Home namma chikmagalur chikamagalur ಏ. 26ಕ್ಕೆ ಜಿಲ್ಲಾ ಮಟ್ಟದ 6ನೇ ಜಾನಪದ ಸಮ್ಮೇಳನ
chikamagalurHomeLatest Newsnamma chikmagalur

ಏ. 26ಕ್ಕೆ ಜಿಲ್ಲಾ ಮಟ್ಟದ 6ನೇ ಜಾನಪದ ಸಮ್ಮೇಳನ

Share
Oplus_16908288
Share

ಚಿಕ್ಕಮಗಳೂರು: ಪಾಶ್ಚಾತ್ಯ ಸಂಸ್ಕೃತಿ ಸಂಗೀತದ ಹಾವಳಿಯಿಂದಾಗಿ ನಶಿಸುತ್ತಿರುವ ಅತ್ಯಮೂಲ್ಯ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಉದ್ದೇಶದೊಂದಿಗೆ ಏ. ೨೬ ರಂದು ಭಾನುವಾರ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಮಟ್ಟದ ೬ನೇ ಜಾನಪದ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮ್ಮೇಳನಾಧ್ಯಕ್ಷರಾಗಿ ಮಾಜಿ ಸಚಿವೆ ಹಾಗೂ ಹಿರಿಯ ಜಾನಪದ ಕಲಾವಿದೆ ಶ್ರೀಮತಿ ಮೋಟಮ್ಮನವರು ಆಯ್ಕೆಯಾಗಿದ್ದಾರೆ ಎಂದು ಹೇಳಿದ ಅವರು ನಾಡ ಧ್ವಜವನ್ನು ಕಜಾಪ ರಾಜ್ಯಾಧ್ಯಕ್ಷ ಪ್ರೋ. ಹಿ.ಚಿ ಬೋರಲಿಂಗಯ್ಯ ಅನಾವರಣಗೊಳಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ವಹಿಸಲಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಳೇನಹಳ್ಳಿ ಬಸಪ್ಪ, ಗುರುವೇಶ್ ಗೌಡ, ಮುಗುಳಿ ಲಕ್ಷ್ಮೀ ದೇವಮ್ಮ, ಜಿ.ಎಸ್ ತಿಪ್ಪೇಶ್, ಸವಿತಾ ಸತ್ಯನಾರಾಯಣ, ಬಿ.ಪಿ ಪರಮೇಶ್ವರಪ್ಪ, ಗಾಯಿತ್ರಮ್ಮ, ಕೆಸವಿನ ಮನೆ ಬೈರೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನದಂದು ಬೆಳಿಗ್ಗೆ ೯ ಗಂಟೆಗೆ ತಾಲ್ಲೂಕು ಕಛೇರಿ ಆವರಣದಿಂದ ಜಾನಪದ ಕಲಾ ತಂಡಗಳು ಪೂರ್ಣಕುಂಭ ಹಾಗೂ ವಾಧ್ಯಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಟು ಎಂ.ಜಿ ರಸ್ತೆ ಮೂಲಕ ಸಾಗಿ ಕಲಾಮಂದಿರ ತಲುಪಲಿದೆ, ಕಲಾತಂಡಗಳ ಪ್ರದರ್ಶನವನ್ನು ಮಾಜಿ ಸಚಿವ ಬಿ.ಬಿ ನಿಂಗಯ್ಯ ಉದ್ಘಾಟಿಸುವರು, ಮೆರವಣಿಗೆ ಉದ್ಘಾಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಹಾಗೂ ಮೆರವಣೆಗೆಗೆ ಚಾಲನೆಯನ್ನು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ ರಾಜೇಗೌಡ ನೆರೆವೇರಿಸುವರು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಗ್ರಾಮೀಣ ಸಮುದಾಯದ ಕಲೆ, ಸಾಹಿತ್ಯ, ಸಂಸ್ಕೃತಿ ಶಿಥಿಲಗೊಳ್ಳದಂತೆ ಜಾಗೃತಿ ಮೂಡಿಸುವುದು ಗ್ರಾಮೀಣ ಜನರು ಅನಕ್ಷರಸ್ಥರಾಗಿದ್ದು ಪ್ರತಿಭಾವಂತರಾಗಿದ್ದಾರೆ ಅವರಲ್ಲಿ ಸಾಹಿತ್ಯ ಕಲೆಗಳನ್ನು ಕಟ್ಟುವ ಶಕ್ತಿ ಇದೆ ಎಂಬ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಜಾನಪದ ಗೋಷ್ಠಿಗಳ ಮುಖಾಂತರ ಜನಪದದ ಹಲವು ವಿಸ್ತಾರಗಳನ್ನು ಪರಿಚಯಿಸುವ ಜೊತೆಗೆ ಸ್ಥಳೀಯವಾಗಿರುವ ಗಾದೆ, ಒಗಟು, ಲಾವಣಿ ಗೀತೆ, ಕಥೆ ಮೊದಲಾದವುಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಆಸಕ್ತರನ್ನು ಪ್ರೇರೇಪಿಸಲಾಗುವುದು, ಜಾನಪದದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.

ಸಮ್ಮೇಳನದ ಉದ್ಘಾಟನೆಯನ್ನು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜಾರ್ಜ್ ನೆರೆವೇರಿಸುವರು, ಕನ್ನಡ ಮತ್ತು ಸಂಸ್ಕೃತಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಜನಪದ ವಾದ್ಯಗಳನ್ನು ಉದ್ಘಾಟಿಸುವರು, ಜನಪದ ವಸ್ತು ಪ್ರದರ್ಶನ ಉದ್ಘಾಟನೆಯನ್ನು ಶಾಸಕ ಹೆಚ್.ಡಿ ತಮ್ಮಯ್ಯ ನೆರೆವೇರಿಸುವರು, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಜನಪದ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

ಜನಪದ ಸಿರಿಸ್ಮರಣಿಕೆಗಳನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ನೆರೆವೇರಿಸುವರು ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕಿ ನಯನಮೋಟಮ್ಮ ಪುಷ್ವನಮನ ಸಲ್ಲಿಸುವರು, ಹಿರಿಯ ಸಾಹಿತಿ ಗಿರಿಜಾಶಂಕರ್ ಆಶಯ ನುಡಿಗಳಾಡುವರು ಮುಖ್ಯ ಅತಿಥಿಗಳಾಗಿ ಎಂ.ಆರ್ ದೇವರಾಜ್ ಶೆಟ್ಟಿ, ಎಂ.ಸಿ ಶಿವಾನಂದ ಸ್ವಾಮಿ, ಭಂಡಾರಿ ಶ್ರೀನಿವಾಸ್, ಪಿ.ಎ ರಾಜಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜಾನಪದ ಗ್ರಾಮೀಣ ಜನರ ಕೃಷಿಕರ ಅನುಭವ ಸಂಪತ್ತು ಇದೊಂದು ಮೌಖಿಕ ಸಾಹಿತ್ಯ, ಪೂರ್ವಜರ ಸಾಮಾಜಿಕ ಹಾಗೂ ನೈತಿಕ ಬದುಕಿನ ಸಾಂಸ್ಕೃತಿಕ ವ್ಯಕ್ತಿತ್ವದ ಸಂಕೇತವಾಗಿರುವ ಜನಪದ ಸಾಹಿತ್ಯ ಕಲೆಯನ್ನು ಉಳಿಸಿ ನಾಗರೀಕ ಸಮಾಜಕ್ಕೆ ಪರಿಚಯಿಸುವ ಉದ್ದೇಶದೊಂದಿಗೆ ವಿಶ್ವ ವಿದ್ಯಾಲಯಗಳು ಇದನ್ನು ಶಾಸ್ತ್ರೀಯ ಅಧ್ಯಾಯನ ವಿಷಯವನ್ನಾಗಿ ಪರಿಗಣಿಸಿವೆ ಎಂದರು.

