ಚಿಕ್ಕಮಗಳೂರಿಗೆ ಈ ಬಜೆಟ್‌ನಲ್ಲಿ ಹಳೆಯ ಯೋಜನೆಗಳ ಪುನರಾವರ್ತನೆ ಮಾತ್ರ ಮಾಡಲಾಗಿದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ನಾವು ಮುಳ್ಳಯ್ಯನಗಿರಿ ಪ್ರದೇಶಕ್ಕೆ ರೋಪ್ ವೇ ಯೋಜನೆ ಪ್ರಸ್ತಾಪ ಮಾಡಿದ್ದೆವು. ಅದನ್ನೇ ಮತ್ತೆ ಪುನರಾವರ್ತನೆ ಮಾಡಿದ್ದಾರೆ. ಇ ಎಸ್ ಐ ಕ್ಲಿನಿಕ್ ಕುರಿತು ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದು, ಇದೂ ಹಳೆಯ ಯೋಜನೆಯ?. ಕೆರೆ ಏರಿ ಅಭಿವೃದ್ಧಿ ಪಡಿಸುತ್ತೇವೆ ಎಂದಿದ್ದರೂ, ಅದು ಹೊಸ ಯೋಜನೆಯೋ, ಹಳೆ ಯೋಜನೆಯೋ, ಅದಕ್ಕೆ ಎಷ್ಟ ಅನುದಾನ ಬಿಡುಗಡೆಯಾಗಲಿದೆ ಎನ್ನುವುದನ್ನು ಬಜೆಟ್‌ನಲ್ಲಿ ಸ್ಪಷ್ಟಪಡಿಸಿಲ್ಲ. ಚಿಕ್ಕಮಗಳೂರಿನ ಹೆಸರನ್ನು ಉಲ್ಲೇಖ ಮಾಡಬೇಕು ಎನ್ನುವ ರೀತಿಯಲ್ಲಿ ಮಾತ್ರ ಉಲ್ಲೇಖ ಮಾಡಿದಂತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.
ಅಜ್ಜಂಪುರ ಮತ್ತು ಕಡೂರು ತಾಲೂಕಿನಲ್ಲಿ ಒಂದು ಲಿಫ್ಟ್ ಇರಿಗೇಷನ್ ಯೋಜನೆ ಕೈಗೊಳ್ಳುವುದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದು ಬಿಟ್ಟರೆ ಇನ್ಯಾವದನ್ನೂ ಉಲ್ಲೇಖಿಸದಿರುವುದು ನಿರಾಶೆಯನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ಎಸ್‌ಸಿಎಸ್‌ಪಿ ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡುವುದನ್ನು ನಾನು ಸದನದಲ್ಲೇ ವಿರೋಧಿಸಿ, ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದೆ. ಆದರೆ, ಇದರ ಕುರಿತಾಗಿ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಇದರಿಂದಾಗಿ ಎಸ್ಸಿ, ಎಸ್ಟಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯ ಮುಂದುವರೆದಿದೆ. ಅನ್ಯಾಯವನ್ನು ಸರಿಪಡಿಸಿ ನ್ಯಾಯ ಕೊಡುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ ಎಂದು ರವಿ ವಿಷದ ವ್ಯಕ್ತಪಡಿಸಿದರು.
ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯನವರದು ತ್ರಿವಿಕ್ರಮ ದಾಖಲೆ. ೧೭ ಬಾರಿ ಬಜೆಟ್ ಮಂಡಿಸಿದ್ದು ದಾಖಲೆಯಾದರೆ, ಸಾಲ ಮಾಡಿದ್ದು ಇನ್ನೊಂದು ದೊಡ್ಡ ದಾಖಲೆ. ಈ ವ?ದ ಸಾಲ ೧.೩೨ ಲಕ್ಷ ಕೋಟಿ ರೂಪಾಯಿ. ಈಗಾಗಲೇ ೮.೧೪ ಲಕ್ಷ ಕೋಟಿ ರೂಪಾಯಿ ಸಾಲ ಆಗಿದ್ದು, ಇನ್ನೂ ೧.೩೨ ಲಕ್ಷ ಕೋಟಿ ಹೆಚ್ಚುವರಿ ಸಾಲವಾಗಿದೆ. ಇದು ಸಾಲದಲ್ಲಿ ಕರ್ನಾಟಕದ ಹೊಸ ದಾಖಲೆ. ನಮ್ಮ ಕರ್ನಾಟಕದ ಬಜೆಟ್ ಸ್ವಾವಲಂಬಿ ಬಜೆಟ್ ಅಲ್ಲ. ಸಾಲದ ಮೇಲೆ ಅವಲಂಬಿತವಾಗಿರುವ ಬಜೆಟ್. ಸಾಲದ ಮೇಲಿನ ಬಡ್ಡಿ ಕಟ್ಟಲು ನಮ್ಮ ಬಜೆಟ್‌ನಲ್ಲಿ ೨೦% ವೆಚ್ಚ ಮಾಡಬೇಕಾಗಿದೆ. ಯಾವುದೇ ಅಭಿವೃದ್ಧಿಗೆ, ಸಮಾಜ ಕಲ್ಯಾಣ ಇಲಾಖೆಗೆ, ಕೃಷಿಗೆ, ಗ್ರಾಮೀಣ ಅಭಿವೃದ್ಧಿಗೆ, ಶಿಕ್ಷಣ ಇಲಾಖೆಗೆ ಕೊಡುವುದಕ್ಕಿಂತ ಹೆಚ್ಚಿನ ಹಣವನ್ನು ಸಾಲದ ಮೇಲಿನ ಬಡ್ಡಿ ಕಟ್ಟಲು ವಿನಿಯೋಗಿಸಬೇಕಾದ ದುಸ್ಥಿತಿ ಬಂದೊದಗಿದೆ. ಸಾಲದ ಬಡ್ಡಿ ಕಟ್ಟುವುದಕ್ಕೇ ಇನ್ನೊಂದು ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಇದು ನಮ್ಮ ಆರ್ಥಿಕ ಸ್ಥಿತಿ ಹದಗೆಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದರು.
ಸಿದ್ದರಾಮಯ್ಯನವರು ಒಂದು ಪರೋಕ್ಷ ಮುನ್ಸೂಚನೆಯನ್ನು ಕೊಟ್ಟಿದ್ದು, ಅಬಕಾರಿ ೧೬ ಸ್ಲ್ಯಾಬ್‌ಗಳನ್ನು ತೆಗೆದು ೮ ಸ್ಲ್ಯಾಬ್ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಮದ್ಯ ಇನ್ನ? ದುಬಾರಿಯಾಗಲಿದೆ. ಇನ್ನು ಗ್ರಾಮೀಣ ಪ್ರದೇಶದ ವಿದ್ಯುತ್ ಪೂರೈಕೆ, ರೈತರಿಗೆ ಟ್ರಾನ್ಸ್‌ಫಾರ್ಮರ್ ಒದಗಿಸಲು ವೈಫಲ್ಯ, ಬೋರ್‌ವೆಲ್ ಕೊರೆಸಿದವರು ಹಣಕಟ್ಟಿ, ಒಂದೊಂದು ಕಂಬಕ್ಕೆ ೧೫ ಸಾವಿರ ರೂಪಾಯಿ ಪಾವತಿಸಿ, ಒಂದೊಂದು ಟಿಸಿಗೆ ಮೂರು ಲಕ್ಷರೂ. ತೆತ್ತು, ವಿದ್ಯುತ್ ಸಂಪರ್ಕ ಪಡೆಯಬೇಕಾಗಬೇಕಾಗಿರುವಂತಹ ಪರಿಸ್ಥಿತಿಗೆ ರೈತರನ್ನು ಈ ಸರ್ಕಾರ ತಂದಿದೆ. ಇದರಿಂದ ರೈತ ಸಾಲದ ಕೂಪಕ್ಕೆ ಬೀಳುವಂತಾಗಿದೆ. ಇದೆಲ್ಲವನ್ನೂ ಬಜೆಟ್‌ನಲ್ಲಿ ಸರಿಪಡಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಯಾವುದೇ ನಿರೀಕ್ಷೆ ಸಾಕಾರಗೊಂಡಿಲ್ಲ. ರೈತರ ಪಾಲಿಗೆ ಇದು ನಿರಾಶೆಯ ಬಜೆಟ್ ಎಂದು ರವಿ ಹೇಳಿದ್ದಾರೆ.
ಗಾಯದ ಮೇಲೆ ಬರೆ ಹಾಕಿದಂತೆ, ತೆರಿಗೆಯ ಭಾರವನ್ನ ಹೊತ್ತು ಸಂಕ?ಕ್ಕೊಳಗಾಗಿರುವ ಜನರಿಗೆ ಮತ್ತ? ತೆರಿಗೆ ಭಾರವನ್ನು ಹಾಕಲಾಗುತ್ತಿದೆ. ಮದ್ಯ ಮಾರಾಟಗಾರರು, ವರ್ತಕರು ನಮಗೆ ಕನಿ? ೨೦% ಲಾಭದ ಖಾತ್ರಿಯನ್ನು ಕೊಡಬೇಕು ಎನ್ನುವ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದರು. ಆದರೆ ಅವರ ಯಾವುದೇ ಬೇಡಿಕೆ ಬಗ್ಗೆ ಒಂದು ಚಕಾರವನ್ನೂ ಎತ್ತಿಲ್ಲ ಎಂದರು. ನಮಗೆ ನಿರೀಕ್ಷೆ ಹುಟ್ಟಿಸುವ ಯಾವುದೇ ಅಂಶವೂ ಬಜೆಟ್‌ನಲ್ಲಿ ಇಲ್ಲ. ರೈತರ ಪಾಲಿಗಾಗಲಿ, ನಿರುದ್ಯೋಗಿ ಯುವಕರ ಪಾಲಿಗಾಗಲಿ, ಭರವಸೆ ತುಂಬುವಲ್ಲಿ ಬಜೆಟ್ ವಿಫಲವಾಗಿದೆ. ಮೂಲ ಸೌಕರ್ಯದ ಅಭಿವೃದ್ಧಿ ಹೂಡಿಕೆಯೇ ಇಲ್ಲ. ಚಿಕ್ಕಮಗಳೂರು – ಬೇಲೂರು ರೈಲ್ವೆ ಬಗ್ಗೆ ಪ್ರಸ್ತಾಪಿಸಿದ್ದು, ಅದು ಹಳೆ ಯೋಜನೆಯೇ ಆಗಿದೆ. ಹಳೆ ಯೋಜನೆಗಳನ್ನೇ ಪ್ರಸ್ತಾಪ ಮಾಡಿ ಚಿಕ್ಕಮಗಳೂರಿನ ಹೆಸರನ್ನು ಕೂಡ ಬಜೆಟ್ ಪುಸ್ತಕದಲ್ಲಿ ತೋರಿಸಿದ್ದೀವಿ ಅನ್ನಬಹುದ?. ಈ ಬಜೆಟ್ ಚಿಕ್ಕಮಗಳೂರಿಗಾಗಲಿ, ರೈತರಿಗಾಗಲಿ, ಜನಸಾಮಾನ್ಯರಿಗಾಗಲಿ, ಹೊಸದಾದ ಏನನ್ನೂ ನೀಡಿಲ್ಲದ, ಹಳೆಯ ವಿಚಾರಗಳ ಪುನರಾವರ್ತನೆಯ, ಮೂಲ ಸಮಸ್ಯೆಗಳನ್ನೂ ಸರಿಪಡಿಸಲು ವಿಫಲವಾಗಿರುವ ಬಜೆಟ್ ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳಿಗೆ ಈ ಬಜೆಟ್ ಸಂಪೂರ್ಣ ಅನ್ಯಾಯ ಎಸಗಿದೆ. ಹಿಂದುಳಿದ ವರ್ಗಗಳ, ದಲಿತರ ಅಭಿವೃದ್ಧಿ ನಿಗಮಗಳ ಹಣವನ್ನು ಗ್ಯಾರಂಟಿಗೆ ಬಳಸಿದ್ದಕ್ಕೆ ಆ ಹಣವನ್ನು ನಿಗಮಗಳಿಗೆ ಮರಳಿಸಲಾಗಿಲ್ಲ. ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಕಾಂಗ್ರೆಸ್ ಪರಿಗಣಿಸಿದೆ. ಇನ್ನು ಅಬಕಾರಿ ಇಲಾಖೆಯಲ್ಲಿ ಅ?ಂದು ಭ್ರ?ಚಾರ ನಡೆದಿದ್ದರೂ, ಸಚಿವ ತಿಮ್ಮಾಪುರೆ ಮುಂದುವರಿದಿದ್ದಾರೆ. ಇವರೊಡನೆ ಸರ್ಕಾರದಲ್ಲಿ ಯಾರೆಲ್ಲ ಹಣ ತಿಂದಿದ್ದಾರೆ? ಅಬಕಾರಿ ಇಲಾಖೆಗೆ ಇನ್ನೂ ಗುರಿ ನೀಡಿ, ಸಚಿವರಿಗೆ ಇನ್ನ? ಭ್ರ?ಚಾರ ನಡೆಸಲು ಲೈಸೆನ್ಸ್ ನೀಡಿದಂತಿದೆ ಎಂದು ಟೀಕಿಸಿದರು.
ರಾಜ್ಯಾದ್ಯಂತ ರಸ್ತೆ ಗುಂಡಿಗಳು ಪ್ರಾಣಹರಣ ಮಾಡುತ್ತಿದ್ದರೂ, ಯಾವುದೇ ಸೂಕ್ತ ಪರಿಹಾರ ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿಲ್ಲ. ಕಳೆದ ಮೂರು ವ?ಗಳಲ್ಲಿ ಸಿದ್ದರಾಮಯ್ಯ ಯಾವುದಾದರೂ ನೂತನ ಯೋಜನೆಗೆ ಅಡಿಗಲ್ಲು ಹಾಕಿದ್ದಾರೇನು? ಕರ್ನಾಟಕ ಡ್ರಗ್ಸ್ ತಾಣವಾಗುತ್ತಿದ್ದು, ಇದರ ತಡೆಗೂ ಯಾವುದೇ ಕ್ರಮವನ್ನು ಘೋಷಿಸಲಾಗಿಲ್ಲ ಎಂದು ರವಿ ಹೇಳಿದರು.
ಅಧಿಕಾರಕ್ಕೆ ಬರುವ ಮುನ್ನ, ಸಿದ್ದರಾಮಯ್ಯನವರು ತಾನು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಬಜೆಟ್‌ನಲ್ಲಿ ಎಲ್ಲೂ ಹಳೆಯ ಪಿಂಚಣಿ ವ್ಯವಸ್ಥೆಯ ಕುರಿತು ಸೊಲ್ಲೆತ್ತಿಲ್ಲ. ಹಾಗಿದ್ದರೆ ಸರ್ಕಾರಿ ನೌಕರರಿಗೇ ಮುಖ್ಯಮಂತ್ರಿಗಳು ಸುಳ್ಳು ಹೇಳಿದಂತಾಗಿಲ್ಲವೇ? ಎಂದು ಪ್ರಶ್ನಿಸಿದರು.
Repetition of old projects in the budget for Chikkamagaluru
Leave a comment