ಚಿಕ್ಕಮಗಳೂರು: : ಜಿಲ್ಲಾ ಗಂಗಾಮತಸ್ಥರ ಸಂಘ ಹಾಗೂ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ತಾಲ್ಲೂಕಿನ ಗಂಗಾಮತಸ್ಥರ ಸಂಘಗಗಳ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ನಿವೃತ್ತ ನೌಕರರುಗಳಿಗೆ ಸನ್ಮಾನ ಸಮಾರಂಭವನ್ನು ನ.೩೦ ರಂದು ಬೆಳಗ್ಗೆ ೧೧ ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಗೌರವಾಧ್ಯಕ್ಷ ಕೆ.ಎಂ ಧನಂಜಯ ಅವರು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಹಾವೇರಿ ಜಿಲ್ಲೆಯ ಕಂಚಾರಗಟ್ಟಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಉದ್ಘಾಟನೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ನೆರೆವೇರಿಸುವರು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್ ವಸಂತಕುಮಾರ್ ವಹಿಸುವರು. ಭಾವಚಿತ್ರಗಳಿಗೆ ಪುಷ್ಪಾರ್ಚನೆಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಎಂಎಲ್‌ಸಿ ಎಸ್.ಎಲ್ ಭೋಜೇಗೌಡ ನೆರವೇರಿಸುವರು ಎಂದು ಹೇಳಿದರು.
ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಗರಸಭಾಧ್ಯಕ್ಷೆ ಶೀಲಾದಿನೇಶ್ ನಿವೃತ್ತ ನೌಕರರನ್ನು ಸನ್ಮಾನಿಸುವರು. ಸಮಾಜದ ಮುಖಂಡರು, ಉದ್ಯಮಿಗಳಾದ ಎಸ್. ಚಂದ್ರಶೇಖರ್ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸುವರು ಎಂದರು.
ಕಾರ್ಯಕ್ರಮದಲ್ಲಿ ಸಿ.ಟಿ. ಅಶೋಕ್, ಎಸ್.ಹೆಚ್ ವೆಂಕಟೇಶ್, ಎಂ.ಶ್ರೀನಿವಾಸ್, ಡಾ. ಟಿ.ಕೃಷ್ಣಯ್ಯ, ರಾಜು.ಜೆ, ಕುಮಾರ್.ಕೆ, ಹಾಲಪ್ಪ, ನಾರಾಯಣ, ಷಡಾಕ್ಷರಿ, ಬಸವರಾಜು, ಹನುಮಂತಪ್ಪ ಬಾರ್ಕೆರ್, ಎಂ.ಆರ್ ಶೇಖರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲೇಶ್ ಎ.ಎಂ, ವೆಂಕಟೇಶ್, ಜಿ.ಪುಟ್ಟಪ್ಪ, ಜೆ.ವಿಶ್ವನಾಥ್, ಧರ್ಮೇಶ್, ಎನ್.ಎಸ್. ಮಂಜಪ್ಪ, ಬಿ.ವಿ ತೇಜಾವತಿ ಉಪಸ್ಥಿತರಿದ್ದರು.
Talent award to students from Ganga-affiliated society on November 30
Leave a comment