Home Latest News ಸಮರ್ಪಕ ಪಡಿತರ ವಿತರಣೆಗೆ ರಾಜ್ಯ ಪಡಿತರ ಸಂಘ ಆಗ್ರಹ
Latest NewschikamagalurHomenamma chikmagalur

ಸಮರ್ಪಕ ಪಡಿತರ ವಿತರಣೆಗೆ ರಾಜ್ಯ ಪಡಿತರ ಸಂಘ ಆಗ್ರಹ

Share
Share

ಚಿಕ್ಕಮಗಳೂರು:  ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಪಡಿತರ ಹಂಚಿಕೆ ಮಾಡಬೇಕು. ಅನ್ನಭಾಗ್ಯ ಅಕ್ಕಿಯ ಕಮಿಷನ್ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಕಾರಣ ನೀಡಿ ಪಡಿತರವನ್ನು ಅಂಗಡಿ ಮಾಲೀಕರಿಗೆ ೧೫ನೇ ತಾರೀಖಿನಿಂದ ಎತ್ತುವಳಿ ನೀಡಲಾಗುತ್ತಿದೆ. ಇದರಿಂದ ಪಡಿತರದಾರರಿಗೆ ವಿತರಣೆ ಮಾಡುವುದು ತಡವಾಗುತ್ತಿದೆ ಎಂದು ತಿಳಿಸಿದರು.

ನಿತ್ಯ ಅಂಗಡಿ ಮುಂದೆ ಸರತಿ ಸಾಲು ಬೆಳೆಯುತ್ತದೆ. ಹೀಗಾಗಿ ಹಿಂದಿನ ಪದ್ದತಿಯಂತೆ ತಿಂಗಳ ೫ನೇ ತಾರೀಖಿನೊಳಗೆ ಪಡಿತರವನ್ನು ಎತ್ತುವಳಿ ಮಾಡಿಸಿದರೆ ವಿತರಣೆ ಮಾಡಲು ಅನುಕೂಲ ಆಗಲಿದೆ ಎಂದರು.

ಅಂಗಡಿ ಮಾಲೀಕರಿಗೆ ಬರಬೇಕಾದ ಅನ್ನಭಾಗ್ಯ ಅಕ್ಕಿಯ ಕಮಿಷನ್ ಹಣವನ್ನು ಆಯಾ ತಿಂಗಳಲ್ಲೇ ಪಾವತಿ ಮಾಡಬೇಕು. ಸುಮಾರು ೭ ವರ್ಷದಿಂದ ಇಕೆವೈಸಿ ಮಾಡಿರುವ ಹಣವೂ ಕೂಡ ಬಂದಿಲ್ಲ. ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ ೨೪ ಗಂಟೆಗಳ ನಂತರ ಅಪ್‌ಡೇಟ್ ಆಗುತ್ತಿದೆ. ಕೂಡಲೇ ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಬಿಲ್ ಹಾಕಿದ ಕೂಡಲೇ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡಬೇಕು ಎಂದರು.

ರಾಜ್ಯ ಸರಕಾರ ಮುಂದೆ ೫ ಕಿಲೋ ಅಕ್ಕಿ ಬದಲಿಗೆ ಆಹಾರ ಪದಾರ್ಥಗಳ ಕಿಟ್ ನೀಡಲು ಮುಂದಾಗಿದೆ. ಕಿಟ್ ನೀಡಲಿ. ಆದರೆ, ಅಕ್ಕಿ ನೀಡುವುದನ್ನು ನಿಲ್ಲಿಸಬಾರದು. ಕಿಟ್ಟನ್ನು ನಾವು ಖರೀದಿಸಿ ಪಡಿತರದಾರರಿಂದ ಹಣ ಪಡೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಅಕ್ಕಿ ಪೂರೈಕೆ ನಿಲ್ಲಿಸಬಾರದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಚನ್ನಕೇಶವೇಗೌಡ, ಬಸವರಾಜ್, ದೇವರಾಜ್, ಸಿದ್ದೇಗೌಡ, ಎಂ.ಎಸ್ ಮಂಟೆಸ್ವಾಮಿ ಉಪಸ್ಥಿತರಿದ್ದರು

State Ration Association demands adequate ration distribution

Share

Leave a comment

Leave a Reply

Your email address will not be published. Required fields are marked *

Don't Miss

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದಲ್ಲಿ ನಡೆದಿದೆ....

ಜಿಲ್ಲೆಯಲ್ಲಿ ಮಂತ್ರಿಯಾಗಲಿಲ್ಲ ರಗಳೆ ಬಿಟ್ಟಿಲ್ಲ

ಚಿಕ್ಕಮಗಳೂರು; ಮದುವೆ ಆಗಲಿಲ್ಲ, ಹುಚ್ಚು ಬಿಡಲಿಲ್ಲ ಎಂಬ ಸ್ಥಿತಿ ಮಂತ್ರಿ ಆಗಲಿಲ್ಲ, ಓಡಾಡುವುದು ತಪ್ಪಲಿಲ್ಲ.ಎಂಬ ದುಸ್ಥಿತಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳದ್ದು. ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಂತ್ರಿಗಿರಿ ಸಿಗುವುದಿಲ್ಲ ಎಂಬುದಕ್ಕೆ ಕಾರಣ ನೀಡಿ...

Related Articles

ಪ್ರತ್ಯೇಕ ಭೀಕರ ರಸ್ತೆ ಅಪಘಾತ-9 ಕ್ಕೂ ಹೆಚ್ಚು ಮಂದಿ ಗಾಯ

ಚಿಕ್ಕಮಗಳೂರು:  ಜಿಲ್ಲೆಯ ವಿವಿಧೆಡೆ ಸಂಭವಿಸಿದ ಮೂರು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಶಾಲಾ ವಿದ್ಯಾರ್ಥಿನಿ ಹಾಗೂ...

ಆಗಸ್ಟ್ 21ರಿಂದ 25ರವರೆಗೆ ವಿಶ್ವ ಬಂಧುತ್ವದ ರಕ್ತದಾನ ಮಹಾ ಅಭಿಯಾನ

ಚಿಕ್ಕಮಗಳೂರು: ಬ್ರಹ್ಮಾಕುಮಾರೀಸ್ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಡಾ. ದಾದೀ ಪ್ರಕಾಶಮಣೀಜೀಯವರ 19ನೇ ಪುಣ್ಯಸ್ಮೃತಿ...

ಆಗಸ್ಟ್ 25ರಂದು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 25ರಂದು ರಾಜ್ಯದ...

ಸೆಪ್ಟೆಂಬರ್ 10ಕ್ಕೆ ಟಿ.ಡಿ. ರಾಜೇಗೌಡ-ಡಿ.ಎನ್. ಜೀವರಾಜ್ ಅಂತಿಮ ವಿಚಾರಣೆ

ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ...