Home namma chikmagalur chikamagalur ಬೌದ್ಧ ಧರ್ಮದ ವಿಧಿವಿಧಾನದಡಿ ಹತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ
chikamagalurHomeLatest Newsnamma chikmagalur

ಬೌದ್ಧ ಧರ್ಮದ ವಿಧಿವಿಧಾನದಡಿ ಹತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ

Share
Share

ಚಿಕ್ಕಮಗಳೂರು:  ಬೌದ್ಧ ವಿಧಿವಿಧಾನದಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಗಳ ಬದುಕು ಹಸನಾಗಲೀ. ದಾಂಪತ್ಯ ಎರಡು ಮನಸ್ಸನ್ನು ಪರಸ್ಪರ ಬೆಸೆಯುವ ಕೊಂಡಿ. ಅನೋನ್ಯತೆ, ಸಹ ಬಾಳ್ವೆ ದಾರಿಯಲ್ಲಿ ನವಜೋಡಿಗಳು ಹೆಜ್ಜೆಯಿಡಬೇಕು ಎಂದು ನಲಂದ ಬುದ್ಧ ವಿಹಾರದ ಶ್ರೀ ಭಂತೇ ಬೋ ಧಿರತ್ನ ಸ್ವಾಮೀಜಿ ಹೇಳಿದರು.

ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ದಲಿತ ಸಂಘಟನಾ ಸಮಿತಿ ಅಂಬೇಡ್ಕರ್ ಧ್ವನಿ ವತಿಯಿಂದ ೧೩೫ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಿದ್ಧ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವಜೋಡಿಗಳಿಗೆ ಆರ್ಶೀವದಿಸಿ ಅವರು ಮಾತನಾಡಿದರು.

ಬೌದ್ಧ ಧರ್ಮದ ಅನುಸಾರ ಸುಮಾರು ೧೦ ಜೋಡಿಗಳು ಸರಳ, ಸುಂದರ ಹಾಗೂ ಬೌದ್ಧ ಸಂಪ್ರದಾ ಯದಂತೆ ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿನ ಆಡಂಬರದ ಡಿಜೆ, ಮಂಗಳವಾದ್ಯ ಹೊರತಾಗಿ ಅರ್ಥ ಗರ್ಭೀತವಾಗಿ ಸರಳ, ಸುಂದರ ಹಾಗೂ ಬೌದ್ಧ ಸಂಪ್ರದಾಯದಂತೆ ಕಾಲಿಟ್ಟಿರುವ ಜೋಡಿಗಳು ಮುಂದಿನ ಬದುಕನ್ನು ಬುದ್ಧನ ಹಾದಿಯಲ್ಲಿ ಸಾಗುವುದು ರೂಢಿಸಿಕೊಳ್ಳಬೇಕು ಎಂದರು.

ಅಂಬೇಡ್ಕರ್‌ರಂತೆ ಸರಳ ಜೀವನ, ಸಂಸ್ಕಾರಯುತ ಬದುಕಿನ ಆಶಯದಂತೆ ನವಜೋಡಿಗಳು ಹೆಜ್ಜೆ ಯಿಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಶೇಷವಾಗಿ ಅಂಬೇಡ್ಕರ್ ಜಯಂತಿಯಲ್ಲಿ ಸಾಮೂಹಿಕ ವಿವಾ ಹ ಕಾರ್ಯಕ್ರಮ ಸಮಾಜಕ್ಕೆ ಸ್ಪೂರ್ತಿ ತಂದಿದೆ. ಈ ಕಾರ್ಯಕ್ರಮ ಆಯೋಜಿಸಿರುವ ದಸಂಸ ಸಂಘಟನೆ ಮುಂದೆ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡಲಿ ಎಂದು ಆಶಿಸಿದರು.

