Home namma chikmagalur chikamagalur ಸಿದ್ದರಾಮೇಶ್ವರರ ಸಂದೇಶ ತನು-ಮನಗಳಲ್ಲಿ ಅರ್ಪಿಸಿಕೊಳ್ಳಿ
chikamagalurHomeLatest Newsnamma chikmagalur

ಸಿದ್ದರಾಮೇಶ್ವರರ ಸಂದೇಶ ತನು-ಮನಗಳಲ್ಲಿ ಅರ್ಪಿಸಿಕೊಳ್ಳಿ

Share
Share

ಚಿಕ್ಕಮಗಳೂರು: ಬಸವತತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಸಿದ್ದರಾಮೇಶ್ವರರ ಉಪದೇಶ, ಜ್ಞಾನ ಹಾಗೂ ಸಂದೇಶಗಳನ್ನು ಎಲ್ಲರೂ ಅವಲೋಕನ ಮಾಡಿಕೊಳ್ಳುವುದರ ಮೂಲಕ ತ ನು-ಮನಗಳಲ್ಲಿ ಶ್ರದ್ದಪೂರ್ವಕವಾಗಿ ಅರ್ಪಿಸಿಕೊಳ್ಳಬೇಕು ಎಂದು ಬಸವತತ್ವ ಪೀಠದ ಶ್ರೀ ಡಾ|| ಬಸವ ಮ ರುಳಸಿದ್ಧ ಸ್ವಾಮೀಜಿ ಹೇಳಿದರು.

ನಗರದ ದೊಡ್ಡಕುರುಬರಹಳ್ಳಿ ಸಮೀಪದ ಶ್ರೀ ಬಸವ ಮಂದಿರದಲ್ಲಿ ಮಕರ ಸಂಕ್ರಾಂತಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಆಯೋಜಿಸಿದ್ಧ ಗಣಪರ್ವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.

ಸಿದ್ದರಾಮೇಶ್ವರರು ಸಮಾನತೆಯ ಕಾರುಡಿಗ. ಆ ತತ್ವದಡಿಯಲ್ಲಿ ಮನುಷ್ಯ ಎಲ್ಲರನ್ನು ತಮ್ಮವರೆಂದು ಭಾವಿಸಿ, ಪ್ರತಿ ಕ್ಷಣದಲ್ಲೂ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳುವುದೇ ಸಮಾನತೆ ಅರ್ಥ. ಈ ಹೊರತಾಗಿ ಮನೆ- ಮನಸ್ಸು ನೋಯಿಸಿ ಗಂಗೆ-ತುಂಗಾ ನದಿಯಲ್ಲಿ ಮಿಂದೆಂದರೆ ಪಾಪ ಕಳೆದು, ಪುಣ್ಯಪಾಲು ಲಭಿಸುವುದಿಲ್ಲ ಎಂದು ತಿಳಿಸಿದರು.

ಮಾನವರು ಸಿದ್ದರಾಮೇಶ್ವರರ ಸಮಾನತೆ ವಚನಗಳನ್ನು ಅರ್ಥೈಸಿಕೊಂಡು ಸದ್ವಿಚಾರ, ಸನ್ನಡತೆಯ ಸಂಕಲ್ಪದ ಹಾದಿಯಲ್ಲಿ ಸಾಗಿದರೆ ಮಾತ್ರ ಆ ವ್ಯಕ್ತಿಗೆ ಸಾರ್ಥಕತೆ ಬದುಕು ಗಳಿಸುವ ಜೊತೆಗೆ ಆಚರಣೆಗೆ ನೈಜ ಅರ್ಥ ಮೂಡುವ ಮೂಲಕ ಪಾವನವಾಗುತ್ತಾನೆ ಎಂದು ತಿಳಿಸಿದರು.

ಮಾನವರು ಸದಾಕಾಲ ಒಳಿತನ್ನು ಬಯಸುವುದನ್ನು ರೂಢಿಸಿಕೊಳ್ಳಬೇಕು. ಸ್ವಾರ್ಥ, ಸ್ವಹಿತಸಕ್ತಿಗಾಗಿ ಇತರೆ ಕುಟುಂಬವರನ್ನು ನೋಯಿಸಿ, ಮನೆತನ ಹಾಳು ಮಾಡಿದರೆ ಪಾಪವೆಂಬುದು ಅಂಟಿಕೊಂಡು ದು ರ್ಬಲರಾಗುತ್ತಾನೆ. ಹಾಗಾಗಿ ಸಿದ್ದರಾಮೇಶ್ವರರು ಸದ್ವಿಚಾರಗಳು ಅವಲೋಕನ ಮಾಡಿ ಧರ್ಮದಲ್ಲಿ ಹಾದಿ ಯಲ್ಲಿ ಸಾಗುವುದು ಲೇಸು ಎಂದರು.

ಬಸವ ಮಂದಿರದಲ್ಲಿ ಇಂದು ಭಕ್ತ ಸಮೂಹದಿಂದ ಸುಮಾರು ೫೦ಕ್ಕೂ ಹೆಚ್ಚು ಪ್ರಸಾದ ವ್ಯವಸ್ಥೆ ಕಲ್ಪಿಸ ಲಾಗಿದೆ. ಭಕ್ತಾಧಿಗಳು ಪ್ರಸಾದವನ್ನು ವ್ಯರ್ಥಗೊಳಿಸದೇ ಸೇವಿಸುವಷ್ಟು ಬಳಸಿಕೊಳ್ಳಬೇಕು. ಅನ್ನಪ್ರಸಾದ ದೇ ವರಿಗೆ ಸಮಾನ. ಆ ಅನ್ನದೇವಿಗೆ ಪ್ರತಿಯೊಬ್ಬರು ತಲೆಬಾಗಿ ನಡೆಯುವುದು ಕರ್ತವ್ಯ ಎಂದರು.

ಇದೇ ವೇಳೆ ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಮಠದ ಆವರಣದಲ್ಲಿ ವಿಶೇಷ ಅಲಂಕಾರದೊಂದಿ ಗೆ ರಾಗಿರಾಶಿ, ತೆಂಗಿನ ಕಾಯಿ ಪೂಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಠದ ಖಜಾಂಚಿ ಸದಾಶಿವಪ್ಪ, ಟ್ರಸ್ಟಿ ಜಗದೀಶ್‌ಬಾಬು, ಭಕ್ತಾಧಿಗಳಾದ ರಾಜೇಶ್, ಸತೀಶ್, ಅರುಣ್‌ಪ್ರಕಾಶ್, ಜಯಣ್ಣ, ಉಮೇಶ್, ಚಂದ್ರೇಗೌಡ, ಜಗದೀಶ್ ಬಿಳೇಕಲ್ಲು, ಎಂ.ಎಸ್.ನಾಗ ರಾಜ್ ಮತ್ತಿತರರು ಉಪಸ್ಥಿತರಿದ್ದರು.

Take Siddaramaiah’s message into your hearts.

 

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...