Home Latest News ಬಳ್ಳಾರಿ ಬಾಣಂತಿರ ಸಾವಿಗೆ ಕಾರಣವಾದ ದ್ರಾವಣ ಇಲ್ಲೂ ಕೊಡಲಾಗ್ತಿದ್ಯಾ ?
Latest News

ಬಳ್ಳಾರಿ ಬಾಣಂತಿರ ಸಾವಿಗೆ ಕಾರಣವಾದ ದ್ರಾವಣ ಇಲ್ಲೂ ಕೊಡಲಾಗ್ತಿದ್ಯಾ ?

Share
Share

ಚಿಕ್ಕಮಗಳೂರು : ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಬಳ್ಳಾರಿ, ಬೆಳಗಾವಿ ವಿಜಾಪುರದಲ್ಲಿ ನಡೆದಿದ್ದು ಚಿಕ್ಕಮಗಳೂರಿನಲ್ಲಿ ಕೂಡ ಇಂತಹ ಪ್ರಕರಣ ಸಂಭವಿಸಬಹುದು ಎಂಬ ಶಂಕೆ ಇದೆ. ಶಂಕರಪುರದ ಕೂಲಿ ಕಾರ್ಮಿಕ ಪ್ರವೀಣ್ ಎಂಬುವರ ಪತ್ನಿ ಸವಿತಾ ಎಂಬುವವರು ಎರಡನೇ ಹೆರಿಗೆಗೆ ಮೊನ್ನೆ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ನಿನ್ನೆ ಡಾ.ಲೋಹಿತ್ ಎಂಬುವವರು ಹೆರಿಗೆ ಮಾಡಿಸಿ ಬಾಣಂತಿಗೆ ಡ್ರಿಪ್ ಹಾಕಿದ ತಕ್ಷಣ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು ಸಾವು ಬದುಕಿನ ಮಧ್ಯೆ ಸೆಣಸಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿಯಲ್ಲಿ ಉಪಯೋಗಿಸಿರುವ ಕಂಪನಿಯ ಪಶ್ಚಿಮ ಭಂಗ ಫಾರ್ಮಾಸಿಟಿಕಲ್ ಡ್ರಿಪ್ ಉಪಯೋಗಿಸಿರುವುದಾಗಿ ತಿಳಿದುಬಂದಿದೆ. ಕಳೆದ ಕೆಲ ದಿನಗಳಿಂದ ಪಶ್ಚಿಮ ಭಂಗ ಕಂಪನಿಯ ಸ್ಟಾಕ್‌ ತರಿಸಿರುವುದು ಖಚಿತವಾಗಿದ್ದು ಮೊನ್ನೆ ಕೂಡ ಜಿಲ್ಲಾ ಆಸ್ಪತ್ರೆಗೆ 51 ಬಾಕ್ಸ್ ಗಳಲ್ಲಿ 3753 ಬಾಟಲ್ ಸರಬರಾಜು ಆಗಿದೆ. ಇದನ್ನು ಸವಿತಾರಿಗೆ ನೀಡಿರಬಹುದು ಎಂದು ಹೇಳಲಾಗುತ್ತಿದೆ. ಇದರ ಸತ್ಯಾಸತ್ಯತೆ ತನಿಖೆಯಿಂದ ಮಾತ್ರ ಗೊತ್ತಾಗಲಿದೆ. ಇದರಿಂದಾಗಿ ಮತ್ತಷ್ಟು ಜನರಿಗೆ ತೊಂದರೆ ಆಗಬಹುದು ಎನ್ನಲಾಗಿದೆ.

ಬೆಳಗಾವಿಯಲ್ಲಿ ವೈದ್ಯಕೀಯ ಸಚಿವರು ಈ ಬಗ್ಗೆ ಸಭೆ ಕರೆದಿದ್ದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮೋಹನ್ ಕುಮಾರ್ ಯಾರ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ .ಜಿಲ್ಲಾ ಆಸ್ಪತ್ರೆಯಿಂದ ಕೆ.ಅರ್.ಎಸ್ ಆಸ್ಪತ್ರೆಗೆ ಸವಿತಾರನ್ನು ಸಿಫ್ಟ್ ಮಾಡಿದ್ದು ಅಲ್ಲಿ ಕೋಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿರುವ ಮೋಹನ್ ಕುಮಾರ್ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ನೊಂದವರು ಒತ್ತಾಯ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...