Home namma chikmagalur ಕಳಸದಲ್ಲಿ ಸಡಗರ ತಂದ ಗಿರಿಜಾಕಲ್ಯಾಣ ಉತ್ಸವ
namma chikmagalurchikamagalurHomeLatest News

ಕಳಸದಲ್ಲಿ ಸಡಗರ ತಂದ ಗಿರಿಜಾಕಲ್ಯಾಣ ಉತ್ಸವ

Share
Share

ಕಳಸ: ಪಟ್ಟಣದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಜನಸಂದಣಿಯ ದೃಶ್ಯ. ಪಟ್ಟಣದ ಕಳಸೇಶ್ವರ ದೇವಸ್ಥಾನದಲ್ಲಿ ಕಳಸೇಶ್ವರ ಮತ್ತು ಗಿರಿಜೆಯು ಒಟ್ಟಿಗೇ ಇರುವ ದೃಶ್ಯ ಕಣ್ತುಂಬಿಕೊಳ್ಳಲು ಭಕ್ತರು ಉತ್ಸಾಹದಿಂದ ನೆರೆದಿದ್ದರು.

ಕಳೆದ ವಾರ ಆರಂಭಗೊಡಿದ್ದ ಗಿರಿಜಾ ಕಲ್ಯಾಣದ ವಿಧಿಗಳು ಸಂಪ್ರದಾಯಬದ್ಧವಾಗಿ ನೆರವೇರಿದ್ದವು. ಭಕ್ತರು ಎಲ್ಲ ವಿಧಿಗಳಲ್ಲೂ ಗಂಡು–ಹೆಣ್ಣಿನ ಕಡೆಯವರಂತೆ ಪಾಲ್ಗೊಂಡು ದೇವರ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಾರವಿಡೀ ಗಿರಿಜಾಂಬಾ ದೇವಸ್ಥಾನ ಮತ್ತು ಕಳಸೇಶ್ವರ ದೇವಸ್ಥಾನದ ಪರಿಸರದಲ್ಲಿ ಹಬ್ಬದ ಸಡಗರ, ಭಕ್ತರ ಲವಲವಿಕೆ ಇತ್ತು. ಶನಿವಾರ ಮಧ್ಯರಾತ್ರಿಯ ನಂತರ ಗಿರಿಜೆಯನ್ನು ಕಳಸೇಶ್ವರನ ಸನ್ನಿಧಿಗೆ ಕರೆತಂದ ನಂತರ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಕಲಶೇಶ್ವರ ಮತ್ತು ಗಿರಿಜೆಯ ಕಲ್ಯಾಣ ನಡೆಯಿತು.

ದೇವರ ವಿವಾಹವಾದ ನಂತರ ಒಂದು ದಿನ ಮಾತ್ರ ಕಳಸೇಶ್ವರ ಗಿರಿಜೆಯನ್ನು ಒಟ್ಟಿಗೆ ಕೂರಿಸುವ ಸಂಪ್ರದಾಯ ಇದೆ. ಕಾಶಿಯಲ್ಲಿ 12 ವರ್ಷಕ್ಕೊಮ್ಮೆ ಕಲ್ಯಾಣ ನಡೆದರೆ ಕಳಸದಲ್ಲಿ ಮಾತ್ರ ಪ್ರತಿ ವರ್ಷವೂ ಈಶ್ವರ ಮತ್ತು ಪಾರ್ವತಿ ನಡುವೆ ಕಲ್ಯಾಣ ನೆರವೇರುತ್ತದೆ. ಕಳಸವು ಇದೇ ಕಾರಣಕ್ಕೆ ದಕ್ಷಿಣ ಕಾಶಿ ಎಂದೇ ಹೆಸರಾಗಿದೆ.

ಕಲ್ಯಾಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಪ್ರತಿ ವರ್ಷವೂ ಕಳಸಕ್ಕೆ ಧಾವಿಸುತ್ತಾರೆ. ಭಾನುವಾರ ಕಳಸೇಶ್ವರ ದೇವಸ್ಥಾನದಲ್ಲಿ ಭಕ್ತರು ದೇವರ ಜೋಡಿಗೆ ನಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೋರಿಕೆ ಸಲ್ಲಿಸಿದರು. ಆನಂತರ ವಿವಾಹದ ಸಿಹಿಯೂಟವನ್ನು 3 ಸಾವಿರಕ್ಕೂ ಹೆಚ್ಚು ಜನರು ಸವಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಕಲ್ಯಾಣದ ವಿಧಿಗಳನ್ನು ಮತ್ತು ವಿವಾಹ ಮಹೋತ್ಸವದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು.

Girijakalyana Utsava

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಪುಸ್ತಕ ಸಂಸ್ಕೃತಿ-ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ

ಚಿಕ್ಕಮಗಳೂರು: ಪುಸ್ತಕ ಸಂಸ್ಕೃತಿ ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ ಎಂದು ನ್ಯೂಸ್ ಕಿಂಗ್ ಆನ್ಲೈನ್ ಪತ್ರಿಕೆಯ ಸಂಪಾದಕ...

ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ ಕಾರು

ಕಳಸ: ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ...

ಸ್ವಾತಂತ್ರ್ಯೋತ್ಸವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ 

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ದಲಿತ...

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ,...