ಚಿಕ್ಕಮಗಳೂರು: ಮಾನವ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸಮಾನತೆಯನ್ನು ಸಾರುತ್ತದೆ. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಬದುಕು, ಸ್ವಾತಂತ್ರ್ಯ, ಶಿಕ್ಷಣ, ಆರೋಗ್ಯ ಮತ್ತು ಘನತೆಯಿ ಂದ ಜೀವಿಸುವುದಕ್ಕೆ ಮಾನವ ಹಕ್ಕುಗಳು ಸ್ಪೂರ್ತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾ ಜೇಶ್ವರಿ ಎನ್.ಹೆಗಡೆ ಹೇಳಿದರು.
ನಗರದ ಶ್ರೀ ಶಾರದಾ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಚಿಕ್ಕಮಗಳೂರು ವಕೀಲರ ಸಂಘ, ಜಿಲ್ಲಾ ಮಾನವ ಹಕ್ಕುಗಳ ಸಮಿತಿ ವತಿಯಿಂದ ಆಯೋಜಿಸಿದ್ಧ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ೧೯೪೮ರಲ್ಲಿ ವಿಶ್ವಸಂಸ್ಥೆಯು ಅಂಗೀಕರಿಸಿದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಮೊದಲು ಕಾ ನೂನು ದಾಖಲೆ. ಕಾಲಕ್ರಮೇಣ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮಾನವ ಹಕ್ಕುಗಳನ್ನು ಉತ್ತೇಜಿ ಸುವ ಮತ್ತು ರಕ್ಷಿಸುವ ಗುರಿಯನ್ನು ಹೊಂದಿತು. ಭಾರತದಲ್ಲೂ ರಾಷ್ಟ್ರೀಯ ಮಾನವ ಆಯೋಗ ಸ್ಥಾಪಿಸಿ ಮಾನವ ಹಕ್ಕುಗಳಿಗೆ ಮಾನ್ಯತೆ ನೀಡಲಾಯಿತು ಎಂದರು.
ಸಮಾಜದಲ್ಲಿನ ಜೀತಪದ್ಧತಿ, ಬಾಲ್ಯಾವೃತ್ತಿ ಹೋಗಲಾಡಿಸಲು ಮತ್ತು ದೌರ್ಜನ್ಯ ನಿಯಂತ್ರಣ ಕಾಯ್ದೆಗ ಳನ್ನು ಜಾರಿಗೊಳಿಸುವ ಮೂಲಕ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಈ ಬಗ್ಗೆ ಭವಿಷ್ಯ ಪ್ರಜೆ ಗಳಾದ ಕಾನೂನು ವಿದ್ಯಾರ್ಥಿಗಳು ಹೆಚ್ಚು ಅಧ್ಯಾಯನ ನಡೆಸಿ ಮಾನವ ಹಕ್ಕನ್ನ ಸಂರಕ್ಷಿಸಬೇಕು ಎಂದರು.
ದೇಶದ ಯುವಪೀಳಿಗೆಯು ಸದೃಢ ನಿರ್ಣಯ ಕೈಗೊಳ್ಳಬೇಕು. ಮಾನವ ಹಕ್ಕು ಉಲ್ಲಂಘಿಸುವವರ ವಿರುದ್ಧ ಗಟ್ಟಿಧ್ವನಿಯಿಂದ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಜನತೆ ಅನ್ಯಾಯ ಅಥವಾ ದೌರ್ಜನ್ಯಕ್ಕೆ ಒಳ ಗಾದರೆ ಕಾನೂನಿನ್ವಯ ಸ್ಪಂದಿಸುವ ಮೂಲಕ ನೊಂದವರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.
