ತರೀಕೆರೆ: ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 100ನೇ ಬಯಲು ಜಂಗಿ ಕುಸ್ತಿಯ ಅಂತಿಮ ದಿನವಾದ ಭಾನುವಾರ ಪ್ರೇಕ್ಷಕರ ಮತ್ತು ವಿವಿಧ ಗ್ಯಾಲರಿಗಳಲ್ಲಿ ದಟ್ಟಣೆ ಹೆಚ್ಚಾಗಿತ್ತು.
ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬಂದಿದ್ದ ಕ್ರೀಡಾಪಟುಗಳು ಕುಸ್ತಿ ಕಸರತ್ತನ್ನು ಕೇಕೆ ಹಾಗೂ ಶಿಳ್ಳೆ ಹೊಡೆಯುವುದರ ಮೂಲಕ ನೋಡಿ ಸಂಭ್ರಮಿಸಿದರು.
‘ಕುಸ್ತಿ ಪಟುಗಳಿಗೆ ಊಟ ಮತ್ತು ವಸತಿ ಕಲ್ಪಿಸಲಾಗಿದೆ. ಬಯಲು ರಂಗಮಂದಿರದಲ್ಲಿ ಬೃಹತ್ ವೇದಿಕೆಯ ಜೊತೆಗೆ 5 ಸಾವಿರ ಪ್ರೇಕ್ಷಕರು ಕುಳಿತು ವೀಕ್ಷಿಸಲು ಗ್ಯಾಲರಿ ಹಾಗೂ ಕುಸ್ತಿ ಆಡುವಾಗ ಅಖಾಡದಲ್ಲಿ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಶ್ರೀಗುರುರೇವಣಸಿದ್ದೇಶ್ವರ ಕುರುಬರ ಸಂಘದ ಅಧ್ಯಕ್ಷ ಟಿ.ಎಸ್. ರಮೇಶ್ ತಿಳಿಸಿದರು.
Leave a comment