Home namma chikmagalur communist leaders:ಕಮ್ಯುನಿಸ್ಟ್ ನಾಯಕರು ಜಾತಿವಾದಿಗಳಾಗುವುದು ಏಕೆ ?
namma chikmagalur

communist leaders:ಕಮ್ಯುನಿಸ್ಟ್ ನಾಯಕರು ಜಾತಿವಾದಿಗಳಾಗುವುದು ಏಕೆ ?

Share
ಹೆಚ್.ಎಂ.ರೇಣುಕರಾಧ್ಯ
ಹೆಚ್.ಎಂ.ರೇಣುಕರಾಧ್ಯ
Share

ಅಲ್ ಪಾರ್ಟಿ ಅರಾಧ್ಯ ಅಲಿಯಾಸ್ ಹೆಚ್.ಎಂ.ರೇಣುಕರಾಧ್ಯ ಒಂದು ಕಾಲದಲ್ಲಿ ಪಕ್ಕ ಕಮ್ಯುನಿಸ್ಟ್ ಮುಖಂಡ ಅದರಲ್ಲೂ ಕಾರ್ಮಿಕ ಪರ ಸದಾ ಧ್ವನಿಯಾದವರು ಹೋರಾಟ ರೂಪಿಸಿದವರು. ಮಾಸಿದ ಬಟ್ಟೆಗಳ ಧರಿಸಿ ಶೋಷಿತರ ಪರ ಇದ್ದವರು ಇತ್ತೀಚಿನ ವರ್ಷಗಳಲ್ಲಿ ಪಕ್ಕ ಪಕ್ಕ ಬೂರ್ಜ್ವ ಪಾರ್ಟಿಗಳ ಲೋಕಲ್ ನಾಯಕರಂತೆ ಕಂಗೊಳಿಸುತ್ತಿದ್ದಾರೆ. ಅರಾಧ್ಯ ಎಂದು ಕರೆಯುವುದಕ್ಕಿಂತ ಅಲ್ ಪಾರ್ಟಿ ಅರಾಧ್ಯ ಎಂದು ಕರೆಯುತ್ತಾರೆ ಆಗ ಹುಸಿ ನಗೆ ನಕ್ಕು ಅರಾಧ್ಯರವರು ವಿಷಯಂತರ ಮಾಡಿ ಮಾತಾನಾಡುತ್ತರೆ ಎಂದು ಅವರ ಪಕ್ಕ ಸ್ನೇಹಿತರು ಹೇಳುವುದು ಗುಟ್ಟೇನಲ್ಲ.

ಅರಾಧ್ಯರವರು ಕಮ್ಯುನಿಸ್ಟ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ ಕಾರ್ಮಿಕರ ಪರವು ಇಲ್ಲ ಈಗ ಏನಿದ್ದರು ಜಾತಿ,ಜಾತಿ ಎಂದು ಓಡಾಟ ಮಾಡಿ ಸಂಘಟನೆಗೆ ಹಗಲಿರುಳು ದುಡಿಯುತ್ತಿದ್ದಾರೆ ಎಂದು ಅಭಿಮಾನಿಗಳು ಹೆಮ್ಮೆಯಿಂದ ಹೇಳುತ್ತಾರೆ. ಅರಾಧ್ಯರೇ ಹೀಗೆ ಏಕಾದರೀ ಎಂದರೆ ಕಾಲಕ್ಕೆ ತಕ್ಕಂತೆ ಬದಾಲಾಗುವುದು ಜಗದ ನಿಯಮ.ನಾನು ಬದಲಾಗಿದ್ದರಿಂದ ಎಲ್ಲಾ ಪಕ್ಷದವರು ನನಗೆ ಸಲಹೆ ಕೇಳುತ್ತಾರೆ ಗೊತ್ತಾ ಎನ್ನುತ್ತಲೇ ಕಾಂಗ್ರೆಸ್ ನ ಅನಧಿಕೃತ ವಕ್ತಾರ ರಂತೆ ಆಡಳಿತಾರೂಢ ಪಕ್ಷದ ಪರ ಮಾತನಾಡಲು ಶುರುಮಾಡುತ್ತಾರೆ.

