Home namma chikmagalur chikamagalur ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ
chikamagalurHomeLatest Newsnamma chikmagalur

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ

Share
Share

ಶೃಂಗೇರಿ: ತಾಲೂಕಿನ ಕಿಗ್ಗಾ ಸಮೀಪದ ಯಡದಳ್ಳಿ ಗ್ರಾಮದ ಕೊಚ್ಚಾರಿನಲ್ಲಿರುವ ಐತಿಹಾಸಿಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೈವ ಸನ್ನಿಧಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ ಕಾಣಿಕೆ ಹಣ ಲೂಟಿಯಾಗಿದೆ.

ಏ. 17ರ ರಾತ್ರಿ ಅರ್ಚಕರು ಪೂಜೆ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ಖದೀಮರು, ದೇವಸ್ಥಾನದ ಮುಖ್ಯ ದ್ವಾರ ಹಾಗೂ ಗರ್ಭಗುಡಿಯ ಬೀಗವನ್ನು ಒಡೆದು ಒಳನುಗ್ಗಿದ್ದಾರೆ.

ದೇವಸ್ಥಾನದ ಗರ್ಭಗುಡಿಯಲ್ಲಿದ್ದ ಸುಮಾರು 1,50,000 ರೂಪಾಯಿ ಮೌಲ್ಯದ ಬೆಳ್ಳಿಯ ಪ್ರಭಾವಳಿ, 30,000 ರೂಪಾಯಿ ಬೆಲೆಯ ಬೆಳ್ಳಿಯ ಚೊಂಬು, 15,000 ರೂಪಾಯಿ ಮೌಲ್ಯದ ಬೆಳ್ಳಿಯ ತಟ್ಟೆ, ಸುಮಾರು 25,000 ರೂಪಾಯಿ ಬೆಲೆಬಾಳುವ ಎರಡು ಬೆಳ್ಳಿಯ ಕೌಳಿಗೆ ಹಾಗೂ ಸೌಟುಗಳನ್ನು ಕಳ್ಳರು ದೋಚಿದ್ದಾರೆ.

ಇಷ್ಟೇ ಅಲ್ಲದೆ, ಭಕ್ತರು ಸಮರ್ಪಿಸಿದ್ದ ಸುಮಾರು 20,000 ರೂಪಾಯಿ ನಗದು ಹೊಂದಿದ್ದ ಕಾಣಿಕೆ ಪೆಟ್ಟಿಗೆಯನ್ನೂ ಸಹ ಖದೀಮರು ಹೊತ್ತೊಯ್ದಿದ್ದು, ಒಟ್ಟು 2,40,000 ರೂಪಾಯಿ ಮೌಲ್ಯದ ಸ್ವತ್ತು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.

ಮರುದಿನ ಬೆಳಗ್ಗೆ ಎಂದಿನಂತೆ ಪೂಜೆಗಾಗಿ ಅರ್ಚಕ ಶೃಂಗೇಶ್ವರ ಭಟ್ ಅವರು ದೇವಸ್ಥಾನಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಕೂಡಲೇ ಸುಧೀಂದ್ರ ಬಿ ಎಸ್ ಎಂಬುವವರು ಈ ಬಗ್ಗೆ ಶೃಂಗೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ. ಪವಿತ್ರ ಕ್ಷೇತ್ರದಲ್ಲಿ ನಡೆದ ಈ ಕಳ್ಳತನದ ಘಟನೆಯಿಂದ ಭಕ್ತರಲ್ಲಿ ಆತಂಕ ಮನೆಮಾಡಿದೆ.

Theft at Sri Lakshmi Narasimha Swamy Temple

Share

Leave a comment

Leave a Reply

Your email address will not be published. Required fields are marked *

Don't Miss

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ ನ್ಯಾಯಾಲಯವು ಮಹತ್ವದ ಶಿಕ್ಷೆ ಪ್ರಕಟಿಸಿದೆ. ಹಣದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ...

Related Articles

ಮೆಡಿಕಲ್ ಅಂಗಡಿಗೆ ಕನ್ನ : ₹2.66 ಲಕ್ಷ ನಗದು ದೋಚಿ ಪರಾರಿ

ಚಿಕ್ಕಮಗಳೂರು;  ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ತಡರಾತ್ರಿ ನಡೆದ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ...

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್...

ಸಾಲ ತೀರಿಸಲಾಗದೆ ರೈತ ಬೆಂಕಿ ಹಚ್ಚಿಕೊಂಡು ಸಾವು

ಕಡೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು...