Home namma chikmagalur ಸಮೀಕ್ಷೆಯಲ್ಲಿ ಬಿಲ್ಲವ-ಈಡಿಗ ಎಂದೇ ನಮೂದಿಸಲು ಮನವಿ
namma chikmagalurchikamagalurHomeLatest News

ಸಮೀಕ್ಷೆಯಲ್ಲಿ ಬಿಲ್ಲವ-ಈಡಿಗ ಎಂದೇ ನಮೂದಿಸಲು ಮನವಿ

Share
Share

ಚಿಕ್ಕಮಗಳೂರು:  ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.೨೨ ರಿಂದ ನಡೆಯುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಕಲಂ ೯ ಮತ್ತು ೧೦ ರಲ್ಲಿ ಇರುವಂತೆ ಈಡಿಗ ಮತ್ತು ಬಿಲ್ಲವ ಎಂದು ಬರೆಸಲು ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘಗಳ ಒಕ್ಕೂಟ ಮನವಿ ಮಾಡಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ಸೆ.೨೨ ರಿಂದ ಅ.೭ ರವರೆಗೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯಲಿದ್ದು ಕಲಂ-೯ ರಲ್ಲಿ ಇರುವಂತೆ ಈಡಿಗ ಹಾಗೂ ಕಲಂ ೧೦ ರಲ್ಲಿರುವಂತೆ ಬಿಲ್ಲವ (ಪೂಜಾರಿ) ಎಂದು ಸಮುದಾಯದವರು ಬರೆಸಬೇಕು. ಸಮಾಜಕ್ಕೆ ಸೇರಿರುವ ಇತರೆ ಉಪಪಂಗಡಗಳು ಕೂಡ ಈಡಿಗ, ಬಿಲ್ಲವ ಎಂದೇ ಬರೆಸಬೇಕು. ಯಾವುದೇ ಕಾರಣಕ್ಕೂ ಕೋಟ್ಯಾನ್, ಅಂಚನ್, ಸಾಲಿಯಾನ್, ಬಂಗೇರ, ಸುವರ್ಣ, ಆಮೀನ್, ಕರ್ಕೆರ ಮತ್ತಿತರೆ ಹೆಸರನ್ನು ನಮೂದಿಸಬಾರದು ಎಂದು ಹೇಳಿದರು.

ಈಡಿಗ ಉಪಪಂಗಡಗಳಾದ ನಾಮದಾರಿಗಳು, ದೇವರ ಮಕ್ಕಳು ಈಡಿಗ ಎಂದು ನಮೂದಿಸಬೇಕು. ಈ ರೀತಿ ಮಾಡದೆ ಬರಿ ಗೋತ್ರಗಳನ್ನು ನಮೂದಿಸಿದಲ್ಲಿ ಒಂದೊಂದೇ ಉಪಪಂಗಡಗಳು ತಮ್ಮ ಮೂಲ ಹೆಸರಿನಿಂದ ಬೇರ್ಪಟ್ಟು ಸಮೀಕ್ಷೆಯಲ್ಲಿ ನಮ್ಮ ಜನಸಂಖ್ಯೆಯು ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.

ನಮ್ಮಲ್ಲಿ ಬಿಲ್ಲವ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಎಂಬ ಜಾತಿಗಳಿಲ್ಲ. ಹೀಗಾಗಿ ಸಮಾಜ ಬಾಂಧವರು ಈ ಮೇಲಿನ ವಿಷಯ ಮನವರಿಕೆ ಮಾಡಿಕೊಂಡು ಜಾತಿ ಸಮೀಕ್ಷೆಗೆ ಬಂದಾಗ ಬಿಲ್ಲವರು ಬಿಲ್ಲವ ಎಂದೇ, ಈಡಿಗರು ಈಡಿಗ ಎಂದೇ ನಮೂದಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುಪೂಜಾರಿ, ಮುಖಂಡರಾದ ಕೆ.ಸಿ.ಗುಣಶೇಖರ್, ಕೆ.ರಾಜಣ್ಣ, ಕೃಷ್ಣಪ್ಪ ಉಪಸ್ಥಿತರಿದ್ದರು

Request to mention Billava-Eediga in the survey

Share

Leave a comment

Leave a Reply

Your email address will not be published. Required fields are marked *

Don't Miss

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದಲ್ಲಿ ನಡೆದಿದೆ....

ಜಿಲ್ಲೆಯಲ್ಲಿ ಮಂತ್ರಿಯಾಗಲಿಲ್ಲ ರಗಳೆ ಬಿಟ್ಟಿಲ್ಲ

ಚಿಕ್ಕಮಗಳೂರು; ಮದುವೆ ಆಗಲಿಲ್ಲ, ಹುಚ್ಚು ಬಿಡಲಿಲ್ಲ ಎಂಬ ಸ್ಥಿತಿ ಮಂತ್ರಿ ಆಗಲಿಲ್ಲ, ಓಡಾಡುವುದು ತಪ್ಪಲಿಲ್ಲ.ಎಂಬ ದುಸ್ಥಿತಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳದ್ದು. ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಂತ್ರಿಗಿರಿ ಸಿಗುವುದಿಲ್ಲ ಎಂಬುದಕ್ಕೆ ಕಾರಣ ನೀಡಿ...

Related Articles

ಪ್ರತ್ಯೇಕ ಭೀಕರ ರಸ್ತೆ ಅಪಘಾತ-9 ಕ್ಕೂ ಹೆಚ್ಚು ಮಂದಿ ಗಾಯ

ಚಿಕ್ಕಮಗಳೂರು:  ಜಿಲ್ಲೆಯ ವಿವಿಧೆಡೆ ಸಂಭವಿಸಿದ ಮೂರು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಶಾಲಾ ವಿದ್ಯಾರ್ಥಿನಿ ಹಾಗೂ...

ಆಗಸ್ಟ್ 21ರಿಂದ 25ರವರೆಗೆ ವಿಶ್ವ ಬಂಧುತ್ವದ ರಕ್ತದಾನ ಮಹಾ ಅಭಿಯಾನ

ಚಿಕ್ಕಮಗಳೂರು: ಬ್ರಹ್ಮಾಕುಮಾರೀಸ್ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಡಾ. ದಾದೀ ಪ್ರಕಾಶಮಣೀಜೀಯವರ 19ನೇ ಪುಣ್ಯಸ್ಮೃತಿ...

ಆಗಸ್ಟ್ 25ರಂದು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 25ರಂದು ರಾಜ್ಯದ...

ಸೆಪ್ಟೆಂಬರ್ 10ಕ್ಕೆ ಟಿ.ಡಿ. ರಾಜೇಗೌಡ-ಡಿ.ಎನ್. ಜೀವರಾಜ್ ಅಂತಿಮ ವಿಚಾರಣೆ

ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ...