Home namma chikmagalur chikamagalur ಧಾರ್ಮಿಕ ಕೇಂದ್ರ ನಿರ್ಮಿಸುವುದೂ ಧರ್ಮದ ಮಹತ್ವದ ಭಾಗ
chikamagalurHomeLatest Newsnamma chikmagalur

ಧಾರ್ಮಿಕ ಕೇಂದ್ರ ನಿರ್ಮಿಸುವುದೂ ಧರ್ಮದ ಮಹತ್ವದ ಭಾಗ

Share
Share

ಚಿಕ್ಕಮಗಳೂರು: ದೇವಸ್ಥಾನಗಳ ನಿರ್ಮಾಣದ ಜೊತೆಗೆ ಧಾರ್ಮಿಕ ಕೇಂದ್ರಗಳನ್ನೂ ನಿರ್ಮಿಸುವುದು ಧರ್ಮದ ಮಹತ್ವದ ಭಾಗವಾಗುತ್ತದೆ ಎಂದು ಮೈಸೂರು-ಕೊಡಗು ಸಂಸದರು ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದರು.

ಭಾನುವಾರ ಬೆಳಿಗ್ಗೆ ಬೆಳವಾಡಿಯ ಯೋಗಕ್ಷೇಮ ಯೋಗ ಸಾಧನಾ ಧಾಮದ ಆಶ್ರಯದಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಿರ್ಮಿಸಿರುವ ಸಾಧನ ಧಾಮ, ಸೂರ್ಯಮಂದಿರ ಹಾಗೂ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಕೌಶಲ್ಯಾಭಿವೃದ್ಧಿ, ಸಮಾಜ ಸೇವೆಯಂತಹ ಕೆಲಸಗಳಿಗೆ ಪ್ರೋತ್ಸಾಹ ಕೊಡದೇ ಇದ್ದಲ್ಲಿ ವಿದ್ಯಾಭ್ಯಾಸದಲ್ಲಿ ವಿಫಲರಾಗುತ್ತೇವೆ. ಅದೇ ರೀತಿ ಧಾರ್ಮಿಕ ಕೇಂದ್ರಗಳ ಮೂಲಕ ಚಟುವಟಿಕೆಗಳನ್ನು ಮಾಡಿದರೆ ಉತ್ತಮ ಹೋರಾಟ ಆಗುತ್ತದೆ ಎಂದರು.

ಪ್ರತಿದಿನ ಸೂರ್ಯದೇವನನ್ನು ಆರಾಧಿಸಬೇಕು ಎನ್ನುವ ಪದ್ಧತಿ ನಮ್ಮಲ್ಲಿದೆ. ಭಾರತೀಯ ಧರ್ಮದ ಮಾರ್ಗವು ಸೂರ್ಯದೇವನಿಂದಲೇ ಬರುವಂತಹದ್ದು, ಬದುಕಿನ ಅರಿವಿನ ಜ್ಞಾನ ಬೇಕಿದೆ. ಅದಕ್ಕಾಗಿ ಸೂರ್ಯನನ್ನು ಪ್ರತಿನಿತ್ಯ ನೆನಪಿಸಿಕೊಳ್ಳಬೇಕು ಎಂದರು.

ಆಧುನಿಕ ಯೋಗವು ಮೈಸೂರು ಸಂಸ್ಥಾನ ಹಾಗೂ ಕನ್ನಡಿಗರಿಂದಲೇ ಆರಂಭವಾಗಿದೆ. ಇಂದು ವಿಶ್ವಮಟ್ಟದಲ್ಲಿ ಅದು ಬಳಸುವಂತಾಗಿದೆ. ಯೋಗವನ್ನು ಸಾತ್ವಿಕ ಶಕ್ತಿಯಾಗಿ ವಿಶ್ವಸಂಸ್ಥೆ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಾಗಿ ಭಾರತವೇ ಘೋಷಣೆ ಮಾಡಿಸಿರುವುದು ಸಂತಸ ತರುವಂತಹದ್ದು. ಯೋಗದ ರಕ್ಷಣಾ ಕೇಂದ್ರಗಳನ್ನು ಆರಂಭಿಸಬೇಕಿದೆ. ಯೋಗದ ತತ್ವ ಶಾಸ್ತ್ರಗಳನ್ನು ಅಳವಡಿಸುವ ಪ್ರಯತ್ನಗಳು ಆಗಬೇಕಿದೆ ಎಂದರು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಶ್ರೀ ತತ್ವ ನಿಧಿಯಲ್ಲಿ ೧೦೮ ಆಸನಗಳನ್ನು ದಾಖಲು ಮಾಡಿದ್ದಾರೆ. ನಂತರ ಅನೇಕ ಯೋಗ ತಜ್ಞರು ಅದರಲ್ಲಿ ಅಡಕವಾಗಿರುವ ಆಸನಗಳ ಬಗ್ಗೆ ತಿಳುವಳಿಕೆ ಪಡೆದು ಆಸನಗಳನ್ನು ಅಭ್ಯಾಸ ಮಾಡಿದರು. ಅದರಲ್ಲಿ ಟಿ.ಕೃಷ್ಣಮಾಚಾರಿ ಎಂಬುವವರು ಒಬ್ಬರು. ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಪ್ರಾರಂಭಿಸಿದ ಬನಾರಸ್ ಹಿಂದೂ ಯೂನಿವರ್ಸಿಟಿಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಅರಸರು ಕುಲಪತಿಯಾಗಿ ನೇಮಕಗೊಂಡ ನಂತರ ಕೃಷ್ಣಮಾಚಾರಿ ಅವರ ಮೂಲಕ ಮೈಸೂರು ಸಂಸ್ಥಾನಕ್ಕೂ ಯೋಗಾಭ್ಯಾಸವನ್ನು ಲಭ್ಯವಾಗಿಸಿದರು ಎಂದರು.

ಗೋರಕ್ಷಣೆ ಹೋರಾಟದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿರುವುದು ಅತಿ ಅವಶ್ಯ. ಕೆಲವರಿಗೆ ಇದು ಒಂದು ತಮಾಷೆ ವಿಚಾರ ಎನ್ನುವಂತಾಗಿದೆ. ಪ್ರಾಚೀನ ಕಾಲದಿಂದಲೂ ಗೋವುಗಳನ್ನು ಮನುಷ್ಯನ ದೃಷ್ಟಿಕೋನದಿಂದ ನೋಡುತ್ತಿದ್ದೆವು. ಈಗಲೂ ಹಾಗೆಯೇ ಮುಂದುವರಿದಿದೆ. ಭಾರತದ ಎಲ್ಲಾ ಪುರಾಣಗಳು, ಮಹಾಭಾರತ ಸೇರಿದಂತೆ ಯಾವುದೇ ಗ್ರಂಥದಲ್ಲಿ ಗೋವಿನ ಪಾತ್ರ ಮಹತ್ವದ್ದಿದೆ. ಹಾಗಾಗಿ ನಾವದನ್ನು ಪೂಜಿಸುತ್ತೇವೆ ಎಂದರು.

ಬೆಳವಾಡಿ ಗ್ರಾಮಕ್ಕೂ ಮೈಸೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಇಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಬದಲಾವಣೆಯಾದ ಬಳಿಕ ಧಾರ್ಮಿಕ ಸಂರಕ್ಷಣೆ ಮಾಡಬೇಕೆಂದು ಶೃಂಗೇರಿ ಮಠಕ್ಕೆ ಬೆಳವಾಡಿ ಗ್ರಾಮವನ್ನು ದತ್ತು ನೀಡಲಾಗಿತ್ತು ಎಂದರು.

ಖ್ಯಾತ ಹೋಮಿಯೋಪತಿ ತಜ್ಞ ನಾಡೋಜ ಡಾ. ಬಿ.ಟಿ.ರುದ್ರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ನಿರ್ವಹಣೆ ಬಹಳ ಸುಲಭ; ಆದರೆ ರೋಗ ನಿರ್ವಹಣೆ ಕಷ್ಟ. ಇಡೀ ಪ್ರಪಂಚ ಇಂದು ರೋಗ ನಿರ್ವಹಣೆ ಬಗ್ಗೆ ಮಾತನಾಡುತ್ತಿದೆ. ಆರೋಗ್ಯ ನಿರ್ವಹಣೆ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ನೀವು ಧನವಂತರಾಗದ ಹೊರತು ಧನ್ವಂತರಿಯ ದಯೆ ದೊರಕದು ಎನ್ನುವ ಸ್ಥಿತಿಗೆ ಭಾರತ ಬಂದು ತಲುಪಿದೆ ಎಂದರು.

ಹೆಚ್ಚಿನ ಹಣಕಾಸಿನ ತೊಂದರೆ ಇಲ್ಲದೆ ಆರೋಗ್ಯ ನಿರ್ವಹಣೆಯನ್ನು ಹೋಮಿಯೋಪತಿ ಹೇಳುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸಿಗುತ್ತದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಂಘಕ್ಕೆ ಇದು ಶತಾಬ್ಧಿ ವರ್ಷ, ಅದು ಸಮಾಜದಲ್ಲಿ ಕುಟುಂಬ, ಸಂಸ್ಕೃತಿ ಮತ್ತು ಸಂಬಂಧವನ್ನು ಗಟ್ಟಿಗೊಳಿಸುವುದು. ಹಿಂದೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು, ಮತ್ತು ಅಸ್ಪೃಶ್ಯತೆ ಹೋಗಲಾಡಿಸುವಂತಹ ಪಂಚ ಪರಿವರ್ತನೆಯನ್ನು ಬಯಸಿದೆ ಎಂದರು.

ಉತ್ತರ ಕಾಶಿಯ ನಿರಂಜನಿ ಅಖಾಡದ ಯಮುನೋತ್ರಿಯ ನಾಗಾಸಾಧು ಶ್ರೀ ದಿಗಂಬರ ಕೃಷ್ಣಗಿರಿ ಮಹಾರಾಜ್ ಆಶಿರ್ವಚನ ನೀಡಿ, ಇದು ಯೋಗ ಸಾಧನೆಗೆ ಮಾತ್ರ ಸೀಮಿತವಲ್ಲದೆ, ಇದೊಂದು ಸನಾತನ ಧಾಮವೂ ಆಗಿದೆ ಎಂದರು.

ಮುಂಬೈನ ಬಡೇ ಉದಾಸಿ ಅಖಾಡದ ನಾಗಾಸಾಧು ಶ್ರೀ ಹರ ಹರ ಮಹಾದೇವ್ ಗುರೂಜಿ, ಕೋಳಗುಂದ ಶ್ರೀ ಕೇದಿಕೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು. ರಂಗಕರ್ಮಿ ಬೆಳವಾಡಿ ಪ್ರಕಾಶ್, ಚಲನಚಿತ್ರ ನಟ ಶಶಿಕುಮಾರ್ ಮಾತನಾಡಿದರು. ಯೋಗಕ್ಷೇಮ ಯೋಗ ಸಾಧನಾ ಧಾಮದ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ವಿರೂಪಾಕ್ಷ ಬೆಳವಾಡಿ ಸಾಧನ ಧಾಮ ರಚನೆಗೊಳ್ಳಲು ಕಾರಣವಾದ ಅಂಶಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಟ್ಟಸ್ಟಿನ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾಧನಾ ಯೋಗ ಧಾಮದ ಸ್ವಯಂ ಸೇವಕರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಸೂರ್ಯ ಮಂದಿರದ ಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮತ್ತಿತರ ಧಾರ್ಮಿಕ ವಿಧಿಗಳು ನೆರವೇರಿದವು.

Building a religious center is an important part of religion

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...