ಚಿಕ್ಕಮಗಳೂರು: ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕೆಂಪ ನಹಳ್ಳಿ ಕನಕ ಗೆಳೆಯರ ಬಳಗದಿಂದ ನಗರ ಸಮೀಪ ಆಯೋಜಿಸಿದ್ಧ ಎರಡನೇ ವರ್ಷದ ಜೋಡಿಎತ್ತಿನ ಗಾಡಿ ಓಟದ ಸ್ಪರ್ಧೆಗೆ ಬುಧವಾರ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಸುಮಾರು ೪೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ಪ್ರಥಮ ಹಾ ಗೂ ದ್ವಿತೀಯ ಹೆಚ್.ಎಫ್. ಡಿಲಕ್ಸ್ ಬೈಕ್, ತೃತೀಯ ೨೫ ಸಾವಿರ ನಗದು ಟ್ರೋಫಿ ಮತ್ತು ಚತುರ್ಥ ವಿಜೇ ತರಿಗೆ ೨೦ ಸಾವಿರ ನಗದು ಆಕರ್ಷಕ ಟ್ರೋಫಿ ವಿತರಿಸಲಾಗುವುದು ಎಂದು ಸ್ಪರ್ಧೆಯ ಆಯೋಜಕ ಕೆಂಪ ನಹಳ್ಳಿ ಸುನೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಂಜುಳಾ ಲಕ್ಷ್ಮಣ್, ಎಲ್.ಬಿ.ಎಸ್. ಶಾಲಾಭಿವೃದ್ದಿ ಸಮಿ ತಿ ಅಧ್ಯಕ್ಷ ಪ್ರತೀಪ್, ಕೆಂಪನಹಳ್ಳಿ ಗ್ರಾಮಸ್ಥರಾದ ಚರಣ್, ಹರೀಶ್, ರಾಕೇಶ್, ಶಶಾಂಕ್, ಸಚಿನ್, ಕಾರ್ತೀಕ್ , ವರುಣ್, ಡಿಂಪು, ವಸಂತ್, ದರ್ಶನ್ ಮತ್ತಿತರರು ಹಾಜರಿದ್ದರು.
The start of the cart race competition
Leave a comment