Home namma chikmagalur chikamagalur ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ 80 ರೈತರಿಗೆ ವಂಚನೆ
chikamagalurCrime NewsHomeLatest Newsnamma chikmagalur

ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ 80 ರೈತರಿಗೆ ವಂಚನೆ

Share
Share
ಕಡೂರು : ಸರಕಾರದ ವಿವಿಧ ಇಲಾಖೆಗಳಡಿ ದೊರೆಯುವ ಸಬ್ಸಿಡಿ ಸವಲತ್ತುಗಳನ್ನು ಕೊಡಿಸುವುದಾಗಿ ನಂಬಿಸಿ ೮೦ ಜನ ರೈತರಿಂದ ೧.೩೪ ಕೋಟಿಗೂ ಹೆಚ್ಚು ಹಣವನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಕೆ. ಗಂಗಾಧರಗೌಡ ಎಂಬಾತ ವ್ಯಕ್ತಿಯು ರೈತರಿಂದ ವಂಚಿತ ಆರೋಪಿಯಾಗಿದ್ದು. ಕಳೆದ ೨೦೨೪ರ ಜೂನ್‌ನಲ್ಲಿ ವಿಧಾನಸೌಧದ ಬಳಿಯ ಪರಿಚಯವಾಗಿದ್ದ ಕೆ.ಗಂಗಾಧರಗೌಡ ಎಂಬಾತನು ರೈತರುಗಳಿಗೆ ಸರ್ಕಾರದ ಹೊಸ ಹೊಸ ಸ್ಕೀಮ್ ಗಳಲ್ಲಿ ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಇನ್ನು ಇತರ ಇಲಾಖೆಗಳಿಂದ ಸಬ್ಸಿಡಿ ದರದಲ್ಲಿ ಸವಲತ್ತುಗಳನ್ನು ಕೊಡಿಸುತ್ತೇನೆಂದು, ರೈತರುಗಳು ೫೦ ಸಾವಿರ ಭರಿಸಿದರೆ, ಒಂದು ಟ್ರಾಕ್ಟರ್‌ಗೆ ೩ ಲಕ್ಷ ರೂಗಳ ಸಬ್ಸೀಡಿಯನ್ನು ಕೊಡಿಸುತ್ತೇನೆಂದು ನಂಬಿಸಿದ್ದು, ಇದನ್ನು ನಂಬಿ ಸ್ನೇಹಿತರಾದ ಕಲ್ಲೇಶ್ ಮತ್ತು ಚಂದ್ರಶೇಖರ್ ಮೂರು ಜನರು ಸೇರಿ ಒಟ್ಟು ಸುಮಾರು ೮೦ ಜನ ರೈತರಿಂದ ಪಡೆದಿದ್ದ ಒಟ್ಟು ೧,೩೪,೯೮,೪೦೦ ರೂ. ಹಣವನ್ನು ಗಂಗಾಧರ ಗೌಡಗೆ ಪಾವತಿಸಿದ್ದಾರೆ.
ಹಣ ಸಂದಾಯದ ದಾಖಲಾತಿಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದು ಹಾಗೂ ಇದೇ ರೀತಿ ಗಂಗಾಧರಗೌಡನು ಇತರೆ ರೈತರಿಂದಲೂ ಹಣ ಪಡೆದಿದದ್ದು,  ಇದುವರೆವಿಗೂ ಸರ್ಕಾರದ ಯಾವುದೇ ಸವಲತ್ತುಗಳನ್ನು ಮಾಡಿಸಿಕೊಡದ ಪರಿಣಾಮ ಅನುಮಾನಗೊಂಡು ಪದೇ ಪದೇ ಫೋನ್ ಕರೆ ಮಾಡಿ ವಿಚಾರಿಸಿದಾಗ ಬಜೆಟ್ ಅಧಿವೇಶನ, ಮತ್ತು ಬೆಳಗಾವಿಯ ಅಧಿವೇಶನ ಮುಗಿಯಲಿ, ಸಬ್ಡಿಡಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಕಡತಗಳು ವಿಲೇವಾರಿಗೊಂಡಿದ್ದು, ಶೀಘ್ರದಲ್ಲೇ ಸವಲತ್ತುಗಳು ದೊರೆಯುತ್ತದೆ ಎಂದು ಸಬೂಬು ಉತ್ತರ ಕೊಡುವ ಮೂಲಕ ನಂಬಿಸಿದ್ದಾನೆ.
ಬಳಿಕ ಯಾವುದೇ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ತಾವು ಮೋಸಹೋಗಿರುವುದಾಗಿ ತಿಳಿದು ತಾಲ್ಲೂಕಿನ ವೈ.ಮಲ್ಲಾಪುರ ವಾಸಿ ಎಂ.ಬಿ. ಮಹೇಶ್ವರಪ್ಪ ಕೆ. ಗಂಗಾಧರಗೌಡ ವಿರುದ್ದ ದೂರು ದಾಖಲಿಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
80 farmers cheated by promising subsidy
Share

Leave a comment

Leave a Reply

Your email address will not be published. Required fields are marked *

Don't Miss

ಡಾ.ಮಂಜುನಾಥ್ ಚಿಕ್ಕ‌ಮಗಳೂರು ಡಿಎಚ್ಒ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕ‌ಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಕೆ.ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಹಿಂದೆ ಡಿಎಚ್ ಒ ಆಗಿದ್ದ ಅಶ್ವಥ್ ಬಾಬು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಂತಾನೋತ್ಪತ್ತಿ...

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Related Articles

ಕಳಸದಲ್ಲಿ ಕಾಡುಕೋಣ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಸಮೀಪ ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ...

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ...

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್...