Home namma chikmagalur chikamagalur ಕೊಟ್ಟಿಗೆಹಾರದಿಂದ ಮುಂಡಾಜೆಗೆ ಸುರೇಶ್ ಕುಮಾರ್ ವಿಶೇಷ ಪಾದಯಾತ್ರೆ
chikamagalurHomeLatest Newsnamma chikmagalur

ಕೊಟ್ಟಿಗೆಹಾರದಿಂದ ಮುಂಡಾಜೆಗೆ ಸುರೇಶ್ ಕುಮಾರ್ ವಿಶೇಷ ಪಾದಯಾತ್ರೆ

Share
Share

ಕೊಟ್ಟಿಗೆಹಾರ: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 527 ವೀರ ಯೋಧರ ಸ್ಮರಣಾರ್ಥ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಕೊಟ್ಟಿಗೆಹಾರದಿಂದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದವರೆಗೆ ವಿಶೇಷ ಪಾದಯಾತ್ರೆ ಕೈಗೊಂಡಿದ್ದಾರೆ.

ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಗ್ರಾಮವಾದ ಮುಂಡಾಜೆಯಲ್ಲಿ ಸ್ಥಳೀಯ ಪರಿಸರ ಪ್ರೇಮಿ ಸಚಿನ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣಾರ್ಥ 527 ವಿವಿಧ ಜಾತಿಯ ಮರಗಳನ್ನು ನೆಟ್ಟು ಬೆಳೆಸುವ ಮೂಲಕ ‘ಕಾರ್ಗಿಲ್ ಸ್ಮಾರಕ ವನ’ ನಿರ್ಮಿಸಿದ್ದಾರೆ. ದೇಶಭಕ್ತಿಯೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೂ ಸಾರುತ್ತಿರುವ ಸಚಿನ್ ಅವರ ಈ ವಿಶಿಷ್ಟ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, ಸ್ಮಾರಕ ವನಕ್ಕೆ ಭೇಟಿ ನೀಡಿ ಸಚಿನ್ ಅವರನ್ನು ಅಭಿನಂದಿಸುವುದರ ಜತೆಗೆ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲು ಪಾದಯಾತ್ರೆ ಕೈಗೊಂಡಿದ್ದಾರೆ.

30 ಕಿ.ಮೀ. ಪಾದಯಾತ್ರೆ

ಕೊಟ್ಟಿಗೆಹಾರದಿಂದ ಆರಂಭವಾಗಿರುವ ಪಾದಯಾತ್ರೆ ಪ್ರಕೃತಿ ರಮಣೀಯ ಚಾರ್ಮಾಡಿ ಘಾಟ್ ಮಾರ್ಗವಾಗಿ ಸಾಗಿ ಸುಮಾರು 30 ಕಿ.ಮೀ. ದೂರ ಕ್ರಮಿಸಿ ಮುಂಡಾಜೆ ಗ್ರಾಮವನ್ನು ತಲುಪಲಿದೆ. ಪಾದಯಾತ್ರೆಯ ಮೂಲಕ ಯೋಧರ ತ್ಯಾಗವನ್ನು ಸ್ಮರಿಸುವುದರ ಜತೆಗೆ ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶವನ್ನು ಸಾರುವ ಉದ್ದೇಶವನ್ನು ಹೊಂದಲಾಗಿದೆ.

ಸೈಕ್ಲಿಂಗ್ ವೇಳೆ ಸಿಕ್ಕ ಪರಿಚಯ

ಈ ಹಿಂದೆ ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕ್ಲಿಂಗ್ ಮೂಲಕ ತೆರಳಿದ್ದ ಸಂದರ್ಭದಲ್ಲಿ ಮುಂಡಾಜೆಯಲ್ಲಿರುವ ‘ಕಾರ್ಗಿಲ್ ಸ್ಮಾರಕ ವನ’ದ ಕುರಿತು ಪರಿಚಯವಾಗಿತ್ತು. 527 ಹುತಾತ್ಮ ಯೋಧರ ನೆನಪಿಗಾಗಿ 527 ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುತ್ತಿರುವ ಸಚಿನ್ ಅವರ ಕಾರ್ಯವನ್ನು ಅಂದೇ ಮೆಚ್ಚಿಕೊಂಡಿದ್ದ ಅವರು, ಇದೀಗ ಪಾದಯಾತ್ರೆಯ ಮೂಲಕ ಸ್ಮಾರಕ ವನಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದಾರೆ.

ಯೋಧರ ತ್ಯಾಗವನ್ನು ಸ್ಮರಿಸುವುದರ ಜತೆಗೆ ಪರಿಸರ ಸಂರಕ್ಷಣೆಗೆ ಪ್ರೇರಣೆ ನೀಡುವ ಸಚಿನ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಪಾದಯಾತ್ರೆಯಲ್ಲಿ ಸ್ಥಳೀಯರಾದ ಟಿ.ಎಂ. ಗಜೇಂದ್ರ, ಸಂಜಯ್ ಗೌಡ, ಅಭಿಲಾಷ್, ಸಾಗರ್, ವಿನಯ್ ಹಾಗೂ ಸಂದೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Suresh Kumar Special Trek from Kottigehar to Mundaje

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಪಂನ 36 ಕ್ಷೇತ್ರಗಳಿಗೆ ಅಂತಿಮ ಮೀಸಲಾತಿ ಪ್ರಕಟ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ 36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ನವೆಂಬರ್ 23ರಂದು ಹೊರಡಿಸಿರುವ ಕರ್ನಾಟಕ ರಾಜಪತ್ರದ ಅಧಿಸೂಚನೆಯಲ್ಲಿ...

ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ

ಕನ್ನಡ,ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವ ಬದಲಿಗೆ ಕನ್ನಡ, ಕನ್ನಡ ನಮಗೆ ದೇಣಿಗೆ ನಿಮಗೆ ಬೇಕಾದ ಪ್ರಶಸ್ತಿಗಳು ಎನ್ನುವೇ ಅಂತಕ್ಕೆ ಸಾಹಿತ್ಯ ಪರಿಷತ್ ಗೆ ವಕ್ಕರಿಸಿರುವ ಕೆಲವರಿಗೆ ಊಟ,ತಿಂಡಿ,ನಿದ್ದೆ ಬರುವುದು ಕಡು...

Related Articles

ಸಚಿವರ ಸಭೆ ಬಹಿಷ್ಕರಿಸಲು ಸಿ.ಟಿ. ರವಿ ನಿರ್ಧಾರ

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿಗೆ ಆಗಮಿಸಿರುವ ಕಾಡಾನೆಗಳನ್ನು ಭದ್ರಾ...

ಅನ್ನದಾತರ “ಕಿವಿಗೆ “ಹೂವು “ಶಾಸಕಿ ನಯನ ಹೈ ಡ್ರಾಮಾ.

ಮೂಡಿಗೆರೆ :  ಇಲ್ಲಿನ ಕಾಫಿ ಬೆಳೆಗಾರರು, ರಹಿತರು, ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡು ಪ್ರತಿ ವರ್ಷ...

ಆನೆ ಹಾವಳಿಗೆ ಬೇಸತ್ತ ರೈತ-ಪ್ರತಿಭಟನೆ ಸ್ಥಳದಲ್ಲೇ ವಿಷ ಸೇವಿಸಲು ಯತ್ನ

ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ತೋಟ ಹಾಗೂ ಬದುಕು ಕಳೆದುಕೊಂಡ ರೈತನೊಬ್ಬ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲೇ ವಿಷ...

ಹೈಡ್ರಾಮಾಕ್ಕೆ ತಾತ್ಕಾಲಿಕ ತೆರೆ-ತವರು ಸೇರಿದ 21 ಗಜಪಡೆ

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರ ಕಾಫಿನಾಡಿನಲ್ಲಿ ಭಾರಿ...