Home Political News ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?
Political NewsState News

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?

Share
Share

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಎರಡೂವರೆ ವರ್ಷ ಪೂರೈಸುತ್ತಿದೆ.ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ “ಮುಖ್ಯಮಂತ್ರಿ” ಬದಲಾಗುತ್ತಾರೆ ಎಂದು ಎರಡು ಬಣಗಳು ಬೊಬ್ಬೇ ಹೊಡೆಯುತ್ತಿವೆ.ಹೈಕಮಾಂಡ್ ಭಯ ಯಾವ ಬಣಕ್ಕೂ ಇಲ್ಲ.

ಮಾಜಿ ಮಂತ್ರಿ ಕೆ.ಎನ್.ರಾಜಣ್ಣ ” ನವೆಂಬರ್ ” ಕ್ರಾಂತಿಯ ಬಗ್ಗೆ ಹೇಳಕೆ ನೀಡಿದಾಗಿನಿಂದ ಅಧಿಕಾರ ಹಂಚಿಕೆ ಗದ್ದಲ ಹೆಚ್ಚಾಗಿದೆ. ನವೆಂಬರ್ ತಿಂಗಳಿಗೆ ಕಾಲಿಡಲಾಗಿದೆ ಈಗ ಬಿಹಾರ ಚುನಾವಣೆಯ ನಂತರ ಏನಾದರೂ ಆಗಬಹುದು ಎಂದು ರಾಜಕೀಯ ವಿಶ್ಲೇಷಣೆ ನಡೆದಿದೆ.

ದಿನಕ್ಕೊಂದು ದಾಳ ಉರುಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಿಮ್ಮೇಳನ ಹೆಚ್ಚು ಸೌಂಡ್ ಮಾಡುವಂತೆ ನೋಡಿಕೊಂಡರೆ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಹಿಂಭಾಲಕರನ್ನು ಛೂ ಬಿಟ್ಟು ಕುಣಿಸಿ ತಾವು ಮೌನವಾಗಿ ದಾಳ ಉರುಳಿಸುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರ ಬಣ,ಡಿ.ಕೆ.ಶಿ ಬಣ,ತಟಸ್ಥ ಬಣ ಎಂದು ಮೂರು ಗುಂಪು ಸ್ಪಷ್ಟವಾಗಿ ಕಾಣುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲೂ ” ಕಾಂಗ್ರೆಸ್ “ಶಾಸಕರುಗಳು ಗೆದ್ದಿದ್ದಾರೆ ಪಾಪ ಬಿಡುವಿಲ್ಲದೆ ಅಭಿವೃದ್ಧಿಗಾಗಿ ತಡಕಾಡುತ್ತಿದ್ದಾರೆ.ಒಬ್ಬೊಬ್ಬರದು ಒಂದೊಂದು ಕತೆ,ಮೂಡಿಗೆರೆ ಶಾಸಕಿ ನಯನಮೋಟಮ್ಮ ಭಿನ್ನಮತದ ಹೊಡೆತದಿಂದ ತತ್ತರಿಸುವ ಬದಲು ಮುತಾಲಿಕ್ ಕಾಂಗ್ರೆಸ್ ಕಡೆ ಕಣ್ಣು ಮಿಟುಕಿಸಿ ಡಿ.ಕೆ.ನನ್ನ ಗಾಡ್ ಫಾದರ್ ಎಂದು ಗುರ್ತಿಸಿ ಕೊಂಡಿದ್ದಾರೆ. ಟಿ.ಡಿ.ರಾಜೇಗೌಡರಿಗೆ ಬಿಜೆಪಿಯವರ ಕಾಟ ದಿನೆ,ದಿನೇ ಬಿಗಡಾಯಿಸುತ್ತಿದೆ ಇವರು ಕೂಡ ಡಿ.ಕೆ ಪರ.ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯಗೆ ಕಲ್ಯಾಣ ಯೋಗ ಶುರುವಾಗಿದ್ದರು ಸಾಲದ ಬಾದೆ,ಮುಂದಿನ ಚುನಾವಣೆಗೆ ಕಡಿಮೆ ಎಂದರು ಇಪ್ಪತೈದು ಕೋಟಿ ಬೇಕು ಎಂಬ ಕೊರಗು ಇವರ ನೋಟ ಕೂಡ ಡಿ.ಕೆ ಕಡೆಗೆ ಇದೆ.

ತರೀಕೆರೆ ಶಾಸಕ ಶ್ರೀನಿವಾಸ್ ಮಾತ್ರ ಕುಟುಂಬ ಕಲ್ಯಾಣವೇ ಮುಖ್ಯ ಎಂಬ ನಡೆಯಲ್ಲಿ ಧೃಡವಾದ ನಂಬಿಕೆ ಇಟ್ಟುಕೊಂಡು ಸಿದ್ದರಾಮಯ್ಯನವರ ಪರ ನಿಂತಿದ್ದಾರೆ.ಕಡೂರು ಆನಂದ್ ಮಾತ್ರ ಕ್ಷೇತ್ರದಲ್ಲಿ ಎಷ್ಟು ಗಲಾಟೆ ನಡೆಯಲಿ ರಾಜ್ಯದಲ್ಲಿ ಎರಡು ಗುಂಪು ಬೇಕು ಎಂಬ ಗೊಂದಲದಲ್ಲಿ ಇದ್ದು ಸಮಯ ನೋಡಿ ತೀರ್ಮಾನಕ್ಕೆ ಬರಬಹುದು ಎಂಬ ಸಾಧ್ಯತೆ ಎಂದು ರಾಜಕೀಯ ವಿಶ್ಲೇಷಕರ ಅನಿಸಿಕೆಯಾಗಿದೆ.ನವೆಂಬರ್ ನಲ್ಲಿ ಕಾಂತಿಯೋ ,ಭ್ರಾಂತಿಯೋ ಕಾದು ನೋಡಬೇಕು. ಒಟ್ಟಾರೆ ಹಲವು ರಾಜಕೀಯ ಬದಲಾವಣೆ ಆಗುವುದು ಖಚಿತ.

November revolution in the state! Misconceptions?

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಜಿಲ್ಲೆಯ ಐದು ಜನ ಶಾಸಕರಿಗೆ ಬೊಗಣಿ ಗೂಟ ಖಚಿತ !?

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು...

“ತಮ್ಮಯ್ಯಾ… ಯಾರಯ್ಯಾ ನಿನ್ನ ಮೇಲೆ ಸೋತದ್ದು ಸಿ.ಟಿ.ರವಿ

ಬೀರೂರು (ಚಿಕ್ಕಮಗಳೂರು): “ತಮ್ಮಯ್ಯಾ… ಯಾರಯ್ಯಾ ನಿನ್ನ ಮೇಲೆ ಸೋತದ್ದು ಸಿ.ಟಿ.ರವಿ…”  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ...

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ...