Home ಸಿದ್ದರಾಮ ಜಯಂತಿಯೋ ! – ಶ್ರೀನಿವಾಸನ ಬಹುಪಾರಕ್ ?
HomeLatest Newsnamma chikmagalurTarikere

ಸಿದ್ದರಾಮ ಜಯಂತಿಯೋ ! – ಶ್ರೀನಿವಾಸನ ಬಹುಪಾರಕ್ ?

Share
Share

ಅಜ್ಜಂಪುರ: ನೊಳಂಬ ವೀರಶೈವ ಲಿಂಗಾಯತ ಸಮಾಜದವರು ಪ್ರತಿ ವರ್ಷವೂ ಜನವರಿ 14 ಮತ್ತು 15 ರಂದು ಶ್ರೀ ಸಿದ್ದರಾಮೇಶ್ವರರ ಜಯಂತಿ ಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಚರಿಸುತ್ತಾರೆ. ಇದರಲ್ಲಿ ಲಕ್ಷಂತರ ಜನರು ಸೇರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಮಾಜಿ ಶಾಸಕ ಎಸ್.ಎಂ.ನಾಗರಾಜ್ ರ ಮೂಗಿನ ನೇರಕ್ಕೆ ನಡೆಯುತ್ತದೆ ಇವರ ಕುಟುಂಬದವರು ವೇದಿಕೆ ಮೇಲೆ ಇರುತ್ತಾರೆ.ಇದರಿಂದ ಬಹಳ ಜನರಿಗ ನೋವಾಗಿದೆ.ಇದರ ಬಗ್ಗೆ ಪ್ರತಿಭಟಿಸದೆ ಅವರನ್ನು ಹಾಡಿ ಹೊಗಳಿದವರು ಮತ್ತೊಂದು ಜಯಂತಿ ಮಾಡುವ ನೆಪದಲ್ಲಿ ಶ್ರೀನಿವಾಸ್ ಗೆ ಬೌಪರಾಕ್ ಹೇಳಲು ಸೊಲ್ಲಾಫುರದಲ್ಲಿ ತಯಾರಿ ನಡೆಸಿದ್ದಾರೆ.

ಈ ವರ್ಷ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜಯಂತಿ ನಡೆಯುತ್ತಿದ್ದು ಇದಕ್ಕೆ ಪರ್ಯಾಯವಾಗಿ ಸೊಲ್ಲಾಪುರದಲ್ಲೂ ಜಯಂತಿ ನಡೆಸಲು ಹೊರಟಿರುವವರು ಗ್ಯಾಸ್ ರಾಜಪ್ಪ ಮತ್ತು ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಿವಾನಂದಸ್ವಾಮಿ, ಇಬ್ಬರು ಎಸ್.ಎಂ.ನಾಗರಾಜರ ಕಾಲಾಳುಗಳಾಗಿ ಹೊಗಳಿ, ಹೊಗಳಿ ಇಟ್ಟಿದ್ದವರು. ಸಿದ್ದರಾಮ ಜಯಂತಿ ನೆಪದಲ್ಲಿ ಶ್ರೀನಿವಾಸ್ ಉತ್ಸವ ನಡೆಸಲು ಹಾತೊರಿಯುತ್ತಿದ್ದಾರೆ ಎಂದು ಜನರಾಡಿ ಕೊಳ್ಳತ್ತಿದ್ದಾರೆ.

ಗ್ಯಾಸ್ ಏಜೆನ್ಸಿಗೆ ಸಂಬಂಧಿಸಿದಂತೆ ರಾಜಪ್ಪನನ್ನು ಅಣಿಯಲು ನೋಡಿದಾಗ ಅವರ ಬೆಂಬಲಕ್ಕೆ ನಿಂತವರ ಮರೆತು ನಾಗರಾಜ್ ಜೊತೆಗೆ ಸೇರಿಕೊಂಡವರು ಇನ್ನೂ ಶಿವಾನಂದಸ್ವಾಮಿ ನಾಗರಾಜ್ ಎಂದರೆ ಸಮಾಜದ ಜೀವಾ ಎನ್ನುತ್ತಿದ್ದವರು ಏಕಾಏಕಿ ಈಗ ಸಮಾಜ ಕಟ್ಟುವ ಚಟ ಬಂದಿರುವುದು ಮಾತ್ರ ಶ್ರೀನಿವಾಸ್ ಮೆಚ್ಚಿಸಲು ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಸಮಾಜದವರಿಗೆ ನೋವಾದಾಗ ಕದ್ದು ಮುಚ್ಚಿ ಓಡಾಟ ಮಾಡಿದವರು ಕೇವಲ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಮುದ್ರಿಸಿಲ್ಲ ಎಂದು ನಮ್ಮ ಕರೆಯಲಿಲ್ಲ,ಸನ್ಮಾನ ಮಾಡಲಿಲ್ಲ ಎಂಬ ನೆಪ ಮಾಡಿಕೊಂಡು ಇನ್ನೊಬ್ಬರ ಮೆಚ್ಚಿಸುವುದು ಎಷ್ಟರ ಮಟ್ಟಿಗೆ ಸರಿ .ರಾಜಪ್ಪಗೆ ಇಷ್ಟೊಂದು ರೋಷ ಬಂದಿರುವುದು ನೋಡಿದರೆ ಮುಂಬರುವ ಜಿಲ್ಲಾ ಪಂಚಾಯಿತಿಗೆ ಎಸ್.ಎಂ.ನಾಗರಾಜ್ ಮಗ ಲೋಹಿತನ ವಿರುದ್ಧ ಚುನಾವಣೆಗೆ ನಿಂತು ಶೌರ್ಯ ತೋರಿಸಲಿ ಎನ್ನುವವರು ಇದ್ದಾರೆ.ತಿರುಪತಿ ಶ್ರೀನಿವಾಸ್ ಗೆ ಮುಡಿ ಕೊಡಲು ನಿಂತಿದ್ದಾರೆ.

ಎಸ್.ಎಂ.ನಾಗರಾಜ್ ಕೂಡ ಸುರೇಶ್ ಜೊತೆಗೆ ಕೆಲ ವರ್ಷ ಶ್ರೀನಿವಾಸ್ ಜೊತೆಗೆ ಕೆಲ ವರ್ಷ ಕಾಲ ಹಾಕಿ ತನಗೆ ಬೇಕಾದವರ ಹೆಸರು ಬರುವಂತೆ ನೋಡಿಕೊಂಡು ಲಾಭ ಪಡೆದುಕೊಂಡವರು.ಜೊತೆಗೆ ತಾಲ್ಲೂಕಿನಲ್ಲಿ ನೊಳಂಬ ಸಮಾಜ ಕಟ್ಟದೆ ಕೊಟ್ಟ ಮಾತು ಉಳಿಸಿಕೊಳ್ಳದೆ ಪಕ್ಷಾಂತರ ಪ್ರವೀಣ್ ಎಂಬ ಬಿರುದು ಪಡೆದುಕೊಂಡು ರಾಜ್ಯದಲ್ಲಿ ನೊಳಂಬ ಸಮಾಜ ಕಟ್ಟುವ ಬದಲಾಗಿ ಚಿಂದಿ ಮಾಡಿ ಜೇಬು ಭರ್ತಿ ಮಾಡುವ ಕಲೆಗಾರಿಕೆ ನಿಪುಣ .

ಕಷ್ಟದಲ್ಲಿ ಕೊರಗದೆ ಇರುವವರಿಂದ ಸಮಾಜದ ಏಳಿಗೆ ಸಾಧ್ಯವೇ ? ಜಯಂತಿ ಒಂದು ಜನ ಸೇರುವ ಸಂಭ್ರಮ ಇದರಲ್ಲೂ ರಾಜಕೀಯ,ಗುಂಪುಗಾರಿಕೆ, ಹಣ ಕದಿಯುವ ಚಟಗಾರರ ಮಧ್ಯೆ ಸಮಾಜದ ಜೈ ಸಿದ್ದರಾಮ ಕೇಕೆ ಹಾಕಿ ಮನೆ ಸೇರಿಕೊಳ್ಳುತ್ತಾರೆ.

Siddarama Jayanti! – Srinivasan Bauparako?

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...