Home namma chikmagalur chikamagalur ಭದ್ರ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ
chikamagalurHomeLatest Newsnamma chikmagalur

ಭದ್ರ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

Share
Share

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರಿಸುವುದನ್ನು ವಿರೋಧಿಸಿ ತಾಲ್ಲೂಕಿನ ಮುತ್ತೋಡಿ ಸಮೀಪದ ಹೊನ್ನಾಳ ಗ್ರಾಮದಲ್ಲಿ ಸೋಮವಾರ ನಾಗರೀಕ ಮತ್ತು ರೈತ ಹೋರಾ ಟ ಸಮಿತಿ, ಕನ್ನಡಪರ, ದಲಿತ, ರೈತ, ಕೃಷಿ ಕಾರ್ಮಿಕರ ಸಂಘಟನೆಗಳು ರಸ್ತೆ ಸಂಪರ್ಕ ಬಂದ್‌ಗೊಳಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯ್‌ಕು ಮಾರ್ ಹಾಸನ ಉಸ್ತುವಾರಿ ಸಚಿವ ಶಿವಲಿಂಗೇಗೌಡರು ಬೇಲೂರು ಭಾಗದಲ್ಲಿರುವ ಕಾಡಾನೆಗಳನ್ನು ಮೂ ಡಿಗೆರೆಯ ಭದ್ರಾ ಅಭಯಾರಣ್ಯಕ್ಕೆ ಕಳುಹಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದರು.

ಅರಣ್ಯ ಇಲಾಖೆ ಸ್ಥಳೀಯ ಆನೆಗಳಿಗೆ ಸಮರ್ಪಕ ಆಹಾರ ಒದಗಿಸುತ್ತಿಲ್ಲ. ಈ ಮಲೆನಾಡಿನ ನೆಲ, ಜಲ , ಕಾಡು ರಕ್ಷಿಸಿರುವ ರೈತರು, ಬೆಳೆಗಾರರು ಎಲ್ಲಿ ಹೋಗಬೇಕು. ಈ ನಡುವೆ ನೆರೆ ತಾಲ್ಲೂಕಿನಿಂದ ಅಭಯಾರ ಣ್ಯಕ್ಕೆ ಮತ್ತಷ್ಟು ಆನೆಗಳನ್ನು ಬಿಡುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.

ಇತ್ತೀಚೆಗೆ ಬೇರೆಡೆಯಿಂದ ಹುಲಿಯನ್ನು ಕಾಲರ್‌ಐಡಿ ಅಳವಡಿಸಿ ಅಭಯಾರಣ್ಯಕ್ಕೆ ಬಿಡಲಾಗಿದೆ. ಆದ ರೆ ಇಂದಿಗೂ ಅರಣ್ಯ ಇಲಾಖೆಗೆ ಹುಲಿ ಎಲ್ಲಿದೆ ಎಂಬುವ ಬಗ್ಗೆ ಕೊಂಚುವ ಮಾಹಿತಿಯಿಲ್ಲ. ಇನ್ನೊಂದೆಡೆ ಭದ್ರ ಅಭಯಾರಣ್ಯವು ೧ ಲಕ್ಷ ಎಕರೆ ಪ್ರದೇಶವಿದೆ ಎಂದು ಸಚಿವ ಶಿವಲಿಂಗೇಗೌಡರು, ಕಾಡಾನೆಗಳ ಹಿಂ ಡನ್ನು ಕಳುಹಿಸುವ ಆದೇಶ ಸರಿಯಲ್ಲ ಎಂದರು.

ಬೇಲೂರು ಭಾಗದಲ್ಲಿ ೫೦ಕ್ಕೂ ಹೆಚ್ಚು ಕಾಡಾನೆಗಳಲ್ಲಿ ಗಂಡು-ಹೆಣ್ಣು, ಮರಿ ಹಾಗೂ ಗರ್ಭೀಣಿ ಆನೆಗಳಿವೆ. ಅವೈಜ್ಞಾನಿಕವಾಗಿ ಅರಣ್ಯ ಇಲಾಖೆಯವರು ಓಡಿಸಿದರೆ, ರೈತರು ಮತ್ತು ಬೆಳೆಗಾರರ ತೋಟ ಗಳು ಸರ್ವನಾಶವಾಗಲಿವೆ, ಅಲ್ಲದೇ ಜನಜೀವನ ತೀವ್ರ ಸಂಕಷ್ಟಕ್ಕೆ ದೂಡಲಿದೆ ಎಂದರು.

ಅರಣ್ಯ ಇಲಾಖೆ ಸೆಟ್‌ಲೈನ್ ಚಿತ್ರದ ಮೂಲಕ ಆನೆಗಳ ಸಂಚಾರ ಗುರುತಿಸಿ, ಅವಾಸ ಸ್ಥಾನ ಪತ್ತೆ ಹಚ್ಚಿ ಆನೆಗಳನ್ನು ಮೂಲ ಸ್ಥಾನಕ್ಕೆ ಕಳುಹಿಸಿದರೆ ಸಮಸ್ಯೆ ಮುಗಿಯಲಿದೆ. ಆದರೆ ಸ್ಥಳೀಯವಾಗಿ ಆನೆ ಬ್ಯಾರಿಕೇ ಡ್, ಆನೆಟ್ರಂಚ್ ಸಮರ್ಪಕವಾಗಿ ಮಾಡಿಲ್ಲ. ಜೊತೆಗೆ ಕಾಡುಕೋಣ ಹಾವಳಿಯಿಂದ ತೋಟಗಳು ನಾಶವಾ ಗುತ್ತಿವೆ ಎಂದರು.

ಸ್ಥಳೀಯ ಗ್ರಾಮಸ್ಥ ಜಾನಕಿರಾಮ್ ಮಾತನಾಡಿ ಆನೆ ಹಾವಳಿ ತಪ್ಪಿಸುವ ಸಲುವಾಗಿ ಜಿಲ್ಲೆಯ ಶಾಸ ಕರು ರಾಜೀನಾಮೆ ನೆಪವೊಡ್ಡಿ ಜನರ ಕಣ್ಣಿಗೆ ಮಣ್ಣೆರಚಬಾರದು. ರಾಜೀನಾಮೆ ಕೊಡುವ ಇಚ್ಚಾಸಕ್ತಿ ಇದ್ದಲ್ಲಿ ನೇರವಾಗಿ ರಾಜ್ಯಪಾಲರಿಗೆ ತಲುಪಿಸಬೇಕೇ ಹೊರತು ಪತ್ರಿಕಾಗೋಷ್ಠಿಗಳ ಮೂಲಕ ನಾಟಕ ಆಡಬಾರದು ಎಂದರು.

ಮೂಡಿಗೆರೆ ಮಹಿಳಾ ಶಾಸಕಿ ಗಟ್ಟಿಧ್ವನಿಯಿಂದಲೇ ಮಲೆನಾಡಿನ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಶೃಂಗೇರಿ ಶಾಸಕರು ೧.೨೪ ಲಕ್ಷ ಅರಣ್ಯ ಪ್ರದೇಶವಿದೆ ಕಾಡಾನೆಗಳನ್ನು ಬಿಡಬಹುದೆಂದು ಉತ್ತರಿಸುತ್ತಾ ರೆ. ಅಷ್ಟು ಕಾಡಾನೆಗಳಿಗೆ ಮೇವಿನ ಸೌಲಭ್ಯವಿದೆಯೇ ಎಂದ ಅವರು ಸ್ಥಳೀಯ ಆನೆಗಳಿಗೆ ಸಮರ್ಪಕ ಮೇ ವು ಒದಗಿಸುತ್ತಿಲ್ಲ. ಮತ್ತಷ್ಟು ಆನೆಗಳಿಗೆ ಮೇವು ಒದಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸ್ಥಳೀಯ ಗ್ರಾಮಸ್ಥರು ಮಾತನಾಡಿ ಕಾಡಾನೆಗಳ ಸಮಸ್ಯೆ ಶಾಶ್ವತ ಬಗೆಹರಿಸುವ ಯೋಜನೆ ಜಾರಿಯಾ ಗಬೇಕು. ರೈತರು, ಕೂಲಿಕಾರ್ಮಿಕರು, ಬೆಳೆಗಾರರು ಜೀವನಕ್ಕೆ ಕುತ್ತಾಗುವ ಯಾವುದೇ ಕಾರ್ಯ ಮಾಡಬಾ ರದು. ಒಂದು ವೇಳೆ ಸ್ಥಳೀಯ ವಿರೋಧದ ನಡುವೆ ಕಾಡಾನೆಗಳ ಭದ್ರಯಾರಣ್ಯಕ್ಕೆ ಬಿಡಲು ಯತ್ನಕ್ಕೆ ಮು ಂದಾದರೆ ಪಾದಯಾತ್ರೆ ಮುಖೇನಾ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಕಳವಾಸೆ ರವಿಕುಮಾರ್, ಮನ್ಸೂರ್, ರಮೇಶ್, ವೆಂಕಟೇ ಶ್, ಧರ್ಮೇಶ್, ವಿನಯ್‌ರಾಜ್, ರಾಜ್, ಪೀಟರ್, ಚಂದ್ರು, ವಾಸುಪೂಜಾರಿ ಮುಂತಾದವರಿದ್ದರು.

