ಚಿಕ್ಕಮಗಳೂರು: ಕಾವೇರಿ ನೀರನ್ನು ನೆರೆರಾಜ್ಯ ತಮಿಳುನಾಡಿಗೆ ಹರಿಬಿಡದೇ ರಾಜ್ಯದ ಜನರಿಗೆ ಉಳಿಸಿಕೊಡಬೇಕು ಎಂದು ಆಗ್ರಹಿಸಿ ಶನಿವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ನಗರದ ಆ ಜಾದ್ಪಾರ್ಕ್ ವೃತ್ತದ ಸಮೀಪ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ರಾಜ್ಯದ ಉದ್ದಗಲ ಕ್ಕೂ ಬರಗಾಲದ ಛಾಯೆ ಆವರಿಸಿಕೊಂಡಿದೆ. ರೈತಾಪಿ ವರ್ಗ ಬೆಳೆಗಳಿಗೆ ನೀರಿಲ್ಲದೇ ಕಂಗಾಲಾಗಿದ್ದು ಇದ ರಿಂದ ಸಾಲ ಪಡೆದಿರುವ ರೈತರು ತೀರಿಸಲಾಗದೇ ವಿಷ ಕುಡಿಯುವ ಹಂತಕ್ಕೆ ತಲುಪಿದ್ದಾರೆ ಎಂದರು.
ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಕನಿಷ್ಟ ಅರ್ಧ ಅಥವಾ ಒಂದು ಇಂಚು ಸುರಿಯುವ ಮಳೆಯು, ಇದೀಗ ಸೆನ್ಸ್ ಲೆಕ್ಕದಲ್ಲಿ ಸುರಿಯತ್ತಿದೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಜನರ ಹಿತ ಕಾಯುವ ದೃಷ್ಟಿಯಿಂದ ನಿರ್ಣಯ ಕೈಗೊಳ್ಳದಿದ್ದಲ್ಲಿ ಅಧಿಕಾರ ತ್ಯಜಿಸಿ, ಕನ್ನಡಪರ ಸಂಘಟನೆಗಳಿಗೆ ರಾಜ್ಯ ವನ್ನು ಕಾಪಾಡುವ ಶಕ್ತಿಯಿದೆ ಎಂದರು.
ತಮಿಳುನಾಡು ಕಾವೇರಿ ನೀರನ್ನು ಮೇಕೆದಾಟಿಗೆ ಬಳಸುತ್ತಿಲ್ಲ. ಕೆಆರ್ಎಸ್ ಬಹುಪಾಲು ನೀರನ್ನು ಸ ಮುದ್ರದ ಪಾಲು ಮಾಡುತ್ತಿದ್ದು ಅಲ್ಲಿನ ಸರ್ಕಾರ ಜನಪರ ಕಾಳಜಿಯಿದ್ದಲ್ಲಿ ಅಣೆಕಟ್ಟು ನಿರ್ಮಿಸಿ ನೀರು ಸಂ ಗ್ರಹಿಸಬಹುದು. ಆದರೆ ತಮಿಳುನಾಡು ಸರ್ಕಾರ ಈ ಬಗ್ಗೆ ಚಿಂತಿಸದೇ ಪ್ರತಿಸಾರಿ ನೀರು ಕೇಳುವುದು ಸರಿ ಯಾದ ಕ್ರಮವಲ್ಲ ಎಂದರು.
ರಾಜ್ಯವನ್ನಾಳಿದ ಎರಡು ರಾಷ್ಟ್ರೀಯ ಪಕ್ಷಗಳು ಕಾವೇರಿ ವಿಚಾರದಲ್ಲಿ ಎಂದಿಗೂ ರೈತರ ಹಿತ ಕಾಪಾ ಡುತ್ತಿಲ್ಲ. ಕೇವಲ ಮತಬ್ಯಾಂಕ್ಗಾಗಿ ರೈತರನ್ನು ಬಳಸಿಕೊಂಡು, ನೀರಿನ ವಿಷಯದಲ್ಲಿ ದ್ರೋಹವೆಸಗುತ್ತಿದೆ. ಆ ನಿಟ್ಟಿನಲ್ಲಿ ಕನ್ನಡಸೇನೆ ನಾಡಿನ ಜಲ, ಭಾಷೆಯನ್ನು ಕಾಪಾಡುವ ಆಡಳಿತದೊಂದಿಗೆ ಸದಾ ಜೊತೆಗಿರಲಿದೆ ಎಂದು ತಿಳಿಸಿದರು.
ರಾಜ್ಯಸರ್ಕಾರ ಕೂಡಲೇ ಬರಗಾಲ, ರೈತರ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದು ಕಾವೇರಿ ನೀರು ಹರಿಸದಂತೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ನೀರನ್ನು ಹರಿಬಿಟ್ಟಲ್ಲಿ ಕನ್ನಡಪರ ಸಂಘಟನೆಗಳು ಬೃಹತ್ ಮಟ್ಟದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕನ್ನಡಸೇನೆ ಜಿಲ್ಲಾ ವಕ್ತಾರರಾದ ಹುಣಸೇಮಕ್ಕಿ ಲಕ್ಷ್ಮಣ್, ಕಳವಾಸೆ ರವಿ, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ನಗರಾಧ್ಯಕ್ಷ ಸತೀಶ್, ಮುಖಂಡರುಗಳಾದ ಇಂದ್ರ, ಮೇಘ, ಉಷಾ, ದಾಕ್ಷಾಯಣಿ, ಅನ್ವರ್, ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.
Protest demanding that Cauvery water not be released to Tamil Nadu
Leave a comment