Home namma chikmagalur chikamagalur ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಪತ್ತೆ
chikamagalurHomeLatest Newsnamma chikmagalur

ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಪತ್ತೆ

Share
Share

ಚಿಕ್ಕಮಗಳೂರು: ಕಡೂರು ಶಾಸಕರ ಪಿಎ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿದ್ದ ಸರ್ಕಾರಿ ನೌಕರ ಇಂದು  ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲು ಹೇಳಿಕೊಂಡರು.

ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್. ಆನಂದ್ ಅವರ ಆಪ್ತ ಸಹಾಯಕ (ಪಿಎ) ಸೇರಿದಂತೆ ನಾಲ್ವರಿಂದ ಹಣಕ್ಕಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಸಾಂಖ್ಯಿಕ ನಿರೀಕ್ಷಕ ಅಧಿಕಾರಿ ಇಕ್ಸಾಲ್ ಇಂದು ದಿಢೀರ್ ಜಿಲ್ಲಾಧಿಕಾರಿಗಳ ಭೇಟಿ ಮಾಡಿದರು.

ಇಕ್ಸಾಲ್ ಅವರು ಬುಧವಾರವೇ ಚಿಕ್ಕಮಗಳೂರು ನಗರದ ವಿಜಯಪುರದ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಅವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.

ಕಡೂರು ತಾಲೂಕು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಇಕ್ಸಾಲ್, ಶಾಸಕರ ಪಿಎ ಮಂಜುನಾಥ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಲೇಶ್ ಮತ್ತು ಕಡೂರು ತಹಶೀಲ್ದಾರ್ ಪೂರ್ಣಿಮಾ ಅವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ನಾಲ್ವರು ಪ್ರತಿ ತಿಂಗಳು ೨೫,೦೦೦ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಇಕ್ಸಾಲ್, ಇದರಿಂದ ಬೇಸತ್ತು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಡೂರು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದುಸಂಜೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಇಕ್ಬಾಲ್ ಜಿಲ್ಲಾಧಿಕಾರಿ ಎಂ.ಎಲ್‌ನಾಗರಾಜ್‌ರವರ ಹತ್ತಿರ ಡೆತ್ ನೋಟ್ ಬರೆದ ಕಾರಣತಿಳಿಸಿದರು. ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು  ಇವತ್ತು ಬಂದಿದ್ದೀಯಾ ಇಷ್ಟು ದಿನ ಯಾಕೆ ಬಂದಿರಲಿಲ್ಲ ವಾರ ರಜೆ ತಗೋ, ಮೈಂಡ್ ಫ್ರೀ ಮಾಡ್ಕೊಂಡ್ ಕೆಲಸಕ್ಕೆ ಹೋಗು ಯಾರು ಏನೇ ಹೇಳಿದ್ರೂ ನಕಲಿ ಕೆಲಸ ಮಾಡಬೇಡ. ತಹಶೀಲ್ದಾರ್ ಜೊತೆ ನಾನು ಮಾತಾಡ್ತೀನಿ, ಡೋಂಟ್ ವರಿ ನಾಳೆಯಿಂದ ಕೆಲಸಕ್ಕೆ ಹೋಗು ಎಂ ಅಭಯ ನೀಡಿದರು. ಕಾಲಿಗೆ ಬೀಳಲು ಹೋದ ಇಕ್ಬಾಲ್‌ರಿಗೆ ಬುದ್ದಿ ಹೇಳಿ ಕಳುಹಿಸಿದರು.

Government employee who went missing after writing a death note found

 

 

Share

Leave a comment

Leave a Reply

Your email address will not be published. Required fields are marked *

Don't Miss

ಸಾವಿನಲ್ಲೂ ಸಾರ್ಥಕತೆ ಮೆರೆದ ಆಟೋಚಾಲಕ ಮಂಜುನಾಥ್

ಕೊಪ್ಪ : ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಅಟೋಚಾಲಕರೊಬ್ಬರು ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರ ಕುಟುಂಬದ ನಿರ್ಧಾರಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ....

ಫೆ.೯ ರಿಂದ ಮೂರು ದಿನ ಶರಣ ಸಾಹಿತ್ಯ ಸಮಾವೇಶ

ಚಿಕ್ಕಮಗಳೂರು: ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿಗೆ ೪೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಫೆ.೯, ೧೦ ಮತ್ತು ೧೧ ರಂದು ಮೂರು ದಿನ ಸಂವಾದ, ವಿಚಾರಗೋಷ್ಠಿ, ಶರಣ...

Related Articles

ಗುತ್ತಿಗೆದಾರರ ಬಾಕಿ ಹಣ ಮರುಪಾವತಿಗಾಗಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ೩೭ ಸಾವಿರ ಕೋಟಿರೂ. ಹಣ ಮರುಪಾವತಿಗೆ ಒತ್ತಾಯಿಸಿ ಮಾರ್ಚ್ ೦೫...

ಮಾ. 5ರಂದು ಗುತ್ತಿಗೆದಾರಿಂದ ಬೆಂಗಳೂರಿನಲ್ಲಿ ಸಾಂಕೇತಿಕ ಧರಣಿ

ಚಿಕ್ಕಮಗಳೂರು: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜೊತೆಗೆ ಬಾಕಿ ಇರುವ...

ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಹಾರಾಟ

ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ...

ಬಾಳೆಹೊನ್ನೂರಿನ ವ್ಯಕ್ತಿಗೆ ಆನ್‌ಲೈನ್ ಫಿಶಿಂಗ್ ಫ್ರಾಡ್

ಚಿಕ್ಕಮಗಳೂರು: ಕಸ್ಟಮರ್‌ಕೇರ್‌ನಿಂದ ದೂರವಾಣಿ ಕರೆಮಾಡಿರುವ ವ್ಯಕ್ತಿ ಬಾಳೆಹೊನ್ನೂರು ವ್ಯಕ್ತಿಯೊಬ್ಬರಿಗೆ ೧,೯೭,೮೪೧ ರೂ.ಗಳನ್ನು ವಂಚಿಸಿದ್ದಾರೆ. ಬಾಳೆಹೊನ್ನೂರು ಠಾಣೆ...