ದಸಂಸ ರಾಜ್ಯ ಕಾರ್ಯಾಧ್ಯಕ್ಷ ಜೆ.ಆರ್.ರಾಜಾಶಂಕರ್ ಮಾತನಾಡಿ ಸಂಘಟನೇ ರಾಜ್ಯ ಸಮಿತಿ ನೇತೃ ತೃತ್ವದಲ್ಲಿ ಸಾಮೂಹಿಕ ವಿವಾಹ ನಡೆಸಲು ಸರ್ವರ ಒಪ್ಪಿಗೆ ಮೇರೆಗೆ ತೀರ್ಮಾನಿಸಿದ್ದು ಕಳೆದ ಒಂದು ತಿಂಗ ಳಿನಿಂದ ಅರ್ಜಿಗೆ ಅವಕಾಶ ಕಲ್ಪಿಸಿದ್ದು ಅನೇಕ ಅರ್ಜಿಗಳ ಬಳಿಕ ಅಂತಿಮವಾಗಿ ೧೦ ಜೋಡಿಗಳನ್ನು ಆಯ್ಕೆ ಮಾಡಿ ಸಾಮೂಹಿಕ ವಿವಾಹ ಪೂರೈಸಲಾಗಿದೆ ಎಂದರು.

ಅಂಭೇಡ್ಕರ್ ಕನಸಿನಂತೆ ಜಾತಿ ನಿರ್ಮೂಲನೆ, ಅಂತರ್ಜಾತಿ ವಿವಾಹ ಪ್ರೋತ್ಸಾಹ ಹಾಗೂ ಬೌದ್ಧ ಸಂ ಪ್ರದಾಯದಂತೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ವಿವಾಹ ಕಾರ್ಯ ಕ್ರಮಕ್ಕೆ ಯಾವುದೇ ವಿರೋಧವಿಲ್ಲದೇ, ಸಕುಟುಂಬದ ಒಪ್ಪಿಗೆ ಮೇರೆಗೆ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿ ದೆ ಎಂದು ತಿಳಿಸಿದರು.

ದಸಂಸ ರಾಜ್ಯಾಧ್ಯಕ್ಷೆ ಎಲ್.ಸಿ.ವಸಂತ್‌ಕುಮಾರ್ ಮಾತನಾಡಿ ಅತಿಯಾದ ಖರ್ಚಿಲ್ಲದೇ ಕುಟುಂಬಕ್ಕೂ ಹೊರೆಯಾಗದೇ ಉಚಿತ ಸಾಮೂಹಿಕ ವಿವಾಹ ನೆರವೇರಿಸಲಾಗಿದೆ. ಒಟ್ಟು ೧೦ ಜೋಡಿಗಳು ಬೌದ್ಧ ಸಂಪ್ರ ದಾಯದಂತೆ ಸುಖಮಯ ಜೀವನಕ್ಕೆ ಕಾಲಿರಿಸಿದ್ದು, ಹತ್ತು ಜೋಡಿಗಳ ಪೈಕಿ ಒಂದು ವಿಕಲಚೇತನ ಹಾಗೂ ಅಂತರ್ಜಾತಿ ಜೋಡಿಗಳಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳರು, ಉಸ್ತುವಾರಿ ಅಧ್ಯಕ್ಷೆ ಗುಲಾಬಿ, ಮಹಿ ಳಾ ಘಟಕದ ಜಿಲ್ಲಾಧ್ಯಕ್ಷೆ ಹೇಮಾವತಿ, ಮಾಜಿ ಶಾಸಕ ಬಿ.ಬಿ.ಲಿಂಗಯ್ಯ, ಮಲೆನಾಡು ಕರಾವಳಿ ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎನ್.ಶಾಂತಮೂರ್ತಿ, ಮುಖಂಡರುಗಳಾದ ಜಿತೇಂದ್ರ ಬಾಬು, ಆನಂದ್,ಆರ್. ಮೋಹನ್‌ಕುಮಾರ್, ಗಿರೀಶ್, ಹೇಮಾವತಿ ಮತ್ತಿತರರಿದ್ದರು.

Ten couples get married under Buddhist rituals

Share

Leave a comment

Leave a Reply

Your email address will not be published. Required fields are marked *

Don't Miss

ಡಾ.ಮಂಜುನಾಥ್ ಚಿಕ್ಕ‌ಮಗಳೂರು ಡಿಎಚ್ಒ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕ‌ಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಕೆ.ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಹಿಂದೆ ಡಿಎಚ್ ಒ ಆಗಿದ್ದ ಅಶ್ವಥ್ ಬಾಬು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಂತಾನೋತ್ಪತ್ತಿ...

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Related Articles

ಕಳಸದಲ್ಲಿ ಕಾಡುಕೋಣ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಸಮೀಪ ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ...

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ...

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್...