Protest against the relocation of wild elephants to the Bhadra Wildlife Sanctuary

 

 

Share

Leave a comment

Leave a Reply

Your email address will not be published. Required fields are marked *

Don't Miss

ಜಾನುವಾರು ಕಳ್ಳತನ ಪ್ರಕರಣದಲ್ಲಿ ಇಬ್ಬರಿಗೆ 3 ವರ್ಷ ಜೈಲು, ₹1.58 ಲಕ್ಷ ದಂಡ

ಚಿಕ್ಕಮಗಳೂರು: ಜಾನುವಾರುಗಳನ್ನು ಕಳ್ಳತನ ಮಾಡಿ, ಹಿಂಸಾತ್ಮಕವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಚಿಕ್ಕಮಗಳೂರು 1ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ತಲಾ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ...

ನೀರು !  ನೀರು ! ನೀರಿನ ಬರ ? ವಾಟರ್ ವಾರ್, ವಾಟರ್ ವಾರ್

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಿನ ಬರ ಪ್ರಾರಂಭವಾಗಿ ಹಲವು ವರ್ಷಗಳ ಜನ ಪರದಾಡುತ್ತಿದ್ದಾರೆ. ಮಲೆನಾಡು ಸದಾಕಾಲವೂ ನೀರಿನ,ಜರಿ ಮತ್ತು ಹಳ್ಳಕೊಳ್ಳಗಳಲ್ಲಿ ನದಿಗಳಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಣ್ಮರೆಯಾಗಿ ಜಿಲ್ಲೆಯ ಮಲೆನಾಡಿನಲ್ಲಿ ನೀರಿಗಾಗಿ ಪರದಾಟ...

Related Articles

ಆಪರೇಷನ್ ಗಜ ಕಾರ್ಯಾಚರಣೆಗೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಮೂಡಿಗೆರೆ: ಬೇಲೂರು ಭಾಗದಿಂದ ಮೂಡಿಗೆರೆ ತಾಲೂಕಿನತ್ತ ಕಾಡಾನೆಗಳ ಹಿಂಡನ್ನು ಓಡಿಸುತ್ತಿರುವ ಅರಣ್ಯ ಇಲಾಖೆಯ ಆಪರೇಷನ್ ಗಜ...

ಕಾಡಾನೆ ಸಮಸ್ಯೆಗೆ ಪಕ್ಷಾತೀತವಾಗಿ ಒಗ್ಗಟ್ಟಿನ ಹೋರಾಟ ಅಗತ್ಯ

ಚಿಕ್ಕಮಗಳೂರು: ಮೂಡಿಗೆರೆ ಭಾಗಕ್ಕೆ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಆತಂಕಕ್ಕೆ...

ಭದ್ರಾ ಅಭಯಾರಣ್ಯಕ್ಕೆ 38 ಆನೆಗಳು ದೊಡ್ಡ ಹೊರೆಯಲ್ಲ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿ 38ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಜನರ...

ಜಿಲ್ಲೆಯ ಎಂಟು ತಾಲೂಕುಗಳ ಸರ್ವೇ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸರ್ವೇ ಇಲಾಖೆ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿ...