Home namma chikmagalur chikamagalur ಚುನಾವಣೆಯಲ್ಲಿ ನಕಲಿಗಳ ಹಾವಳಿ-ಐದು ವರ್ಷ ಕುರ್ಚಿ ಗ್ಯಾರಂಟಿ
chikamagalurHomeLatest Newsnamma chikmagalur

ಚುನಾವಣೆಯಲ್ಲಿ ನಕಲಿಗಳ ಹಾವಳಿ-ಐದು ವರ್ಷ ಕುರ್ಚಿ ಗ್ಯಾರಂಟಿ

Share
Share

ಶ್ರೀ ವೀರಶೈವ ಲಿಂಗಾಯತ ಸಂಘದ ಚುನಾವಣೆ ಐದು ಸ್ಥಾನಗಳಿಗೆ ನಡೆಯಿತು. ಚುನಾವಣೆ ಎಂಬ ಗಿಮಿಕ್ ನಲ್ಲಿ ನಕಲಿ ಮತದಾರರ ಹಾವಳಿ ಎದ್ದು ಕಾಣುತ್ತಿತ್ತು.

ಗೆಲ್ಲುವ ಕುದುರೆಗಳು ಅಖಾಡದಲ್ಲಿ ಇದ್ದರು ನಕಲಿ ಮತದಾನ ಮಾಡುವ ಅವಶ್ಯಕತೆ ಇತ್ತಾ ಎಂದು ಪ್ರಶ್ನೆ ಮಾಡುವವರಿಗೆ ಕೋರ್ಟ್ ಗೆ ಹೋಗಿ ಎಂಬ ಉಡಾಪೆ ಉತ್ತರ ಸುಲುಭವಾಗಿ ಹೇಳುತ್ತಿದ್ದ ಪದಾಧಿಕಾರಿಗಳ ಮಾತುಗಳು ಹೇಸಿಗೆ ತಿನ್ನುವ ಜನರಿಗೆ ಬುದ್ದಿ ಹೇಳಬಾರದು ಎನ್ನಿಸಿತು ಎಂದು ಹೇಳಲಾಗುತ್ತಿದೆ.

ಸಂಘದ ಗುತ್ತಿಗೆ ಹಿಡಿದವರು ದೊಡ್ಡ ಮನುಷ್ಯರಂತೆ ಮಾತನಾಡಿ ಇಷ್ಟು ಕೆಳಮಟ್ಟಕ್ಕೆ ಇಳಿದಿದ್ದು ನೋಡಿದರೆ ಸಂಘ ಮತ್ತು ಸಂಘದ ಸದಸ್ಯರು ಲೆಕ್ಕವಿಲ್ಲ ಎನ್ನುವಂತೆ ಇತ್ತು ಎಂದು ಹಲವರು ದೂರಿದ್ದಾರೆ.

372 ಸಂಖ್ಯೆಯ ಮತದಾರ ಸದಾನಂದ ಎಂಬುವರ ಮತವನ್ನು ಇನ್ನೊಬ್ಬ ಸದಾನಂದ ಎಂಬುವರು ಮತ ಚಲಾಯಿಸಿದ್ದು ಇದನ್ನು ಕೇಳಿದರೆ ಏನು ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಅಧಿಕಾರಿ ಉಡಾಪೆಯ ಉತ್ತರಕ್ಕೆ ಬಹುಮಾನ ಕೊಡಬೇಕು. ಇವರಿಗೆ ಕೋಲು ಹೊಯ್ಯುವ ಪದಾಧಿಕಾರಿಗಳು ಹೇಗಾದರೂ ಸರಿ ನಾವು ಗೆಲ್ಲ ಬೇಕೆಂಬ ಜನರು ಪಾಚಿ ಕಟ್ಟಿಕೊಂಡು ಓಡಾಡುತ್ತಿದ್ದರು.

ಅಂಬಳೆ ಕ್ಷೇತ್ರದಲ್ಲಿ ವಿಜಯಕುಮಾರ್ ಮತ್ತು ಯೋಗೀಶ್ ಮಧ್ಯೆ ಸ್ಪರ್ಧೆ ಮಾನವಂತರು ಒಪ್ಪಲು ಸಾಧ್ಯವಿಲ್ಲ. ಮೂರರಿಂದ ನಾಲ್ಕು ಸಾವಿರ ಹಣ ಹಂಚಿ ಚುನಾವಣೆ ನಡೆಸಿದ್ದು ನೋಡಿದರೆ ಅಸಹ್ಯ ಹುಟ್ಟಿಸುತ್ತದೆ ಎಂದು ಅಳಲು ತೊಡಿ ಕೊಳ್ಳುತ್ತಿದ್ದರು. ಇಂತಹ ಪರಿಸ್ಥಿತಿ ಸಂಘಗಳಿಗೆ ಬಂದು ನಿಂತಿರುವುದು ಏನು ಲಾಭ ಇರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಒಟ್ಟಾರೆ ಸಂಘಕ್ಕೆ ಗಂಟು ಬಿದ್ದವರು ಈಗ ಸದಸ್ಯತ್ವದ ರೇಟ್ ಹೆಚ್ಚಿಸಲು ಯಾರ ಅಡಚಣೆ ಇಲ್ಲದಂತೆ ಆಗಿದೆ . ಇನ್ನೂ ಐದು ವರ್ಷಗಳು ಅರಾಧ್ಯ ಹಾರಾಟ,ಶಿವಶಂಕರ್ ಚೀರಾಟ,ಶಿವಾನಂದ ಸ್ವಾಮಿ ಕುಕಲಾಟಕ್ಕೆ ಇನ್ನುಳಿದವರು ಚಪ್ಪಾಳೆ ತಟ್ಟಲು ಆಡೆ ತಡೆ ಇಲ್ಲದಂತೆ ಆಯಿತು.

Election fraud plagues – five-year chair guarantee

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...