Home namma chikmagalur chikamagalur ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಸಿಬ್ಬಂದಿಗಳ ಮನವಿ
chikamagalurHomeLatest Newsnamma chikmagalur

ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಸಿಬ್ಬಂದಿಗಳ ಮನವಿ

Share
Share

ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯ ಮಕ್ಕಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಸಿಬ್ಬಂದಿಗಳು ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮಕ್ಕಳ ರಕ್ಷಣಾ ಕಾರ್ಯಕ್ರಮಗಳು ಖಾಯಂ ಸ್ವರೂಪದ್ದಾಗಿದ್ದು, ಮಿಷನ್ ವಾತ್ಸಲ್ಯ ಯೋಜನೆಯನ್ನು ಖಾಯಂಗೊಳಿಸಿ ವೇತನ ಹೆಚ್ಚಳ ಮಾಡಬೇಕು. ಪಶ್ಚಚಿಮ ಬಂಗಾಳ ಮಿಷನ್ ವಾತ್ಸಲ್ಯ ಮಾದರಿಯಲ್ಲಿ ರಜೆ ಸೌಲಭ್ಯ, ೬೦ ವರ್ಷಗಳ ಬರಗೆ ಉದ್ಯೋಗ ಭದ್ರತೆ, ಸಕಾಲದಲ್ಲಿ ವೇತನ ಪಾವತಿ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

೧೪ ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಖಾಯಮಾತಿಗೊಳಿಸಲು ಸೇವಾನಿಯಮಾವಳಿಗಳ ರಚನೆ ಮಾಡುವುದು, ನ್ಯಾಯಾಲಯದ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ, ೧೫ ದಿನಗಳ ಅನಾರೋಗ್ಯ/ ಗಳಿಕೆ ರಜೆ, ಚೈಲ್ಡ್ ಲೈನ್ ಸಿಬ್ಬಂದಿಗಳಿಗೆ ಮತ್ತು ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೊಚಕರಿಗೆ, ಡಿ. ಗ್ರೂಪ್ ನೌಕರರಿಗೆ ಕನಿಷ್ಟ ವೇತನ ಜಾರಿಗೊಳಿಸಬೇಕೆಂದು ಕೋರಿದ್ದಾರೆ.

ವೇತನದಲ್ಲಿ ಕಡಿಮೆ ಮಾಡಿದ ಜಿಎಸ್ ಟಿ ಸೇವಾ ತೆರಿಗೆಯನ್ನು ಹಿಂದಿರುಗಿಸುವುದು, ಮಹಿಳಾ ಸಿಬ್ಬಂದಿಗೆ ವೇತನ ಸಹಿತ ಹೆರಿಗೆ ರಜೆ, ಮುಟ್ಟಿನ ರಜೆ ನೀಡುವುದು, ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ೧೦ ಲಕ್ಷ ಅಪಘಾತ ಚಿಕಿತ್ಸೆ ವೆಚ್ಚ ಮತ್ತು ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮಂಜುನಾಥ್,  ಲೋಕೇಶ್, ಚೆಲುವರಾಜು, ರೇವಣಸಿದ್ದಪ್ಪ, ರೇಣುಕ, ಅಮಿತ, ದಾಕ್ಷಾಯಿಣಿ, ಧರ್ಮಾವತಿ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಬಾಲಕ ಬಾಲಕಿಯರ ಬಾನ ಮಂದಿರದ ಸಿಬ್ಬಂದಿ, ಸಹಾಯವಾಣಿ ಸಿಬ್ಬಂದಿ ಹಾಗೂ ದತ್ತು ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.

Child protection workers appeal for child protection

 

Share

Leave a comment

Leave a Reply

Your email address will not be published. Required fields are marked *

Don't Miss

ಫೆ.೯ ರಿಂದ ಮೂರು ದಿನ ಶರಣ ಸಾಹಿತ್ಯ ಸಮಾವೇಶ

ಚಿಕ್ಕಮಗಳೂರು: ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿಗೆ ೪೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಫೆ.೯, ೧೦ ಮತ್ತು ೧೧ ರಂದು ಮೂರು ದಿನ ಸಂವಾದ, ವಿಚಾರಗೋಷ್ಠಿ, ಶರಣ...

ಸಿಡಿಎ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಚಿಕ್ಕಮಗಳೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ನಿಷ್ಠೆ, ಶ್ರದ್ಧೆಯಿಂದ ಕಾಯಕ ಮಾಡುವವರಿಗೆ ಉತ್ತಮ ಅವಕಾಶಗಳು ಲಭಿಸುತ್ತವೆ ಎಂಬುದಕ್ಕೆ ಹೆಚ್.ಪಿ ಮಂಜೇಗೌಡ ಸ್ಪಷ್ಟ ನಿದರ್ಶನ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು. ಅವರು...

Related Articles

ಮಾ. 5ರಂದು ಗುತ್ತಿಗೆದಾರಿಂದ ಬೆಂಗಳೂರಿನಲ್ಲಿ ಸಾಂಕೇತಿಕ ಧರಣಿ

ಚಿಕ್ಕಮಗಳೂರು: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜೊತೆಗೆ ಬಾಕಿ ಇರುವ...

ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಹಾರಾಟ

ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ...

ಬಾಳೆಹೊನ್ನೂರಿನ ವ್ಯಕ್ತಿಗೆ ಆನ್‌ಲೈನ್ ಫಿಶಿಂಗ್ ಫ್ರಾಡ್

ಚಿಕ್ಕಮಗಳೂರು: ಕಸ್ಟಮರ್‌ಕೇರ್‌ನಿಂದ ದೂರವಾಣಿ ಕರೆಮಾಡಿರುವ ವ್ಯಕ್ತಿ ಬಾಳೆಹೊನ್ನೂರು ವ್ಯಕ್ತಿಯೊಬ್ಬರಿಗೆ ೧,೯೭,೮೪೧ ರೂ.ಗಳನ್ನು ವಂಚಿಸಿದ್ದಾರೆ. ಬಾಳೆಹೊನ್ನೂರು ಠಾಣೆ...

ಪ್ರತ್ಯೇಕ ಪ್ರಕರಣಗಳಲ್ಲಿ 5.20 ಲಕ್ಷ ರೂ. ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಆಭರಣ ಸೇರಿದಂತೆ...