Home namma chikmagalur chikamagalur ಡಿ.ಸಿ.ಸಿ.ಬ್ಯಾಂಕ್ ಚುನಾವಣೆ : ಕಾಂಗ್ರೆಸ್ ಜೀರೋ? ಬಿಜೆಪಿಯಲ್ಲಿ ಒಡೆದ ಹಾಲು!
chikamagalurHomeLatest Newsnamma chikmagalur

ಡಿ.ಸಿ.ಸಿ.ಬ್ಯಾಂಕ್ ಚುನಾವಣೆ : ಕಾಂಗ್ರೆಸ್ ಜೀರೋ? ಬಿಜೆಪಿಯಲ್ಲಿ ಒಡೆದ ಹಾಲು!

Share
Share

ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ.ನಾಮ ಪತ್ರ ಸಲ್ಲಿಸಲು ಜನವರಿ ಒಂಬತ್ತು ಕೊನೆಯ ದಿನ ಜನವರಿ 17 ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಿಂತ್ರಾಣಗೊಂಡಿದೆ ಎಂದು ತಿಳಿದರು ಕೂಡ ಸರ್ಕಾರ ಇರುವುದರಿಂದ ಏನು ಬೇಕಾದರೂ ಆಗಬಹುದು.

ಟಿ.ಎ.ಪಿ.ಸಿ.ಎಂ.ಎಸ್.ನಿಂದ ನಿರ್ದೇಶಕರಾಗಿ ಬರಲು ಕಡೂರು ಶಾಸಕ ಆನಂದ್ ತಯಾರಿ ನಡೆಸಿದ್ದಾರೆ.ಇನ್ನುಳಿದಂತೆ ಜೀರೋ ಆಗಿದ್ದಾರೆ. ಆದರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಬಿಜೆಪಿಯಲ್ಲೂ ಒಡೆದ ಹಾಲಿನಂತಾಗಿದೆ.ತರೀಕೆರೆ, ಮೂಡಿಗೆರೆ, ಕಡೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚಿದೆ. ಜನತಾದಳದ ಜೊತೆಗೆ ಹೊಂದಾಣಿಕೆ ಚಿಕ್ಕಮಗಳೂರು ಮತ್ತು ಕೊಪ್ಪ,ಶೃಂಗೇರಿ.ಎನ್.ಆರ್.ಪುರದಲ್ಲಿ ತಂತಿ ಮೇಲೆ ನಡೆಯ ಬೇಕಾಗಿದೆ.

ಇತರೆ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆದಿದೆ.ಹಾಲಿ ಸದಸ್ಯ ರಮೇಶ್ ಜೊತೆಗೆ ಹದಿಮೂರು ಜನ ಅರ್ಜಿ ಹಾಕಿರುವುದು ತಲೆನೋವು ತಂದಿದೆ.ಇನ್ನೂ ಹಾಲು ಉತ್ಪಾದಕ ಕ್ಷೇತ್ರದಲ್ಲಿ ಸೊನಾಲ್ ಮತ್ತು ಜಗದೀಶ್ ಮಧ್ಯೆ ಪೈಪೋಟಿ ಇರುವುದರಿಂದ ಒಡೆದ ಹಾಲಿನಂತೆ ಆಗಿರುವುದು ಬಿಜೆಪಿ ಮತ್ತು ದಳಕ್ಕೆ ತಲೆ ನೋವಾಗಿದೆ.

ಚಿಕ್ಕಮಗಳೂರು ಕ್ಷೇತ್ರದ ನಿರಂಜನ ಅವರಿಗೆ ಅವಕಾಶ ಮಾಡಿಕೊಡದಿದ್ದರೆ ಸಿ.ಟಿ.ರವಿಗೆ ತೊಡಕು ಖಚಿತ ಎನ್ನಲಾಗಿದೆ. ಹೀಗಾಗಿ ಬೋಜೇಗೌಡರ ಹುಕುಂಗಾಗಿ ಕಾಯುತ್ತಿದ್ದಾರೆ.ಬಿಜೆಪಿ ಕೋರ್ ಕಮಿಟಿಯ ಸಭೆಯಲ್ಲಿ ಅಂತಿಮವಾಗಿ ನಿರ್ಧಾರಕ್ಕೆ ಬರುಲಾಗಿಲ್ಲಾ ಎಂದರೆ ಎಲ್ಲವೂ ಸರಿಯಿಲ್ಲ ಎಂದು ಹಳ್ಳಿ ಗಮಾರರಿಗೂ ಆರ್ಥವಾಗುತ್ತದೆ.ರಮೇಶ್, ನಿರಂಜನ, ಸತೀಶ್ ,ಜಗದೀಶ್ ,ಸೊನಾಲ್ ಭವಿಷ್ಯ ಬೋಜೇಗೌಡರ ತೀರ್ಮಾನದ ಮೇಲೆ ನಿಂತಿದೆ.

DCC Bank Election: Congress Zero? BJP’s milk is broken!

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...