ಇದೇ ಸಂದರ್ಭದಲ್ಲಿ ರೈತ ಜಾನಪದ, ಮಹಿಳಾ ಜಾನಪದ, ಜನಪದರ ಜಗುಲಿ ಮತ್ತಿತರೇ ಗೋಷ್ಠಿಗಳನ್ನು ಹಮ್ಮಿಕೊಂಡು ಜನಪದ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್, ಪ್ರಧಾನ ಕಾರ್ಯದರ್ಶಿ ಸವಿತಾ ಸತ್ಯನಾರಾಯಣ, ಜಿಲ್ಲಾ ಸಂಚಾಲಕಿ ಗಾಯಿತ್ರಮ್ಮ, ಉಪಾಧ್ಯಕ್ಷ ವಿನಿತ್ ಕುಮಾರ್, ಆಶ್ರಯ ಫೌಂಡೇಶನ್ ಸಂಸ್ಥಾಪಕಿ ವರ್ಷ ಉಪಸ್ಥಿತರಿದ್ದರು.

District level 6th Folklore Conference to be held on April 26

Share

Leave a comment

Leave a Reply

Your email address will not be published. Required fields are marked *

Don't Miss

ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯೊಂದು ದರ್ಶನ ನೀಡುವ ಮೂಲಕ ಅಚ್ಚರಿ ಮತ್ತು ಸಂತಸ ಮೂಡಿಸಿದೆ. ಕೆಮ್ಮಣ್ಣುಗುಂಡಿಯ ಪ್ರಸಿದ್ದ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ಈ ಹುಲಿ...

ಇಟ್ಟುಕೊಂಡವರು ಮತ್ತು ಕಟ್ಟಿಕೊಂಡವರ ಕಾದಾಟ ! – ವೀರಶೈವ ಲಿಂಗಾಯತ ಸಂಘ ಬೀದಿಗೆ ತಂದಿರುವುದೇಕೆ ?

ಚಿಕ್ಕಮಗಳೂರು: ಪ್ರಪಂಚದಲ್ಲಿ ಯಾರು ಸಾಧನೆ ಮಾಡದ ಕೆಲಸ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ತೆಲುತ್ತಿರುವವರು ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಡಬಲ್,ಡಬಲ್ ಆಹ್ವಾನ ಪತ್ರಿಕೆ ಮುದ್ರಣವಾಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ,ವಿರೋಧ ಚರ್ಚೆ ಕೂಡ ನಡೆದು...

Related Articles

ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ

ಚಿಕ್ಕಮಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ಅಪೂರ್ವ...

ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಗಾಯ

ಮೂಡಿಗೆರೆ:  ಇಲ್ಲಿನ ಕಾಡು ಪ್ರದೇಶದಲ್ಲಿ ಇಂದು ಬೆಳಗ್ಗೆ ಸುಮಾರು 9 ಗಂಟೆ ವೇಳೆ ಕಾಡಾನೆ ದಾಳಿ...

ಅರಣ್ಯ ಸಮಸ್ಯೆ ಬಗ್ಗೆ ಏ.28ಕ್ಕೆ ಪ್ರವಾಸಿಮಂದಿರದಲ್ಲಿ ಚರ್ಚೆ

ಚಿಕ್ಕಮಗಳೂರು: ಡೀಮ್ಡ್ ಫಾರೆಸ್ಟ್ ಮತ್ತು ಅರಣ್ಯ ಸಮಸ್ಯೆಗಳನ್ನು ನಿವಾರಿಸಲು ಎಸ್‌ಐಟಿ ರಚಿಸಿ ಸರ್ವೆ ಆರಂಭಿಸಿದೆ. ಈ...

ಷೇರುದಾರರಿಗೆ ಅನುಕೂಲಕ್ಕೆ ಆಡಳಿತ ವ್ಯವಸ್ಥೆ ಡಿಜಿಟಲೀಕರಣ

ಚಿಕ್ಕಮಗಳೂರು: ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ವ್ಯವಸ್ಥೆಯನ್ನು ಷೇರುದಾರರಿಗೆ ಅನುಕೂಲ ಆಗುವಂತೆ ಡಿಜಿಟಲೀಕರಣಗೊಳಿಸಲಾಗಿದೆ ಎಂದು...