ಚಿಕ್ಕಮಗಳೂರು: ದಾಸಶ್ರೇಷ್ಟ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣನವರ ಕೊ ಡುಗೆ ನಾಡಿನಲ್ಲಿ ಅಪಾರವಿದೆ. ಕನಕರ ಕೀರ್ತನೆಗಳು ಜನರಲ್ಲಿ ಜಾಗೃತಿ ಮೂಡಿಸಿದರೆ, ರಾಯಣ್ಣ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿ ರಾಷ್ಟ್ರದ ಏಕತೆಗೆ ದುಡಿದ ಮಹಾಚೇತನ ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ತಾಲ್ಲೂಕಿನ ಮರ್ಲೆ ಸಮೀಪದ ಕುರುಬರಹಳ್ಳಿ ಗ್ರಾಮದಲ್ಲಿ ಶ್ರೀ ಭಕ್ತಶ್ರೇಷ್ಟ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾ ತನಾಡಿ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯೊಂದಿಗೆ ನಾಡಿನಾದ್ಯಂತ ಕನಕದಾಸರು ಸಂಚ ರಿಸಿ ಜನರ ಮನಸ್ಸಿನಲ್ಲಿದ್ಧ ಮೇಲು-ಕೀಳೆಂಬ ವಿಷ ಬೀಜವನ್ನು ಕಿತ್ತೆಸೆಯಲು ಶ್ರಮಿಸಿದವರು. ದಾಸಶ್ರೇಷ್ಟರ ವಾಣಿಯಂತೆ ನಾಡಿನ ಕುರುಬ ಸಮಾಜವು ಕನಕದಾಸರ ಹಾದಿಯಲ್ಲಿ ಸಾಗಿ, ಸಂದೇಶವನ್ನು ಅಳವಡಿಸಿಕೊ ಂಡು ಜೀವಿಸುತ್ತಿದೆ ಎಂದು ತಿಳಿಸಿದರು.
ಸಮ ಸಮಾಜದ ನಿರ್ಮಾಣಕ್ಕಾಗಿ ಕನಕದಾಸರು ತಮ್ಮ ಅಮೂಲ್ಯ ಕೀರ್ತನೆಗಳ ಮೂಲಕ ಸಮಾಜದ ದೃಷ್ಟಿಕೋನ ಬದಲಿದ ಶ್ರೇಷ್ಟರು. ಇಂದು ಕುರುಬ ಸಮಾಜ ಎಲ್ಲಾ ಜಾತಿ, ಧರ್ಮದೊಂದಿಗೆ ಒಟ್ಟಾಗಿ ಜೀವಿ ಸುವ ಮೂಲಕ ಮನುಷ್ಯ ಕುಲವೆಂದೇ ಎಂಬ ಮಾನವೀಯ ಮೌಲ್ಯಗಳು ಹಾಗೂ ಕನಕದಾಸರ ವಾಣಿಯ ಂತೆ ಜೀವನ ನಡೆಸುತ್ತಿದೆ ಎಂದರು.
ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಅವರು ಕಿತ್ತೂರು ರಾಣಿ ಚೆನ್ನಮ್ಮ ಆಪ್ತರಾಗಿ ನಂಬಿಕೆ, ವಿಶ್ವಾಸ ಹಾ ಗೂ ಬಲಗೈ ಬಂಟನಾಗಿ ರಾಷ್ಟ್ರದ ಏಳಿಗೆಗೆ ಹೋರಾಡಿದ ಧೀಮಂತ ನಾಯಕ. ಪ್ರಸ್ತುತ ಹಾಲು ಕೆಡಬಹು ದು, ಆದರೆ ಹಾಲುಮತ ಸಮಾಜ ಎಂದಿಗೂ ಕೆಡುವುದಿಲ್ಲ ಎಂಬ ನಾಣ್ನುಡಿಯಂತೆ ಕುರುಬರು ತಮ್ಮದೇ ಶೈಲಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ರಾಷ್ಟ್ರ ಹಾಗೂ ರಾಜ್ಯದಲ್ಲಿ ಕುರುಬ ಜನಾಂಗದ ಸೇವೆ ಅಪಾರವಿದೆ. ಅಶೋಕ ಚಕ್ರವರ್ತಿ, ಕಾಳಿ ದಾಸ, ಚಂದ್ರಗುಪ್ತ ಮೌರ್ಯ ಕುರುಬ ಜನಾಂಗದವರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ೧೬ ಬಜೆಟ್‌ಗಳನ್ನು ಮಂಡಿಸಿ ಅರ್ಥಶಾಸ್ತ್ರಜ್ಞರಾಗುವ ಮೂಲಕ ಕುರುಬ ಸಮಾಜದ ಶಕ್ತಿ ಹೆಚ್ಚಿಸಿದ್ದಾರೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಗ್ರಾಮದಲ್ಲಿ ನಾಡಿನ ಶ್ರೇಷ್ಟ ವ್ಯಕ್ತಿಗಳ ವಿಗ್ರಹ ಸ್ಥಾಪಿಸಿ ಇಡೀ ಗ್ರಾಮವೇ ಹಬ್ಬದಂತೆ ಆಚರಿಸುತ್ತಿರುವುದು ಒಳ್ಳೆಯ ಸಂಗತಿ. ಸಮಾಜದ ಏಳಿಗೆಗಾ ಗಿ ಶ್ರಮಿಸಿರುವ ಕನಕದಾಸರು, ರಾಯಣ್ಣವರನ್ನು ಪೂಜಿಸಿ, ವಿಚಾರಧಾರೆಗಳನ್ನು ಮಕ್ಕಳಿಗೆ ಪರಿಚಯಿಸುವ ಮುಖೇನಾ ಮಾದರಿ ಗ್ರಾಮವನ್ನಾಗಿ ರೂಪಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಕನಕದಾಸರು ದೈವಭಕ್ತ ರಾದರೆ, ಸಂಗೊಳ್ಳಿ ರಾಯಣ್ಣ ದೇಶಭಕ್ತರು. ಅವರು ಜೀವನಾದರ್ಶಗಳು ಪ್ರತಿ ಯುವಜನಾಂಗಕ್ಕೆ ಸಾರ್ಥಕ ವಾಗಲಿದೆ. ವಿಶೇಷವಾಗಿ ಭಗವಂತ ಶ್ರೀಕೃಷ್ಣನನ್ನು ತನ್ನೆಡೆಗೆ ಒಲಿಸಿಕೊಂಡ ಕನಕದಾಸರು ಭಕ್ತಶ್ರೇಷ್ಟರಾದರು ಎಂದು ಹೇಳಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಣೇನಹಳ್ಳಿ ರಾಜು ಮಾತನಾಡಿ ಗ್ರಾಮದಲ್ಲಿ ಕೇವಲ ಪ್ರತಿಭೆ ಸ್ಥಾಪಿಸಿದರೆ ಸಾಲದು. ಪ್ರತಿನಿತ್ಯವು ಗ್ರಾಮಸ್ಥರು ಸ್ವಚ್ಚತೆ, ಪೂಜಾಕೈಂಕಾರ್ಯ ನಡೆಸುವ ಮೂಲಕ ಶ್ರೇಷ್ಟ ವ್ಯಕ್ತಿ ಗಳ ಸ್ಥಳವನ್ನು ಅಚ್ಚುಕಟ್ಟು ನಿರ್ವಹಿಸಬೇಕು. ಪ್ರತಿಭೆಗೆ ಚ್ಯುತಿ ಬಾರದಂತೆ ಜೋಪಾನಗೊಳಿಸುವುದು ಗ್ರಾಮ ಸ್ಥರ ಮುಖ್ಯ ಜವಾಬ್ದಾರಿ ಎಂದರು.
ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ ಮಾತನಾಡಿ ಕನಕರು ಮತ್ತು ರಾಯಣ್ಣವರ ವಿಚಾರಧಾರೆಗಳು ತಿಳಿಸಲು ದಿನಗಟ್ಟಲೇ ಸಾಲದು. ಕನಕರ ವಾಣಿಯಂತೆ ಅಜ್ಞಾನಿಗಳ ಅಧಿಕ ಸ್ನೇಹಕ್ಕಿಂತ, ಸುಜ್ಞಾನಿಗಳ ಜೊತೆ ಜಗಳವಾಡುವುದೇ ಲೇಸು. ಹೆಚ್ಚು ಸಮಯ ಸಜ್ಜನರೊಂದಿಗೆ ಸ್ನೇಹ ಬೆಳೆಸಿ, ಭಕ್ತಶ್ರೇಷ್ಟರ ಕೀರ್ತನೆ ಮತ್ತು ರಾಯಣ್ಣ ಬದುಕನ್ನು ಆದರ್ಶವಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಾರದ ಮಾಸ್ತೇಗೌಡ ನಾಡಿ ನ ಶ್ರೇಷ್ಟರ ಜೀವನ ಚರಿತ್ರೆ ತಿಳಿಸುವ ಸಲುವಾಗಿ ಗ್ರಾಮದಲ್ಲಿ ಭಕ್ತಶ್ರೇಷ್ಟ ಕನಕದಾಸರು, ಸಂಗೊಳ್ಳಿ ರಾಯಣ್ಣ ನವರ ಪ್ರತಿಭೆ ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಗೆ ಕುರುಬರು ಸಲ್ಲಿಸಿದ ಸೇವೆಯನ್ನು ಪರಿಚಯಿಸ ಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಗ್ರಾಮದಲ್ಲಿ ನಿರ್ಮಾಣಗೊಂಡ ಶ್ರೀ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿ ಗೆ ಸರ್ವರು ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್. ಶಾಂತೇಗೌಡ, ಜಿ.ಪಂ. ಮಾಜಿ ಸದಸ್ಯೆ ಕೆ.ವಿ.ಮಂಜುನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕೆ.ಇ. ಮಂ ಜೇಗೌಡ, ಕೆಂಚೇಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷ ಧರ್ಮೇಗೌಡ, ಅಂಬಳೆ ಬಿಜೆಪಿ ಹೋಬಳಿ ಉಪಾ ಧ್ಯಕ್ಷ ಕೆ.ಸಿ.ಮಾಸ್ತೇಗೌಡ, ಮುಖಂಡರುಗಳಾದ ಕೃಷ್ಣೇಗೌಡ, ಬಲರಾಮ್, ಚಿಕ್ಕೇಗೌಡ, ಚಂದ್ರೇಗೌಡ, ಎಂ.ಸಿ. ರಮೇಶ್, ತಮ್ಮೇಗೌಡ ಉಪಸ್ಥಿತರಿದ್ದರು.
Kanakadasa-Sangolli Rayanna’s contribution to the country is immense
Leave a comment