Home namma chikmagalur chikamagalur ಜ.18ಕ್ಕ ರಂಗರಾಮ್ ಆರ್ಟ್ಸ್ ಪೌಂಡೇಶನ್‌ನ ವಾರ್ಷಿಕ ಕಲಾ ಉತ್ಸವ
chikamagalurHomeLatest Newsnamma chikmagalur

ಜ.18ಕ್ಕ ರಂಗರಾಮ್ ಆರ್ಟ್ಸ್ ಪೌಂಡೇಶನ್‌ನ ವಾರ್ಷಿಕ ಕಲಾ ಉತ್ಸವ

Share
Oplus_153223168
Share

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರಲ್ಲಿ ಜ. ೧೮ರ ಭಾನುವಾರ ಸಂಜೆ ೫.೩೦ಕ್ಕೆ ವಾರ್ಷಿಕ ಕಲಾ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ಸಂಸ್ಥಾಪಕಿ ಡಾ. ಎಂ.ಎಸ್ ವಿದ್ಯಾಲಕ್ಷ್ಮೀ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ೨೦೧೩ ರಲ್ಲಿ ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ಪ್ರಾರಂಭಿಸಲಾಯಿತು. ವಾರದಲ್ಲಿ ೨ ದಿನ ಬಸವ ಮಂದಿರದಲ್ಲಿ ತರಗತಿಯನ್ನು ನೆಡೆಸಲಾಗುತ್ತಿದೆ ಎಂದರು.

ವಾರ್ಷಿಕ ಕಲಾ ಉತ್ಸವವನ್ನು ಹೆಚ್.ಆರ್ ಸುರೇಶ್ ಅಧ್ಯಕ್ಷತೆಯಲ್ಲಿ ಡಿ.ಹೆಚ್ ನಟರಾಜ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಕಿರಣ್ ಎಚ್.ಎಸ್ ತಂಡದವರಿಂದ ಸುಗಮ ಸಂಗೀತ, ಎಂ.ಎಸ್ ವಿದ್ಯಾಲಕ್ಷ್ಮೀ ಮತ್ತು ಶಿಷ್ಯವೃಂದದವರಿಂದ ಸಮೂಹ ನೃತ್ಯ ಪ್ರರ್ಶನ ಹಾಗೂ ಬೆಂಗಳೂರಿನ ಪ್ರಸಿದ್ಧ ನೂಪುರ್ ಪರ್ಫಾರ್ಮಿಂಗ್ ಆರ್ಟ್ ಸೆಂಟರ್‌ನ ಚೇತನ ಹರಿ ಮತ್ತು ಶಿಷ್ಯರಿಂದ ಕಥಕ್ ಸಂಭ್ರಮವನ್ನು ನೆಡೆಸಲಾಗುತ್ತಿದೆ,

ಮಕ್ಕಳಿಗೆ ಉಪಯುಕ್ತವಾದ ಕಾರ್ಯಕ್ರಮ ಇದಾಗಿದ್ದು. ಕುಟುಂಬ ಸಮೇತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ಡಾ. ಬೆಳವಾಡಿ ಮಂಜುನಾಥ್, ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್ ಕಿರಣ್ ಉಪಸ್ಥಿತರಿದ್ದರು.

Rangaram Arts Foundation’s annual art festival on January 18th

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಪುಸ್ತಕ ಸಂಸ್ಕೃತಿ-ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ

ಚಿಕ್ಕಮಗಳೂರು: ಪುಸ್ತಕ ಸಂಸ್ಕೃತಿ ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ ಎಂದು ನ್ಯೂಸ್ ಕಿಂಗ್ ಆನ್ಲೈನ್ ಪತ್ರಿಕೆಯ ಸಂಪಾದಕ...

ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ ಕಾರು

ಕಳಸ: ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ...

ಸ್ವಾತಂತ್ರ್ಯೋತ್ಸವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ 

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ದಲಿತ...

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ,...