ಕನ್ನಡ,ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವ ಬದಲಿಗೆ ಕನ್ನಡ, ಕನ್ನಡ ನಮಗೆ ದೇಣಿಗೆ ನಿಮಗೆ ಬೇಕಾದ ಪ್ರಶಸ್ತಿಗಳು ಎನ್ನುವೇ ಅಂತಕ್ಕೆ ಸಾಹಿತ್ಯ ಪರಿಷತ್ ಗೆ ವಕ್ಕರಿಸಿರುವ ಕೆಲವರಿಗೆ ಊಟ,ತಿಂಡಿ,ನಿದ್ದೆ ಬರುವುದು ಕಡು ಕಷ್ಟ.
ರಾಜ್ಯದಲ್ಲಿ ಸಾಹಿತ್ಯ ಪರಿಷತ್ ನ ಚುಕ್ಕಾಣೆ ಹಿಡಿದಿದ್ದ ಮಹೇಶ್ ಜೋಷಿ ಪಳವಳಿಕೆಗಳಿಗೆ ನಡಕ ಶುರುವಾಗಿರ ಬಹುದು. ಮಹೇಶ್ ಜೋಷಿ ಮಾಡಿದ ಲಪಡದಿಂದ ಆರ್ಥಿಕ ಸಂಕಷ್ಟದ ಜೊತೆಗೆ ಪರಿಷತ್ ಗೆ ಇದ್ದ ಗೌರವಕ್ಕೆ ಧಕ್ಕೆ ಉಂಟಾಗಿದ್ದು ಈತನನ್ನು ಅನುಸರಿಸುತ್ತಿದ್ದ ಕೆಲವು ಜಿಲ್ಲೆಯ ಅಧ್ಯಕ್ಷರಗಳು ಚುನಾವಣೆ ನಡೆಸುವವರೆಗೆ ತಮ್ಮ ಅವಧಿ ಮುಗಿದರು ಅಧಿಕಾರದಲ್ಲಿ ಮುಂದುವರೆಯಲು ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದ್ದರು ಎನ್ನಲಾಗುತ್ತಿದೆ.
ಇಂದಿನಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಕ,ಸಾ,ಪ ರಾಜ್ಯ ಆಡಳಿತಾಧಿಕಾರಿ ದಯಾನಂದ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆಡಳಿತಾಧಿಕಾರಿಗಳು ಸಾಹಿತ್ಯ ಪರಿಷತ್ ನ ಚಟುವಟಿಕೆಗಳನ್ನು ನಡೆಸಿ ಕೊಂಡು ಹೋಗಲಿದ್ದಾರೆ.
ಅಂತೂ, ಇಂತೂ ಸಾಹಿತ್ಯ ಪರಿಷತ್ ನಲ್ಲೂ ನುಂಗುವ ಕಲೆ ಕಲಿಸಿದ ಮಹೇಶ್ ಜೋಷಿ ಶಿಷ್ಯರು ಸಾಹಿತ್ಯ ರತ್ನ ಸಾಹಿತ್ಯ ಸಿರಿ ,ಸಾಹಿತ್ಯ ಚಿಂತಕ ಮತ್ತು ಸಾಹಿತ್ಯ ಸಾಧಕ,ಸಾಹಿತ್ಯ ಶಿರೋಮಣಿ, ಮತ್ತು ಸಾಹಿತ್ಯ ದೇಣಿಗೆ ಎಂಬ ಬಿರುದು ಬಾಹುಲಿಗಳನ್ನು ನೀಡುವ ಕಲೆಗಾರಿಕೆಯಿಂದ ಅಸಮಾಧಾನಿತರಿಗೆ ಸಮಾಧಾನ ಮಾಡುವುದನ್ನು ಕರಗತ ಮಾಡಿಕೊಂಡಿದ್ದರು
ಪದಾಧಿಕಾರಿಗಳು ನೇಮಕ ತನ್ನ ಮೂಗಿನ ನೇರಕ್ಕೆ ವಾರಕ್ಕೊಮ್ಮೆ ಬದಲಾಯಿಸಿದ ಉದಾಹರಣೆಗಳು ನೂರಾರು.ತಪ್ಪನ್ನು ತಪ್ಪು ಎಂದು ಹೇಳುವ ಬದಲಿಗೆ ಜೈ ಹೂಜೂರ್ ಎಂದು ಸಾಹಿತ್ಯ ಪರಿಷತ್ ನ್ನು ಲಾಭಿಗಳ ಆಡ್ಡೆ ಮಾಡಿದವರು ಮತ್ತೊಂದು ಹೊಸ ವೇಷದಲ್ಲಿ ವಕ್ಕರಿಸಿ ಹಿಡಿತವನ್ನು ಸಾಧಿಸಲು ಮತ್ತೆ ಓಡಾಡುತ್ತಿದ್ದಾರೆ.
ರಾಜ್ಯಕ್ಕೆ ನಿವೃತ್ತ ಐಎಎಸ್ ಸೋಮಶೇಖರ್ ಹಣ ಮತ್ತು ಜಾತಿ ತೈಲವನ್ನು ಹಿಡಿದು ಸಾಹಿತ್ಯ ಪರಿಷತ್ ಗುಡಿಸಿ ಹಾಕುವ ತಯಾರಿ ನಡೆದಿದೆ.ಇನ್ನೊಬ್ಬ ಅಭ್ಯರ್ಥಿಯಾಗಲು ಬಾಳಕುಂದ್ರೆ ಕುಟುಂಬದ ಕುಡಿ ಕೂಡ ಹಣ ಬಲದಿಂದ ಚುನಾವಣೆಗೆ ಸಿದ್ದತೆ ನಡೆಸಿದ್ದಾರೆ
ಜಾಣಗೆರೆ ವೆಂಕಟರಾಮಯ್ಯ ಸಾಹಿತಿ,ಕನ್ನಡ ಸಂಘಟನೆಗಳ ಜನಕ ಸದಾಕಾಲವೂ ಕನ್ನಡ, ಕನ್ನಡ ಎಂದು ಕನ್ನಡದ ಧ್ವನಿ ಅಖಾಡಕ್ಕಿಳಿದು ಘರ್ಜನೆ ಮಾಡುತ್ತಿದ್ದಾರೆ.ಜಾತಿ ಭೂತ ಹಿಡಿದ ವಿಷ ಜಂತುಗಳು ವಿಲ,ವಿಲ ಎಂದು ಒದ್ದಾಡುತ್ತಿವೆ ಜಾಣಗೆರೆ ಪರ ಸಾಹಿತಿಗಳು, ಸಂಘಟನೆಯವರು ಮತ್ತು ಕನ್ನಡ ಪರವಾದ ಮನಸ್ಸುಗಳು ಓಡಾಡುತ್ತಿವೆ.ಸತ್ಯಕ್ಕೆ ಜಯ ಖಚಿತ.ಇಲ್ಲದಿದ್ದರೆ ಮಹೇಶ್ ಜೋಷಿ ಗತಿ ಖಚಿತ ಎನ್ನುತ್ತಿದ್ದಾರೆ.
Administrator Appointed to Manage Kannada Sahitya Parishat Units
Leave a comment