ಜಾತಿ ಮತ್ತು ಸ್ವ ಕುಟುಂಬದ ದುರಾಸೆ ಹೆಚ್ಚಾಗಿದ್ದು ತನ್ನ ಅಣ್ಣ ಹೆಚ್.ಎಂ.ಲೋಕೇಶ್ ಕಳೆದ ಹತ್ತು ವರ್ಷಗಳಿಂದ ಅಖಿಲ ಭಾರತ ವೀರಶೈವ ಸಂಘದ ಜಿಲ್ಲಾ ಅಧ್ಯಕ್ಷನಾಗಿ ನಯಾಪೈಸೆ ಕೆಲಸ ಮಾಡದಿದ್ದರೂ ಕಡೂರು ಬ್ರಾಂಚ್ ಅಧ್ಯಕ್ಷನಾಗಿ ಮತ್ತೆ ಅವಿರೋಧ ಆಯ್ಕೆ ಆಗಿದ್ದು ಅರಾಧ್ಯರ ಕುತಂತ್ರದಿಂದ ಎಂದು ಹಾದಿ ಬೀದಿಯಲ್ಲಿ ಸದಸ್ಯರು ಮಾತನಾಡುತ್ತಾರೆ. ಸ್ವತಹ ತಾಲ್ಲೂಕು ವೀರಶೈವ ಲಿಂಗಾಯಿತ ಸಮಾಜದ ಉಪಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಬೃಹತ್ ಕಲ್ಯಾಣ ಮಂಟಪ ಕಟ್ಟಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಸರ್ಕಾರದ ಮಟ್ಟದಲ್ಲಿ ಅನುದಾನ ತರುವುದು,ದಾನಿಗಳ ಮನವೊಲಿಸಿ ದಾನ ಪಡೆಯುವುದನ್ನು ಮೆಚ್ಚಲೇ ಬೇಕು ಅದರೆ ಅಲ್ಲಿರುವ ಪದಾಧಿಕಾರಿಗಳು ಇರನ್ನು ಅನುಮಾನದಿಂದ ನೋಡುತ್ತಿರುವುದನ್ನು ಅರಾಧ್ಯರೇ ಹೇಳಿಕೊಂಡು ಬೇಸರ ಮಾಡಿಕೊಂಡು ಮತ್ತೆ ಅರತಿ,ಭಾರತಿ,ಮಂಜುಳ ಇವರೇ ನಮ್ಮವರು ಎಂದು ಹೊರಟು ಬಿಡುತ್ತಾರೆ. ಇದುವರಿಗೆ ಇವರು ಸ್ಪರ್ಧೆ ಮಾಡಿದ ಚುನಾವಣೆಯಲ್ಲಿ ಗೆದ್ದಿಲ್ಲ ಆದರೂ ಎಂ,ಎಲ್,ಎ ಆಗ ಬೇಕು ಕನಸು ಮಾತ್ರ ಕಾಣುತ್ತಲೇ ಇದ್ದಾರೆ.

ಸಮಾಜ ಎಂದರೆ ಜಾತಿ,ಒಳಜಾತಿ ಎಂದು ವಿಂಗಡಿಸಿ ಲೆಕ್ಕಾಚಾರ ಮಾಡುವ ಇವರು ಯಾರು ಇರಬೇಕು ಯಾರು ಇರಬಾರದು ಎಂದು ಪಟ್ಟಿ ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಇವರು ಪ್ರತಿವರ್ಷವೂ ಸದಸ್ಯತ್ವದ ಬಗ್ಗೆ ನಾಮಕಾವಸ್ತೆಗೆ ಸಬ್ಜಕ್ಟ್ ತಂದು ಒಂದು ಸಾವಿರದಿಂದ ಐದು ಸಾವಿರಕ್ಕೆ ಹೆಚ್ಚಳ ಮಾಡಿ ಯಾರು ಸದಸ್ಯರಗಬಾರುದು ನಾವೇ ಇರಬೇಕು ಎನ್ನುವ ತಂತ್ರ ಏಕೆ ಎಂದು ಕೇಳಿದರೆ ಬೇಕಾಬಿಟ್ಟಿ ಬಂದು ಸೇರುತ್ತಾರೆ ಎನ್ನುವ ಮುಖಂಡರು ಸಮಾಜವನ್ನು ವಿಜ್ಞಾನ ಮಾಡುತ್ತಿದ್ದಾರೆ.

