ಚಿಕ್ಕಮಗಳೂರು: ರಾಜ್ಯದ ಜನರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ರಾಜ್ಯ ಬಜೆಟ್ ೨೦೨೬ ಅನ್ನು ನೋಡಿದಾಗ, ಇದು ರಾಜ್ಯದ ಅಭಿವೃದ್ಧಿಗೆ ದಿಕ್ಕು ತೋರಿಸುವ ಬಜೆಟ್ ಅಲ್ಲ, ರಾಜಕೀಯ ಲಾಭಕ್ಕಾಗಿ ರೂಪಿಸಲಾದ ಬಜೆಟ್ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್ ಶೆಟ್ಟಿ ತಿಳಿಸಿದರು.
ಮೊದಲನೆಯದಾಗಿ, ಕರ್ನಾಟಕದಲ್ಲಿ ಸುಮಾರು ೨೬ ಶೇಕಡಾ ಯುವಕರು ಇದ್ದರೂ, ಅವರ ಭವಿ?ದ ಬಗ್ಗೆ ಸರ್ಕಾರ ಯಾವುದೇ ಗಂಭೀರ ಚಿಂತನೆ ಮಾಡಿಲ್ಲ. ಉದ್ಯೋಗ ಸೃಷ್ಟಿ, ಕೈಗಾರಿಕಾ ವಿಸ್ತರಣೆ, ಕೌಶಲ್ಯಾಭಿವೃದ್ಧಿ ಮುಂತಾದ ವಿ?ಯಗಳಲ್ಲಿ ಸ್ಪಷ್ಟವಾದ ಯೋಜನೆಗಳನ್ನು ಘೋಷಿಸಬೇಕಾದ ಸರ್ಕಾರ, ಯುವಕರ ಭವಿಷ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಉದ್ಯೋಗದ ಭರವಸೆ ಇಲ್ಲದ ಬಜೆಟ್ ಯುವಕರ ಕನಸುಗಳಿಗೆ ಹೊಡೆತ ನೀಡಿದೆ.
ಇನ್ನೊಂದು ಪ್ರಮುಖ ಸಂಗತಿ ಎಂದರೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ರಸ್ತೆ, ನೀರಾವರಿ, ಕೈಗಾರಿಕೆ, ಗ್ರಾಮೀಣ ಅಭಿವೃದ್ಧಿ ಇಂತಹ ದೀರ್ಘಕಾಲೀನ ಬೆಳವಣಿಗೆಗೆ ಅಗತ್ಯವಿರುವ ಕ್ಷೇತ್ರಗಳಿಗೆ ಸಮರ್ಪಕ ಆದ್ಯತೆ ನೀಡಿಲ್ಲ.
ರಾಜ್ಯದ ಆದಾಯದ ದೊಡ್ಡ ಭಾಗವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವ ಮೂಲಕ ಸರ್ಕಾರ ಭವಿಷ್ಯ ದ ಆರ್ಥಿಕತೆಯೊಂದಿಗೆ ಅಪಾಯಕಾರಿ ಆಟವಾಡುತ್ತಿದೆ. ಜನಪರ ಯೋಜನೆಗಳು ಬೇಕೇ ಬೇಕು, ಆದರೆ ಸಂಪೂರ್ಣ ಹಣವನ್ನು ಅದಕ್ಕೇ ಖರ್ಚು ಮಾಡುವ ಮೂಲಕ ಅಭಿವೃದ್ಧಿಯ ಚಕ್ರವನ್ನು ನಿಧಾನಗೊಳಿಸುವುದು ಸರಿಯಾದ ದಾರಿ ಅಲ್ಲ.
ಇದರ ಪರಿಣಾಮವಾಗಿ ರಾಜ್ಯದ ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ, ಹಾಗೂ ಹಣಕಾಸು ಕೊರತೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಸ್ಥಿರತೆಗೆ ಗಂಭೀರ ಹೊಡೆತ ಬೀಳಬಹುದು ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದರು.
ಒಟ್ಟಾರೆ ಹೇಳುವುದಾದರೆ, ಈ ಬಜೆಟ್ ಅಭಿವೃದ್ಧಿಗೆ ದಿಕ್ಕಿಲ್ಲದ, ಯುವಕರಿಗೆ ಭರವಸೆ ಇಲ್ಲದ ಮತ್ತು ರಾಜ್ಯದ ಭವಿ?ವನ್ನು ಸಾಲದ ಭಾರಕ್ಕೆ ತಳ್ಳುವ ಬಜೆಟ್ ಆಗಿದೆ. ಇದು ಕರ್ನಾಟಕದ ಭವಿ?ವನ್ನು ಕಟ್ಟುವ ಬಜೆಟ್ ಅಲ್ಲ, ರಾಜಕೀಯ ಪ್ರದರ್ಶನಕ್ಕಾಗಿ ತಯಾರಿಸಿದ ಬಜೆಟ್ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ.
ರಾಜ್ಯದ ಯುವಕರು, ರೈತರು ಮತ್ತು ಸಾಮಾನ್ಯ ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು, ಕೇವಲ ಘೋ?ಣೆಗಳ ಮೂಲಕ ಜನರನ್ನು ತಪ್ಪು ದಾರಿಗೆ ಪ್ರಯತ್ನವನ್ನು ಸರ್ಕಾರ ತಕ್ಷಣ ನಿಲ್ಲಿಸಬೆಕೆಂದು ಆಗ್ರಹಿಸಿದರು.
Karnataka State Budget is a budget designed for political gain
Leave a comment