ಚಿಕ್ಕಮಗಳೂರು :
ಮಳೆ ನಿಂತು ಎಷ್ಟೋ ದಿನಗಳು ಕಳೆದರೂ ಚಿಕ್ಕಮಗಳೂರು ನಗರದ ಗುಂಡಿಮಯ ರಸ್ತೆಗಳಿಗೆ ಇನ್ನೂ ಮುಚ್ಚುವ ಭಾಗ್ಯ ದೊರೆತಿಲ್ಲ, ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಮಾತ್ರ ಎಚ್ಚೆತ್ತುಕೊಂಡಿಲ್ಲ, ರೋಸಿ ಹೋದ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಹೌದು ರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿರುವ ಘಟನೆ ಇದು ವಿಪರೀತ ಮಳೆಯಿಂದ ಚಿಕ್ಕಮಗಳೂರು ನಗರ ಗುಂಡಿ ಬಿದ್ದು ಹೋಗಿತ್ತು ಇದೀಗ ವಾಹನ ಸವಾರರ ತಾಳ್ಮೆಯ ಕಟ್ಟೆ ಹೊಡೆದಿದ್ದು ಮೂರು ದಿನದಲ್ಲಿ ಗುಂಡಿ ಮುಚ್ಚದಿದ್ರೆ ಹಾಲು ತುಪ್ಪ ಬಿಡುವ ಎಚ್ಚರಿಕೆಯನ್ನು ನಗರಸಭೆಗೆ ಕೊಟ್ಟಿದ್ದಾರೆ.
ಪಲಾವ್, ವಡೆ, ನಿಂಬೆಹಣ್ಣು ಹೂವು, ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಿ ಪ್ರತಿಭನಾರ್ಥಕವಾಗಿ ಸ್ಥಳದಲ್ಲಿ ಘೋಷಣೆ ಕೂಗಿದ್ದಾರೆ.
ಹಲವು ದಿನಗಳಿಂದ ನಗರದ ಕೆಲ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರು ಯಾರು ಕೇಳುವವರಿಲ್ಲದಂತಾಗಿದೆ.
ಹಲವು ಬಾರಿ ಮನವಿ ಮಾಡಿದ್ರು ಇಲ್ಲಿನ ನಗರಸಭೆ ಮಾತ್ರ ಸ್ಪಂದಿಸಿಲ್ಲ
- ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಕಳೆದ ರಾತ್ರಿ ಗುಂಡಿ ಪೂಜೆ ನಡೆದಿದೆ. ನಗರಸಭೆ ಯುಜಿಡಿ ಕೆಲಸಕ್ಕೆಂದು ಈ ಮೊದಲು ಕಾಮಗಾರಿಗೆ ಗುಂಡಿ ತೆಗೆಯಲಾಗಿತ್ತು ನಂತರ ಆ ಗುಂಡಿ ಮುಚ್ಚಿದ್ದರೂ ಮತ್ತೆ ಗುಂಡಿಯಾಗಿದ್ದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಗುಂಡಿಯಿಂದ ಹಲವಾರು ಬೈಕ್ ಗಳು ಅಪಘಾತ ವಾಗಿ ನೂರಾರು ಜನರಿಗೆ ಗಾಯಗಳಾಗಿವೆ.ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು ಸ್ಪಂದಿಸದ ಹಿನ್ನೆಲೆ ಕಳೆದ ರಾತ್ರಿ
ರಸ್ತೆ ಗುಂಡಿಗೆ ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಲಾಗಿದೆ. ಚಿಕ್ಕಮಗಳೂರು ನಗರದ ಹತ್ತಾರು ರಸ್ತೆಗಳು ಇದೇ ರೀತಿ ಗುಂಡಿಗಳಿಂದ ಕೂಡಿವೆ.
Leave a comment