ಸಮಾಜದ ಅರ್ಥ ತಿಳಿದುಕೊಳ್ಳಲು ಇವರಿಗೆ ಟ್ರೈನಿಂಗ್ ಕೊಟ್ಟರು ಪ್ರಯೋಜನ ಇಲ್ಲ.ಇಷ್ಷೇಲ್ಲಾ ಆದರೂ ರೇಣುಕರಾಧ್ಯರು ಮಾತ್ರ ಮಹನ್ ಪ್ರಜಾಪ್ರಭುತ್ವ ವಾದಿ ಏನೇ ಟೀಕಿಸಲಿ ನಗುನಗುತ್ತಲೇ ಸ್ವೀಕರಿಸುವ ಇವರು ಊರಲ್ಲಿ ಹುಲಿ ಮನೆಯಲ್ಲಿ ಇಲಿ ಎಂದು ಅವರ ಆತ್ಮೀಯ ಸ್ನೇಹಿತ ಎಂ.ಎಲ್.ಮೂರ್ತಿ ಹೇಳುವುದು ಮಾತ್ರ ಸತ್ಯ.

Why do communist leaders become racist?

Share

Leave a comment

Leave a Reply

Your email address will not be published. Required fields are marked *

Don't Miss

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದಲ್ಲಿ ನಡೆದಿದೆ....

ಜಿಲ್ಲೆಯಲ್ಲಿ ಮಂತ್ರಿಯಾಗಲಿಲ್ಲ ರಗಳೆ ಬಿಟ್ಟಿಲ್ಲ

ಚಿಕ್ಕಮಗಳೂರು; ಮದುವೆ ಆಗಲಿಲ್ಲ, ಹುಚ್ಚು ಬಿಡಲಿಲ್ಲ ಎಂಬ ಸ್ಥಿತಿ ಮಂತ್ರಿ ಆಗಲಿಲ್ಲ, ಓಡಾಡುವುದು ತಪ್ಪಲಿಲ್ಲ.ಎಂಬ ದುಸ್ಥಿತಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳದ್ದು. ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಂತ್ರಿಗಿರಿ ಸಿಗುವುದಿಲ್ಲ ಎಂಬುದಕ್ಕೆ ಕಾರಣ ನೀಡಿ...

Related Articles

ಪ್ರತ್ಯೇಕ ಭೀಕರ ರಸ್ತೆ ಅಪಘಾತ-9 ಕ್ಕೂ ಹೆಚ್ಚು ಮಂದಿ ಗಾಯ

ಚಿಕ್ಕಮಗಳೂರು:  ಜಿಲ್ಲೆಯ ವಿವಿಧೆಡೆ ಸಂಭವಿಸಿದ ಮೂರು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಶಾಲಾ ವಿದ್ಯಾರ್ಥಿನಿ ಹಾಗೂ...

ಆಗಸ್ಟ್ 21ರಿಂದ 25ರವರೆಗೆ ವಿಶ್ವ ಬಂಧುತ್ವದ ರಕ್ತದಾನ ಮಹಾ ಅಭಿಯಾನ

ಚಿಕ್ಕಮಗಳೂರು: ಬ್ರಹ್ಮಾಕುಮಾರೀಸ್ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಡಾ. ದಾದೀ ಪ್ರಕಾಶಮಣೀಜೀಯವರ 19ನೇ ಪುಣ್ಯಸ್ಮೃತಿ...

ಆಗಸ್ಟ್ 25ರಂದು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 25ರಂದು ರಾಜ್ಯದ...

ಸೆಪ್ಟೆಂಬರ್ 10ಕ್ಕೆ ಟಿ.ಡಿ. ರಾಜೇಗೌಡ-ಡಿ.ಎನ್. ಜೀವರಾಜ್ ಅಂತಿಮ ವಿಚಾರಣೆ

ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ...