ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ 36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ನವೆಂಬರ್ 23ರಂದು ಹೊರಡಿಸಿರುವ ಕರ್ನಾಟಕ ರಾಜಪತ್ರದ ಅಧಿಸೂಚನೆಯಲ್ಲಿ ಕ್ಷೇತ್ರವಾರು ಮೀಸಲಾತಿಯನ್ನು ಸ್ಪಷ್ಟಪಡಿಸಲಾಗಿದ್ದು, ಇದರೊಂದಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಯ ಪ್ರಮುಖ ಪೂರ್ವಸಿದ್ಧತಾ ಪ್ರಕ್ರಿಯೆಯೊಂದು ಪೂರ್ಣಗೊಂಡಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಕಲಂ 162ರ ಅನ್ವಯ ಹಾಗೂ ಕರ್ನಾಟಕ ಗ್ರಾಮ ಪಂಚಾಯಿತಿಗಳ ಕ್ಷೇತ್ರಗಳ ವಿಂಗಡಣೆ ಮತ್ತು ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದ 2023ರ ನಿಯಮಗಳನ್ವಯ ಮೀಸಲಾತಿ ನಿಗದಿಪಡಿಸಲಾಗಿದೆ. ಮೊದಲು ಅಕ್ಟೋಬರ್ 9ರಂದು ಕರಡು ಅಧಿಸೂಚನೆ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಅಂತಿಮ ಪಟ್ಟಿಯ ಪ್ರಕಾರ 36 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳು ಸಾಮಾನ್ಯ, 8 ಕ್ಷೇತ್ರಗಳು ಸಾಮಾನ್ಯ ಮಹಿಳೆ, 5 ಕ್ಷೇತ್ರಗಳು ಅನುಸೂಚಿತ ಜಾತಿ, 6 ಕ್ಷೇತ್ರಗಳು ಅನುಸೂಚಿತ ಜಾತಿ ಮಹಿಳೆ, 6 ಕ್ಷೇತ್ರಗಳು ಹಿಂದುಳಿದ ವರ್ಗ ‘ಅ’ ಮಹಿಳೆ ಹಾಗೂ ಒಂದು ಕ್ಷೇತ್ರವನ್ನು ಹಿಂದುಳಿದ ವರ್ಗ ‘ಬ’ ಮಹಿಳೆಗೆ ಮೀಸಲಿಡಲಾಗಿದೆ.
ಕ್ಷೇತ್ರವಾರು ಮೀಸಲಾತಿ
ಮೆಣಸೆ – ಸಾಮಾನ್ಯ
ಶೃಂಗೇರಿ (ಕಸಬಾ) – ಅನುಸೂಚಿತ ಜಾತಿ ಮಹಿಳೆ
ಹರಿಹರಪುರ – ಅನುಸೂಚಿತ ಜಾತಿ ಮಹಿಳೆ
ಹರಂದೂರು – ಸಾಮಾನ್ಯ ಮಹಿಳೆ
ಕೊಪ್ಪ, ಗ್ರಾಮಾಂತರ – ಹಿಂದುಳಿದ ‘ಅ’ ವರ್ಗ ಮಹಿಳೆ
ಹೇರೂರು – ಸಾಮಾನ್ಯ
ಮುತ್ತಿನಕೋಪ್ಪ – ಸಾಮಾನ್ಯ ಮಹಿಳೆ
ಕರ್ಕೇಶ್ವರ – ಅನುಸೂಚಿತ ಜಾತಿ
ಬಿ.ಕಣಬೂರು – ಸಾಮಾನ್ಯ
ಲಕ್ಕವಳ್ಳಿ – ಅನುಸೂಚಿತ ಜಾತಿ
ಅಮೃತಾಪುರ – ಸಾಮಾನ್ಯ ಮಹಿಳೆ
ಲಿಂಗದಹಳ್ಳಿ – ಹಿಂದುಳಿದ ‘ಅ’ ವರ್ಗ ಮಹಿಳೆ
ಮಾವಿನಕೆರೆ (ಕಳಸ) – ಅನುಸೂಚಿತ ಜಾತಿ
ಹೊರನಾಡು – ಅನುಸೂಚಿತ ಜಾತಿ
ಖಾಂಡ್ಯ – ಸಾಮಾನ್ಯ
ಜಾಗರ – ಸಾಮಾನ್ಯ ಮಹಿಳೆ
ಬ್ಯಾರವಳ್ಳಿ – ಅನುಸೂಚಿತ ಜಾತಿ ಮಹಿಳೆ
ಕುರುವಂಗಿ – ಹಿಂದುಳಿದ ‘ಅ’ ವರ್ಗ ಮಹಿಳೆ
ಲಕ್ಯಾ – ಹಿಂದುಳಿದ ‘ಅ’ ವರ್ಗ ಮಹಿಳೆ
ಕಳಸಾಪುರ – ಸಾಮಾನ್ಯ ಮಹಿಳೆ
ಅಂಬಳೆ – ಹಿಂದುಳಿದ ‘ಅ’ ವರ್ಗ ಮಹಿಳೆ
ವಸ್ತಾರೆ – ಸಾಮಾನ್ಯ
ಆಲ್ದೂರು – ಸಾಮಾನ್ಯ
ಶಿವನಿ – ಸಾಮಾನ್ಯ
ಬಗ್ಗವಳ್ಳಿ – ಅನುಸೂಚಿತ ಜಾತಿ ಮಹಿಳೆ
ಹಿರೇನಲ್ಲೂರು – ಹಿಂದುಳಿದ ‘ಬ’ ವರ್ಗ ಮಹಿಳೆ
ಯಗಟಿ – ಹಿಂದುಳಿದ ‘ಅ’ ವರ್ಗ ಮಹಿಳೆ
ದೊಡ್ಡಪಟ್ಟಣಗೆರೆ – ಅನುಸೂಚಿತ ಜಾತಿ ಮಹಿಳೆ
ಸಿಂಗಟಗೆರೆ – ಸಾಮಾನ್ಯ
ಸಖರಾಯಪಟ್ಟಣ – ಸಾಮಾನ್ಯ
ದೇವನೂರು – ಸಾಮಾನ್ಯ ಮಹಿಳೆ
ಕೂವೆ – ಅನುಸೂಚಿತ ಜಾತಿ
ಬಣಕಲ್ – ಸಾಮಾನ್ಯ
ಬಿದರಹಳ್ಳಿ – ಸಾಮಾನ್ಯ ಮಹಿಳೆ
ಬಿಳುಗೂಳ – ಸಾಮಾನ್ಯ ಮಹಿಳೆ
ಗೋಣಿಬೀಡು – ಅನುಸೂಚಿತ ಜಾತಿ ಮಹಿಳೆ.
ಮಹಿಳಾ ಮೀಸಲಾತಿಗೆ ಹೆಚ್ಚಿನ ಆದ್ಯತೆ
Final reservation list announced for 36 constituencies of Chikkamagaluru Zilla Panchayat
Leave a comment