ಚಿಕ್ಕಮಗಳೂರು: ಕಾಫಿನಾಡಲ್ಲಿ ಪಾಕ್ ಪ್ರೇಮಿಗಳು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈದ್ ಮಿಲಾದ್ ಆಚರಣೆಗೆ ಟಿಪ್ಪು ಸುಲ್ತಾನ್ ಕಟೌಟ್ ಹಾಕಿರುವ ಯುವಕರು, ಕಟೌಟ್ ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಸಾಂಗ್ ಹಾಕಿ ವಿವಾದ ಸೃಷ್ಟಿಸಿದ್ದಾರೆ.
ಹಿಂಸೆಗೆ ಪ್ರಚೋಧನೆ ನೀಡುವ ಹಾಡು ಬಳಸಿ, ನಾವು ಪಾಕಿಸ್ತಾನದ ಮುಜಾಹಿದೀನ್ ಗಳು, ಈ ಮಣ್ಣಿನ ರಕ್ಷಕರು ಎಂಬ ಹಾಡನ್ನ ಸಾಮಾಜಿಕ ಜಾಲತಾಣದಲ್ಲಿ ಹರಡಿರೋದು ಈಗ ತೀವ್ರ ಸಂಚಲನ ಸೃಷ್ಠಿಸಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬುಧವಾರ ನಾಡಿನೆಲ್ಲೆಡೆ ಈದ್ ಮಿಲಾದ್ ಸಂಭ್ರಮ. ಮುಸ್ಲಿಮರು ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈದ್ ಗಾಗಿ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿದೆ. ಆದರೆ ಆ ಕಟೌಟ್ ವಿಡಿಯೋ ಮಾಡಿಕೊಂಡು, ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಹಾಡು ಹಾಕಿರುವುದು ತೀವ್ರ ಚರ್ಚೆ ಗ್ರಾಸವಾಗಿ ಸಂಚಲನ ಮೂಡಿಸಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಾಯ್ಮಾ, ಡಿಪಿಒ ಹಾಗೂ ಎಸ್ಡಿಪಿಒ ಮಟ್ಟದ ಶಾಂತಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಳೆದ 5-6 ವರ್ಷಗಳ ನಿಯಮ, ಪದ್ಧತಿಗಳನ್ನೇ ಪಾಲಿಸಲು ಸೂಚಿಸಲಾಗಿದೆ. ಹೊಸ ಪದ್ಧತಿ ಅಥವಾ ಹೊಸ ಮಾರ್ಗಕ್ಕೆ ಯಾವುದೇ ಅವಕಾಶವಿಲ್ಲ. ಟಿಪ್ಪು ಕಟೌಟ್ ಅಳತೆ, ಸ್ಥಳ, ಸಮಯ ಹಿಂದಿನ ವರ್ಷಗಳಂತೆಯೇ ಇದೆ.
ಇನ್ಸ್ಟಾಗ್ರಾಮ್ನಲ್ಲಿ ಕಟೌಟ್ಗೆ ಆಕ್ಷೇಪಾರ್ಹ ಹಾಡು ಸೇರಿಸಿ ವಿಡಿಯೋ ವೈರಲ್, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196, 299ರ ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ. ವಿಡಿಯೋ ತಯಾರಿಸಿದವರು, ಹಂಚಿಕೊಂಡವರು ಹಾಗೂ ಸ್ಟೇಟಸ್ ಹಾಕಿದವರ ವಿರುದ್ಧ ತನಿಖೆ ನಡೆಸಿದ್ದೇವೆ. ಆರೋಪಿಗಳ ಪತ್ತೆ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಕಠಿಣ ಕಾನೂನು ಕ್ರಮದ ಎಚ್ಚರಿಕೆ. ಧಾರ್ಮಿಕ ಹಬ್ಬಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಕಟ್ಟಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಸಿ.ಟಿ.ರವಿ, ದೇಶ ದ್ರೋಹಿಗಳನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭಾರತದಲ್ಲಿದ್ದು ದೇಶದ್ರೋಹಿ ಕೆಲಸ ಮಾಡುವವರನ್ನ ಸಹಿಸಬಾರದು,ಇವರ ಬಾಲ ಕಟ್ ಮಾಡಿ ಜೈಲಿಗೆ ಕಳುಹಿಸಿ ಎಂದು ಕಿಡಿಕಾರಿದ್ದಾರೆ. ಸಂಸದ ಕೋಟಾ, ಗೋಹತ್ಯೆ ತಡೆದವರ ಮೇಲೆಯೇ ಕೇಸ್ ಮಾಡಿದ್ರು, ಪಾಕ್ ಪರ ಘೋಷಣೆ ಕೂಗಿದ್ದನ್ನ ವಿರೋಧಿಸಿದವರ ಮೇಲೆಯೇ ಪ್ರಕರಣ ದಾಖಲಿಸಿದ್ರು. ಭಾರತ ವಿರೋಧಿ ನಿಲುವಿಗೆ ಸರ್ಕಾರವೇ ಬೆಂಬಲ ಕೊಟ್ರೆ ಏನು ಅನ್ನೋ ಚರ್ಚೆ ಆಗಬೇಕಿದ್ದು, ಇದರ ವಿರುದ್ಧ ಬಿಜೆಪಿ ಸೆಡೆದು ನಿಲ್ಲಬೇಕು ಎಂದಿದ್ದಾರೆ.
ಒಟ್ಟಾರೆ, ಕಾಫಿನಾಡಲ್ಲಿ ಪಾಕ್ ಪ್ರೇಮಿಗಳ ಪ್ರೇಮ ಅನಾವರಣಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರೇ ಕಟ್ಟಿಕೊಂಡ್ರೋ ಅಥವಾ ಯಾರಾದ್ರು ಕಟ್ಟಿಸದ್ರೋ ಗೊತ್ತಿಲ್ಲ. ಆದರೆ, ಅಪ್ರಾಪ್ತರು ಪ್ಯಾಲಸ್ತೇನ್ ಬಾವುಟವನ್ನ ಬೈಕ್ ಗೆ ಕಟ್ಟಿಕೊಂಡು ಓಡಾಡಿದ್ದರು. ಈಗ ಮತ್ತೆ ಈದ್ ಹಬ್ಬದ ವೇಳೆ ಪಾಕ್ ಪ್ರೇಮಿಗಳು ಮುನ್ನೆಲೆಗೆ ಬಂದಿದ್ದಾರೆ. ಆದರೆ, ತನಿಖೆ ಚುರುಗೊಳಿಸಿರೋ ನಗರ ಪೊಲೀಸರು ಏಳು ಜನರನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಪಾಕ್ ಪ್ರೇಮಕ್ಕೆ ಕಾರಣವೇನೆಂಬ ಸತ್ಯ ಹೊರಬರಲಿದೆ.
Tipu Sultan Cutout Sedition Song – 7 people in police custody
Leave a comment