share

ಚಿಕ್ಕಮಗಳೂರು: ಅತಿಯಾದ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಹಾಗೂ ಆಹಾರದ ಹುಡುಕಾಟದಲ್ಲಿದ್ದ ಮೂರು ನಾಗರ ಹಾವುಗಳು ಒಂದೇ ಗ್ರಾಮದ ಮೂರು ಮನೆಗಳ ಕೋಳಿ ಗೂಡು ಸೇರಿ ಅಚ್ಚರಿ ಮೂಡಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳಾದ ರಾಮೇಗೌಡ, ದೇವರಾಜೇಗೌಡ ಮತ್ತು ನಾಗರತ್ನ ಎಂಬುವವರ ಮನೆಯ ಕೋಳಿ ಗೂಡುಗಳಿಗೆ ಈ ನಾಗರ ಹಾವುಗಳು ನುಗ್ಗಿದ್ದವು. ಅತಿಯಾದ ಬಿಸಿಲಿನಿಂದ ತಂಪು ಆಶ್ರಯ ಹುಡುಕುತ್ತಾ ಬಂದಿದ್ದ ಹಾವುಗಳು, ಮೊಟ್ಟೆಗಳನ್ನು ನುಂಗುವ ಆಸೆಯಿಂದ ಗೂಡಿನೊಳಗೆ ಸೇರಿಕೊಂಡಿದ್ದವು. ಈ ಪೈಕಿ ಒಂದು ಹಾವು ಬರೋಬ್ಬರಿ 21 ಮೊಟ್ಟೆಗಳನ್ನು ನುಂಗಿತ್ತು! ಮೊಟ್ಟೆಗಳನ್ನು ನುಂಗಿದ ನಂತರ ಹಾವುಗಳು ಭಾರದಿಂದಾಗಿ ಹೊರಬರಲಾಗದೆ ಗೂಡಿನಲ್ಲೇ ಸಿಲುಕಿಕೊಂಡಿದ್ದವು.

ಹಾವುಗಳನ್ನು ಕಂಡು ಆತಂಕಕ್ಕೊಳಗಾದ ಸ್ಥಳೀಯರು ಕೂಡಲೇ ಬಾಳೆಹೊನ್ನೂರಿನ ಖ್ಯಾತ ಉರಗ ತಜ್ಞ ಆಲ್ಬರ್ಟ್ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಆಲ್ಬರ್ಟ್, ಮೂರೂ ನಾಗರ ಹಾವುಗಳನ್ನು ಯಾವುದೇ ಅಪಾಯವಿಲ್ಲದಂತೆ ಸುರಕ್ಷಿತವಾಗಿ ರಕ್ಷಿಸಿದರು. ಬಳಿಕ ಅವುಗಳನ್ನು ಎಲೆಕಲ್ಲು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಒಂದೇ ಗ್ರಾಮದ ಮೂರು ಮನೆಗಳಲ್ಲಿ ಏಕಕಾಲಕ್ಕೆ ನಾಗರಹಾವುಗಳು ಕಾಣಿಸಿಕೊಂಡ ಈ ಅಪರೂಪದ ಘಟನೆಯನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

Three cobras found in a chicken coop in Bidde village

Share

Leave a comment

Leave a Reply

Your email address will not be published. Required fields are marked *

Don't Miss

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ತೋಟ ಹಾಗೂ ಮನೆಯ ಕೆಲಸಗಾರನಾಗಿ ಸುಮಾರು ಎರಡು ವರ್ಷಗಳಿಂದ ನಂಬಿಕಸ್ಥನಾಗಿದ್ದ ವ್ಯಕ್ತಿಯೊಬ್ಬನೇ ಮಾಲೀಕರ ಮನೆಯ ಲಾಕರ್‌ನಿಂದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು...

200 ರೂ.ಸಾಲ ನೀಡಿಲ್ಲ ಎಂದು ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೆ ಯತ್ನ

ತರೀಕೆರೆ: ಕೇವಲ ಇನ್ನೂರು ರೂಪಾಯಿ ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ತಲೆಯ ಹಿಂಭಾಗಕ್ಕೆ ಸುತ್ತಿಗೆಯಿಂದ ಜಜ್ಜಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜೋಡಿ ಗೋವಿಂದಪ್ಪ...

Related Articles

ಪ್ರತ್ಯೇಕ ರೈತ ಸಂಘಟನೆ ಘೋಷಣೆಗೆ ನಿರ್ಧಾರ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ರೈತ ಸಂಘದಲ್ಲಿ ಸಕ್ರೀಯರಾಗಿದ್ದ...

ಎರಡು ಪ್ರತ್ಯೇಕ ಪೋಕೋ ಪ್ರಕರಣದಲ್ಲಿ ಇಬ್ಬರ ಬಂಧನ

ಬಾಳೆಹೊನ್ನೂರು: ಅಪ್ರಾಪ್ತರ ಮೇಲಿನ ದೌರ್ಜನ್ಯ ಕುರಿತಂತೆ 2 ಪ್ರತ್ಯೇಕ ಪೋಕೋ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಾಳೆಹೊನ್ನೂರು...

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು....