Home namma chikmagalur chikamagalur ಅಡಿಕೆ ವ್ಯಾಪಾರಿಗೆ 22 ಲಕ್ಷ ರೂಪಾಯಿ ಪಂಗನಾಮ
chikamagalurHomeLatest Newsnamma chikmagalur

ಅಡಿಕೆ ವ್ಯಾಪಾರಿಗೆ 22 ಲಕ್ಷ ರೂಪಾಯಿ ಪಂಗನಾಮ

Share
Share

ಕಡೂರು: ಅಡಿಕೆ ವ್ಯಾಪಾರಿಯೊಬ್ಬರಿಗೆ ಬರೋಬ್ಬರಿ 22 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದ ಪೂಜಾರಿ ಮತ್ತು ಆತನ ಮಗ ಸೇರಿ ಹೂತಿಟ್ಟ ಚಿನ್ನದ ಆಮಿಷವೊಡ್ಡಿ  ವಂಚನೆ ಎಸಗಿದ್ದಾರೆ.

ಬಾಣವಾರದ ಗರುಡನಗಿರಿ ಗ್ರಾಮದ ಜುಂಜಪ್ಪ ದೇವಸ್ಥಾನದ ಪೂಜಾರಿ ಸ್ವಾಮಿ ಮತ್ತು ಆತನ ಮಗ ಗಂಗಾಧರ ಈ ಪ್ರಕರಣದ ಆರೋಪಿಗಳು. ಪರಿಚಯಸ್ಥರಾಗಿದ್ದ ಅಡಿಕೆ ವ್ಯಾಪಾರಿ ಹೇಮರಾಜ್ ಅವರಿಗೆ ಫೋನ್ ಮಾಡಿದ್ದ ಪೂಜಾರಿ ಸ್ವಾಮಿ, ದೇವಸ್ಥಾನದ ಪಕ್ಕದಲ್ಲಿ ನಿಧಿ ರೂಪದ 7 ಚಿನ್ನದ ಮಡಿಕೆಗಳು ಸಿಕ್ಕಿವೆ ಎಂದು ನಂಬಿಸಿದ್ದರು.

ಆ ಮಡಿಕೆಗಳಲ್ಲಿ ಒಂದನ್ನು ನಿಮಗೆ ನೀಡುತ್ತೇನೆ, ಅದರಿಂದ ನಿಮ್ಮ ಮನೆ ಸಮೃದ್ಧಿಯಾಗುತ್ತದೆ ಎಂದು ಆಸೆ ತೋರಿಸಿದ್ದರು. ಆರೋಪಿಗಳು ಕಡೂರಿನ ಎಪಿಎಂಸಿ ಮಾರುಕಟ್ಟೆ ಬಳಿ ಹೇಮರಾಜ್ ಅವರನ್ನು ಭೇಟಿಯಾಗಿ, ಮಡಿಕೆಯಲ್ಲಿ ಚಿನ್ನದ ನಾಣ್ಯಗಳಂತಹ ವಸ್ತುಗಳನ್ನು ತೋರಿಸಿ ನಂಬಿಸಿದ್ದರು. ಇದನ್ನು ಎಲ್ಲಿಯೂ ಪರೀಕ್ಷೆ ಮಾಡಿಸಬೇಡಿ ಎಂದು ಎಚ್ಚರಿಕೆ ನೀಡಿ, ಅವರಿಂದ 22 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಒಂದು ಮಡಿಕೆಯನ್ನು ಹಸ್ತಾಂತರಿಸಿದ್ದರು.

ಇಷ್ಟಕ್ಕೇ ಸುಮ್ಮನಾಗದ ತಂದೆ ಮಗ. 20 ದಿನಗಳ ನಂತರ ಮತ್ತೆ ಕರೆ ಮಾಡಿ ಮಡಿಕೆಯಲ್ಲಿ ಹೆಚ್ಚಿನ ಚಿನ್ನವಿದೆ ಎಂದು ಹೇಳಿ ಹೆಚ್ಚುವರಿಯಾಗಿ 3.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಹೇಮರಾಜ್ ಅವರು ಅಕ್ಕಸಾಲಿಗರಲ್ಲಿ ಚಿನ್ನವನ್ನು ಪರೀಕ್ಷಿಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ.

ತಕ್ಷಣವೇ ಎಚ್ಚೆತ್ತ ಸಂತ್ರಸ್ತರು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Areca nut trader fined Rs 22 lakh

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧ ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ’ರಾಷ್ಟ್ರೀಯ ಲೋಕ್ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಗೌ.ಪ್ರಧಾನ ಜಿಲ್ಲಾ...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ ಸಂಚಾರ) ಬಂದ ಕಾರೊಂದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ದುಡುಕುತನದಿಂದ ಡಿಕ್ಕಿ ಹೊಡೆದ ಪರಿಣಾಮ...

Related Articles

ಅಮೃತ್ 2.0 ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

ಚಿಕ್ಕಮಗಳೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಮೃತ್ 2.0 ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ...

ವಿಕಲಚೇತನ ವ್ಯಕ್ತಿಯ ₹8 ಲಕ್ಷ ಬ್ಯಾಂಕ್ ಸಾಲ ಕೇವಲ ₹15,000 ಕ್ಕೆ ಇತ್ಯರ್ಥ

ಚಿಕ್ಕಮಗಳೂರು:  ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ನ್ಯಾಯಾಂಗದ ವಿಶೇಷ...

ಎಟಿಎಂ ಕಾರ್ಡ್ ಬದಲಿಸಿ ₹3.09 ಲಕ್ಷ ವಂಚನೆ

ಕಡೂರು: ಪಟ್ಟಣದ ಜೈನ್ ಟೆಂಪಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸುತ್ತಿದ್ದ ವೇಳೆ...

ಕೆಪಿಟಿಸಿಎಲ್ ಸಿಎಸ್‌ಆರ್ ಅನುದಾನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಣ್ಣಾವಲಿಗೆ ನೆರವು

ಚಿಕ್ಕಮಗಳೂರು: ಸರ್ಕಾರದ ಅನುದಾನದ ಕೊರತೆ ನಡುವೆ ಕೆಪಿಟಿಸಿಎಲ್ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನ...