ಚಿಕ್ಕಮಗಳೂರು: ನಗರದ ೧೨ ಬಡಾವಣೆಗಳಲ್ಲಿ ಹಿಂದೂ ಸಮಾಜೋತ್ಸವವನ್ನು ಜ. ೧೮ ರಿಂದ ೩೦ರವರೆಗೆ ನಡೆಸಲು ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡ ತಿಳಿಸಿದರು.
ಅವರು ಇಂದು ಪತ್ರಕಾಗೋಷ್ಠಿಯಲ್ಲಿ ಮಾತನಾಡಿ ಹಿಂದೂ ಸಮಾಜೋತ್ಸವ ಮೊದಲ ಕಾರ್ಯಕ್ರಮ ಜ. ೧೮ ರಂದು ಕೆಂಪನಹಳ್ಳಿ ಬಡಾವಣೆಯ ಗಾಯಿತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಲಿದ್ದು, ಉತ್ಸವದ ಬಗ್ಗೆ ಚಿತ್ರದುರ್ಗದ ಸಾಮಾಜಿಕ ಕಾರ್ಯಕರ್ತ ಪ್ರಭಂಜನ್ ಸೂರ್ಯ ಹಾಗೂ ರುಕ್ಮಿಣಿ ಮಾತನಾಡಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಚಂದ್ರನಗರ, ಶನೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಪ್ರಾರಂಭವಾಗಿ ಕಲ್ಯಾಣ ಮಂಟಪ ತಲುಪಲಿದೆ. ಉಳಿದಂತೆ ಸಮಾಜೋತ್ಸವ ಕಾರ್ಯಕ್ರಮ ಶಾಂತಿ ನಗರ, ವಿಜಯಪುರ, ಬಸವನಹಳ್ಳಿ, ಮಧುವನ ಬಡಾವಣೆ, ಜಯನಗರ, ಕೋಟೆ, ನರಿಗುಡ್ಡನಹಳ್ಳಿ, ಶಂಕರಪುರ, ಗೃಹಮಂಡಳಿ, ಹಿರೇಮಗಳೂರು, ಗವನಹಳ್ಳಿ ಸೇರಿದಂತೆ ೧೧ ಸ್ಥಳಗಳಲ್ಲಿ ಜ. ೩೦ರ ವರೆಗೆ ನೆಡೆಯಲಿದೆ ಎಂದು ಮಾಹಿತಿ ನೀಡಿದರು.
ನಗರದ ಪ್ರತಿ ಬಡಾವಣೆಯಲ್ಲಿ ಹಿಂದೂ ಸಜ್ಜನ ಶಕ್ತಿಯನ್ನು ಸಕ್ರಿಯಗೊಳಿಸಿ ಅವುಗಳ ನಡುವೆ ಸಮನ್ವಯ ಸಾಧಿಸುವುದು ಮತ್ತು ಹಿಂದೂ ಸಮಾಜದ ಸಮಸ್ಯೆಗಳು ಹಾಗೂ ಸಮಾಲುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವುಗಳ ನಿವಾರಣೆ ಕುರಿತು ಒಟ್ಟಾಗಿ ಕೆಲಸ ಮಾಡುವ ವಾತಾವರಣವನ್ನು ಸೃಷ್ಠಿಸುವುದು ಈ ಸಮಾಜೋತ್ಸವದ ಉದ್ದೇಶವಾಗಿದೆ ಎಂದು ಹೇಳಿದರು.
ಹಿಂದೂ ಧರ್ಮ, ಸಂಸ್ಕೃತಿ ಸಮಾಜಕ್ಕೆ ಪೂರಕವಾದ ವಿಷಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದ್ದು, ಸಮಾಜದಲ್ಲಿ ಹಿಂದುತ್ವದ ಭಾವನೆಯನ್ನು ಸ್ಪಷ್ಟಗೊಳಿಸಿ ಬಲಪಡಿಸುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು,
ಹಿಂದೂ ದೇವಾಲಯಗಳು ಭಕ್ತಿ ಹಾಗೂ ಪೂಜಾ ಪದ್ಧತಿಯ ಜೊತೆಗೆ ಜಾಗೃತಿಯ ಕೇಂದ್ರಗಳಾಗಬೇಕು, ವ್ಯಕ್ತಿ, ಕುಟುಂಬ ಸಮಾಜದ ನಡೆವಳಿಕೆಯಲ್ಲಿ ಪರಿವರ್ತನೆಗಳಾದ ಕುಟುಂಬ ಪ್ರಭೋದನ, ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಚಿಂತನೆ, ನಾಗರೀಕ ಶಿಷ್ಟಾಚಾರ ಜೀವನದಲ್ಲಿ ನಿತ್ಯ ಅಳವಡಿಸಿಕೊಳ್ಳುವ ಕುರಿತು ಅರಿವು ಮೂಡಿಸಲು ಸಮಾಜೋತ್ಸವದ ಗುರಿ ಆಗಿದೆ ಎಂದು ಹೇಳಿದರು.
ಮಾತೃಶಕ್ತಿ ಜಾಗರಣ ಹಿನ್ನಲೆಯಲ್ಲಿ ಪ್ರತಿ ಉತ್ಸವದಲ್ಲಿ ಮಹಿಳೆಯೊಬ್ಬರಿಗೆ ಉದ್ದೇಶ ಕುರಿತು ಮಾತನಾಡಲು ಅವಕಾಶ ಕಲ್ಪಿಸಲಾಗಿದೆ, ಜ. ೩೦ ರಂದು ಬಸವನಹಳ್ಳಿಯಲ್ಲಿ ಸಮಾರೋಪ, ಸಮಾರಂಭ ಸಂಜೆ ೫ ಗಂಟೆಗೆ ನೆಡೆಯಲಿದ್ದು. ಸ್ವಯಂ ಸೇವಕ ಸಂಘದ ಸಹಕಾರ್ಯವಾಹಕರಾದ ಮುಕುಂದ ರವರು ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಉತ್ಸವದ ಪ್ರತಿ ಕಾರ್ಯಕ್ರಮದಲ್ಲೂ ವಿವಿಧ ಸಮುದಾಯದ ಪ್ರಮುಖರು ಭಾಗವಹಿಸುವರು, ಪ್ರತಿ ಉತ್ಸವದಲ್ಲೂ ಕನಿಷ್ಠ ೫೦೦ ರಿಂದ ೬೦೦ ಕಾರ್ಯಕರ್ತರು ಭಾಗವಹಿಸಲಿದ್ದು ಸರ್ವರೂ ಹೆಚ್ಚಿ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ ಸಂಚಾಲಕ ರುದ್ರೇಶ್ ಕಡೂರು, ಉಪಾಧ್ಯಕ್ಷ ಹೆಚ್.ಎನ್ ನಂಜೇಗೌಡ, ಸಹಸಂಚಾಲಕ ರಂಗನಾಥ್ ಉಪಸ್ಥಿತರಿದ್ದರು.
Hindu Samajotsava celebrations in the city from today
Leave a comment