Home namma chikmagalur chikamagalur ಮಹಿಳಾ ದಿನಾಚರಣೆಗೆ ಸಾವಿತ್ರಿಬಾಯಿ ಪುಲೆ ಪ್ರೇರಣೆ
chikamagalurHomeLatest Newsnamma chikmagalur

ಮಹಿಳಾ ದಿನಾಚರಣೆಗೆ ಸಾವಿತ್ರಿಬಾಯಿ ಪುಲೆ ಪ್ರೇರಣೆ

Share
Share

ಚಿಕ್ಕಮಗಳೂರು:  ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ ಸಾಧನೆ ಮ ಹಿಳಾ ದಿನಾಚರಣೆಗೆ ಒಂದು ಪ್ರೇರಣೆ. ಅಡುಗೆ ಮನೆಯಿಂದ ಶಾಲಾ ಕೊಠಡಿವರೆಗೆ ಹೆಣ್ಣುಮಕ್ಕಳನ್ನು ಕರೆಸಿ ವಿದ್ಯಾವಂತ ಮಾಡುವ ಮೂಲಕ ಹೆಣ್ಣಿನ ಸ್ವಾತಂತ್ರ್ಯತೆ ಕಾಪಾಡಿದವರು ಎಂದು ಬಿಎಸ್ಪಿ ರಾಜ್ಯ ಕಾರ್ಯ ದರ್ಶಿ ಕೆ.ಬಿ.ಸುಧಾ ಹೇಳಿದರು.

ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಶನಿವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದ ಹಿಂದೆ ಹೆಣ್ಣುಮಕ್ಕಳು ಮನೆಯಿಂದ ಹೊರಬರುವುದೇ ಕಷ್ಟಸಾಧ್ಯವಿತ್ತು. ಹೆಚ್ಚಾಗಿ ಶಿಕ್ಷಣ ಎಂಬುದು ಹೆಣ್ಣಿಗೆ ಮರೀಚಿಕೆಯಾಗಿತ್ತು. ಈ ನಡುವೆ ಸಾವಿತ್ರಿಬಾಯಿ ಫುಲೆಯವರು ಹಲವಾರು ಅವ ಮಾನಗಳ ಮೂಲಕ ಹೆಣ್ಣು ಶಿಕ್ಷಣವಂತರಾಗಬೇಕೆಂಬ ದೃಷ್ಟಿಯಿಂದ ೧೮ ಶಾಲೆಗಳನ್ನು ತೆರೆದವರು ಎಂದು ತಿಳಿಸಿದರು.

ಸಾವಿತ್ರಿ ಬಾಯಿಯವರ ಶಾಲೆಯು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಸರ್ವ ಧರ್ಮದ ಹೆಣ್ಣುಮಕ್ಕಳಿಗಾಗಿ ತೆರೆದ ಅಪರೂಪದ ವ್ಯಕ್ತಿ ಸಾವಿತ್ರಿಯವರು. ಇವರ ಸಾಧನೆಯೇ ನಮ್ಮೆಗೆಲ್ಲಾ ಸ್ಪೂರ್ತಿಯಾಗಬೇಕು. ಮಹಿಳಾ ದಿನಾಚರಣೆಗೆ ಈ ಸಾಧಕಿಯೇ ಸೇವೆಯ ಪ್ರೇರಣೆ ಎಂದರು.

ಸಾವಿತ್ರಿ ಬಾಯಿಫುಲೆ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಅವರ ಹೋರಾಟದಿಂದ ಇಂದು ಮಹಿಳೆ ತನ್ನ ಹಕ್ಕು, ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದಾಳೆ. ಆಧುನಿಕ ಜಗತ್ತಿನಲ್ಲಿ ಮಹಿಳೆ ಎಲ್ಲಾ ರಂಗದಲ್ಲೂ ಅತ್ಯುತ್ತ ಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಲು ಸಾಧ್ಯ ವಾಗಿದೆ ಎಂದು ತಿಳಿಸಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ದುಡಿಯವಂತ ಮಹಿಳೆ, ಹೋ ರಾಟದ ಮೂಲಕ ಹಕ್ಕು ಪಡೆದುಕೊಂಡ ದಿನವೇ ಮಹಿಳಾ ದಿನಾಚರಣೆ. ನಾವುಗಳು ಎಂದಿಗೂ ಸತ್ಯದ ಹಾದಿ, ನಿಷ್ಟೆ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಮನೋಭಾವದಿಂದ ನಡೆದರೆ, ಯಶಸ್ಸು ಎಂಬುದು ತಾನಾ ಗಿಯೇ ಲಭ್ಯವಾಗಲಿದೆ ಎಂದರು.

ಬಿಎಸ್ಪಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಅಸೆಂಬ್ಲಿ ಖಜಾಂಚಿ ರತ್ನ ಅಧ್ಯಕ್ಷತೆ ವಹಿಸಿದ್ದರು. ಈ ಸಂ ದರ್ಬದಲ್ಲಿ ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ವಸಂತ್, ನಗರಾಧ್ಯಕ್ಷ ವಿಜಯ್, ಮುಖಂಡರುಗಳಾದ ಗಿರೀಶ್, ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

Savitribai Phule inspires Women’s Day celebrations

 

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧ ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ’ರಾಷ್ಟ್ರೀಯ ಲೋಕ್ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಗೌ.ಪ್ರಧಾನ ಜಿಲ್ಲಾ...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ ಸಂಚಾರ) ಬಂದ ಕಾರೊಂದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ದುಡುಕುತನದಿಂದ ಡಿಕ್ಕಿ ಹೊಡೆದ ಪರಿಣಾಮ...

Related Articles

ಅಮೃತ್ 2.0 ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

ಚಿಕ್ಕಮಗಳೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಮೃತ್ 2.0 ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ...

ವಿಕಲಚೇತನ ವ್ಯಕ್ತಿಯ ₹8 ಲಕ್ಷ ಬ್ಯಾಂಕ್ ಸಾಲ ಕೇವಲ ₹15,000 ಕ್ಕೆ ಇತ್ಯರ್ಥ

ಚಿಕ್ಕಮಗಳೂರು:  ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ನ್ಯಾಯಾಂಗದ ವಿಶೇಷ...

ಎಟಿಎಂ ಕಾರ್ಡ್ ಬದಲಿಸಿ ₹3.09 ಲಕ್ಷ ವಂಚನೆ

ಕಡೂರು: ಪಟ್ಟಣದ ಜೈನ್ ಟೆಂಪಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸುತ್ತಿದ್ದ ವೇಳೆ...

ಕೆಪಿಟಿಸಿಎಲ್ ಸಿಎಸ್‌ಆರ್ ಅನುದಾನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಣ್ಣಾವಲಿಗೆ ನೆರವು

ಚಿಕ್ಕಮಗಳೂರು: ಸರ್ಕಾರದ ಅನುದಾನದ ಕೊರತೆ ನಡುವೆ ಕೆಪಿಟಿಸಿಎಲ್ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನ...