Home namma chikmagalur chikamagalur ಬಿ.ಜೆ.ಪಿಯಲ್ಲಿ ಭಾಜಾ ಭಜಂತ್ರಿ ನಿರಂಜನ್ ಸಸ್ಪೆಂಡ್ ! ಆನಂದ್ ಗೆ ಅತಿಥ್ಯ ?
chikamagalurHomeLatest Newsnamma chikmagalur

ಬಿ.ಜೆ.ಪಿಯಲ್ಲಿ ಭಾಜಾ ಭಜಂತ್ರಿ ನಿರಂಜನ್ ಸಸ್ಪೆಂಡ್ ! ಆನಂದ್ ಗೆ ಅತಿಥ್ಯ ?

Share
Share

ಚಿಕ್ಕಮಗಳೂರು: ಭಾರತೀಯ ಜನತಾ ಪಕ್ಷದಲ್ಲಿ ಸಸ್ಪೆಂಡ್ ಯುಗ ಪ್ರಾರಂಭವಾಗಿದೆ. ಇನ್ನೂ ಎಷ್ಟು ಜನಕ್ಕೆ ಸಸ್ಪೆಂಡ್ ಸಿಟಿ.ಹೊಡೆಯಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.ಯಾರನ್ನು ಸಸ್ಪೆಂಡ್ಮಾಡಬೇಕು ಯಾರಿಗೆ ಅತಿಥ್ಯ ನೀಡಬೇಕು ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಅತಿಥ್ಯ ನೀಡುವಾಗ ಅವರ ಘನ ಕಾರ್ಯಗಳ ಅವಲೋಕನ ಮಾಡಬೇಕಲ್ಲವೇ?

ನಿರಂಜನ್ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಮತ್ತು ಹಿಂದೆ ವಿಧಾನ ಪರಿಷತ್ ಮತ್ತು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದಾರೆ ಎಂದು ಕಾರಣ ನೀಡಲಾಗಿದೆ. ಹೌದು ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ರಾಜಕೀಯ ಸಲ್ಲದು ಎಂದು ಭಾಷಣ ಬಿಗಿಯುವವರು ಪಕ್ಷ ಹೇಳಿದ ಅಭ್ಯರ್ಥಿ ವಿರುದ್ದ ಸ್ಪರ್ಧೆ ಮಾಡಿರುವುದಕ್ಕೆ ಸಸ್ಪೆಂಡ್ ಭಾಗ್ಯ ಕೊಡಲಾಗಿದೆ.

ಆನಂದ್ ನಗರದ ಸಿ,ಡಿ,ಎ ಅಧ್ಯಕ್ಷನಾಗಿದ್ದವನು ಮಹಿಳೆ ಯೊಂದಿಗೆ ಇರುವಾಗ ಬಿಜೆಪಿಯವರು ತದಕಿ ಹಾದಿ ರಂಪ ಬೀದಿ ರಂಪವಾಗಿ ಎಲ್ಲೆಡೆಯೂ ವಿಡಿಯೋ ಹರಿದಾಡಿದರೂ ಪಕ್ಷಕ್ಕೆ ಮುಜುಗರ ತಂದಿಲ್ಲಾವೇ? ಆದರೆ ಇದುವರೆವಿಗೂ ಆತನ ಸಸ್ಪೆಂಡ್ ಆಗದಿರುವುದರ ರಹಸ್ಯ ಏನಿರಬಹುದು? ಆನಂದ್ ಹಿನ್ನೆಲೆ ಕೆದಕಿದರೆ ಬಹಳಷ್ಟು ವಿಷಯಗಳಿವೆ ಎಂದು ಬಿಜೆಪಿಯಲ್ಲಿ ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಸಿ.ಟಿ.ರವಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ದಿನ ನಿರಂಜನ್ ಗೆ ಸಸ್ಪೆಂಡ್ ಪತ್ರ ತಲುಪಿದರೆ ಆನಂದ್ ಪತ್ರಿಕೆಗಳು ಮತ್ತು ನ್ಯೂಸ್ ಚಾನಲ್ ಗಳು ಸುದ್ದಿ ಪ್ರಸಾರ ಮಾಡಬಾರುದು ಎಂದು ಕೋರ್ಟ್ ಆದೇಶದ ಪ್ರತಿ ಕೊಡಿಸುತ್ತಾರೆ.

ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂದು ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಿದ್ದಾರೆ.ಹೇಳುವುದು ವೇದ ತಿನ್ನುವುದು ಬದನೆಯಕಾಯಿ ಎಂದು ಹಿರಿಯರೊಬ್ಬರು ಹೇಳಿದ ಮಾತು ತಲೆಯಲ್ಲಿ ಹುಳ ಬಿಟ್ಟಂತೆ ಆಗಿದೆ.

Bhaja Bhajantri Niranjan suspended in BJP! Guest for Anand?

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...