ಮಾನವ ಹಕ್ಕುಗಳ ಉಲ್ಲಂಘಿಸುವವರ ಚಿಂತೆ ನಮ್ಮದ್ದಲ್ಲ ಎಂಬ ಸ್ವಾರ್ಥ ಭಾವನೆಯಿಂದ ಜೀವಿಸದೇ, ಸ್ವಾತಂತ್ರ್ಯವಾಗಿ ಹಕ್ಕು ಚ್ಯುತಿಗೊಳಿಸುವವರ ವಿರುದ್ಧ ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳ ಬೇಕು. ಸಮಾಜದ ಉಜ್ವಲ ಭವಿಷ್ಯಕ್ಕೆ ಇಂದಿನಿಂದಲೇ ವಿದ್ಯಾರ್ಥಿಗಳು ಅಣಿಯಾದರೆ ಸ್ವಾಸ್ಥ್ಯ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ ಜಾಗತೀಕ ಒಗ್ಗಟ್ಟು ಹಾಗೂ ಸಮ ಸಮಾಜ ಕಟ್ಟುವಲ್ಲಿ ಮಾನವ ಹಕ್ಕುಗಳ ಪಾತ್ರ ದೊಡ್ಡದು. ಹಕ್ಕುಗಳನ್ನು ಉಲ್ಲಂಘಿಸದೇ, ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಉತ್ತಮ ಒಡನಾಡ ಹೊಂದಿದ್ದರೆ ಮಾನವ ಹಕ್ಕು ಸದೃಢವಾಗಿ ಬೇರೂರಲು ಸಾಧ್ಯ ಎಂದು ತಿಳಿಸಿದರು.
ತಾಯಿಗರ್ಭದಲ್ಲಿ ಹೆಣ್ಣು ಬ್ರೂಣವಾದರೆ ಚಿಗುರಿನಲ್ಲೇ ನಾಶಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದು ಕುಟುಂಬದಿಂದಲೇ ಅಪಸ್ವರ ಹೆಚ್ಚಿನ ಪ್ರಮಾಣದಲ್ಲಿದೆ. ಹೆಣ್ಣು-ಗಂಡು ಅಥವಾ ಜಾತಿ-ಧರ್ಮವೆಂದು ಮನುಷ್ಯನು ಅರ್ಜಿ ಹಾಕಿ ಜನಿಸುವುದಿಲ್ಲ. ಜನನದ ಬಳಿಕ ಕೀಳರಿಮೆ ಮಾಡುವುದು ಕೂಡಾ ಮಾನವ ಹಕ್ಕಿ ನ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ ಮಾನವ ಹಕ್ಕಿನ ವಿವರಗ ಳು ಸಮುದ್ರದ ಆಳದಷ್ಟಿದೆ. ಈ ಹಕ್ಕಿಗಾಗಿ ಎಲ್ಲಾ ಕಾಯ್ದೆಗಳು ಜಾರಿಗೊಳಿಸಲು ಸಾಕಷ್ಟು ನಿಯಮ, ಇಲಾಖೆ ಗಳ ಸುತ್ತೋಲೆಗಳಿದ್ದು ಅನೇಕ ಸೆಕ್ಷನ್‌ನಷ್ಟು ಹೊಂದಿರುವ ರಾಷ್ಟ್ರೀಯ ಮಾನವ ಹಕ್ಕಿಗೆ ರಾಷ್ಟ್ರದ ಮುಖ್ಯ ನ್ಯಾಯಮೂರ್ತಿಗಳು ರೂವಾರಿಗಳಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದ ಸ್ಕೂಲ್ ಆಫ್ ಲಾದ ಪ್ರಾಂಶುಪಾಲ ಎಸ್.ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಹೆಚ್.ಸಿ.ನಟರಾಜ್, ಕಾರ್ಯದ ರ್ಶಿ ಕೃಷ್ಣಯ್ಯಗೌಡ, ಶ್ರೀ ಶಾರದ ಸ್ಕೂಲ್ ಆಫ್ ಲಾ ಸಂಸ್ಥಾಪಕ ಜಿ.ಆರ್.ಶ್ರವಣ್, ಅಧ್ಯಾಪಕ ವೃಂದ, ವಿದ್ಯಾ ರ್ಥಿಗಳು ಉಪಸ್ಥಿತರಿದ್ದರು.
Human rights proclaim the dignity and equality of the individual.
Leave a comment