Home namma chikmagalur chikamagalur ದ್ವೇಷ ಭಾಷಣಗಳ ಆಧಾರಲ್ಲಿಯೇ ಸಂಘಟನೆ ಕಟ್ಟಲು ಹೊರಟಿರುವುದು ಖಂಡನೀಯ
chikamagalurHomeLatest Newsnamma chikmagalur

ದ್ವೇಷ ಭಾಷಣಗಳ ಆಧಾರಲ್ಲಿಯೇ ಸಂಘಟನೆ ಕಟ್ಟಲು ಹೊರಟಿರುವುದು ಖಂಡನೀಯ

Share
Oplus_16908288
Share

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮತ್ತು ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ವಿಪರೀತವಾದ ದ್ವೇಷ ಭಾಷಣಗಳ ಆಧಾರಲ್ಲಿಯೇ ಸಂಘಟನೆಯನ್ನು ಕಟ್ಟಲು ಹೊರಟಿರುವುದು ಖಂಡನೀಯ ಎಂದು ಕೆ.ಪಿ.ಸಿ.ಸಿ ವಕ್ತಾರ ಸುಧೀರ್ ಕುಮಾರ್ ಮೂರೊಳ್ಳಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ರಾಹುಲ್ ಗಾಂಧಿಯವರ ವಂಶವನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿರುವುದೆ ನಿದರ್ಶನ ಎಂದರು.

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಡ್ರಗ್ಸ್ ಅಡಿಟ್ ವ್ಯಕ್ತಿಯೆಂದು ತೀರ ಕೆಳಸ್ಥರದಲ್ಲಿ ಮಾತನಾಡಿದ್ದಾರೆ. ಇತ್ತೀಚೆಗೆ ಜಂತರ್ ಮಂತರ್ ನಲ್ಲಿ, ನಡೆದ ಹೋರಾಟದಲ್ಲಿ ವಿಧ್ಯಾರ್ಥಿಗಳ ಮೇಲೆ ಬಂಧೂಕು,ಲಾಟಿ ಪೆಲೆಟ್ಸ್ ಗಳನ್ನು ಬಳಸಿ ಹತ್ತಿಕುವ ಪ್ರಯತ್ನ ನಡೆಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ಷಾ ನೇತೃತ್ವದ ಕೇಂದ್ರಸರ್ಕಾರ ವಿಫಲವಾzಗಿದೆ.

ವಿದ್ಯಾರ್ಥಿಗಳ ಎದುರು ಸೋಲನ್ನೊಪ್ಪಿಕೊಂಡು ನಡುಬಗ್ಗಿಸಿ ಬೇಡಿಕೆಗಳನ್ನು ಈಡೇರಿಸಿದ ಮೇಲೂಶಾಸಕ ಯಶ್ಪಾಲ್ ಸುವರ್ಣ ಉಡುಪಿಯಲ್ಲಿ ಸಮಾವೇಶನಡೆಸಿ ವಿದ್ಯಾರ್ಥಿ ಪ್ರತಿಭಟನೆಯನ್ನು ಟೀಕಿಸಿರುವುದು ಹಾಸ್ಯಾಸ್ಪದ ಎಂದ ಅವರು ಈ ಇಬ್ಬರು ಮುಖಂಡರಿಗೆ ನಾಯಕತ್ವದ ಮೆಲೆ ವಿಶ್ವಾಸವಿಲ್ಲಾ ಎಂದು ಟೀಕಿಸಿದರು.

ಯುವ ಜನರ ಹೋರಾಟವನ್ನು ಬೆಂಬಲಿಸಿದ ಚಿತ್ರನಟ ಪ್ರಕಾಶ್ ರೈ ಅವರನ್ನು ಸಮುದ್ರದ ಮೀನುಗಳಿಗೆ ಆಹಾರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.ಅದರೊಂದಿಗೆ ಮಣಿಪಾಲದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಇಂತಹ ಕೀಳು ಮಟ್ಟದ ಹೇಳಿಕೆ ನೀಡುತ್ತಿರುವುದು ಪ್ರಜ್ಞಾವಂತರ ಕ್ಷೇತ್ರವೆನಿಸಿಕೊಂಡಿರುವ ಉಡುಪಿ ಜನತೆಗೆಮಾಡಿರುವ ಘೋರ ಅಪಮಾನ ಎಂದು ಕಿಡಿಕಾರಿದರು.

ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಮತ್ತು ಯುವ ಜನರ ಚಳುವಳಿ ಜಾತಿ, ಮತ, ಧರ್ಮ,ಪ್ರಾಂತ್ಯದ ಹಂಗಿಲ್ಲದೆ ಜಾತ್ಯಾತೀತವಾಗಿ ನಡೆದ ಹೋರಾಟವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿದ್ಯಾರ್ಥಿ ಮತ್ತು ಯುವ ಜನರ ಹೋರಾಟವನ್ನು ಶಂಕಿಸಿ, ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ.

ಇದು ಅವರ ಅವಿವೇಕ ಮತ್ತು ದುರಾಂಕಾರದ ಪರಮಾವಧಿ ಎಂದು ಹರಿಹಾಯ್ದ ಅವರು ಅದರೊಂದಿಗೆ ಕೇರಳದ ಗಲಭೆಯೊಂದರ ವಿಡೀಯೋ ತುಣುಕನ್ನು ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಹೋರಾಟಕ್ಕೆ ತಳುಕು ಹಾಕಿ ಮಾಧ್ಯಮಗಳಿಗೆ ಪ್ರದರ್ಶಿಸಿ ನಗೆಪಾಟಿಲಿಗೆ ಈಡಾಗಿದ್ದಾರೆ . ಅವರ ವರ್ತನೆ ಘನತೆಗೆ ಶೋಭೆ ತರುವುದಿಲ್ಲಾ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಈ ಹಿಂದೆಯೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರನ್ನು ನಿಂದಿಸಿರುವುದು ಸೇರಿದಂತೆ ಹಲವು ಬಾರಿ ಇಂತಹ ಹೇಳಿಕೆಗಳನ್ನು ನೀಡಿ ಅವಮಾನಿಸಿದ್ದಾರೆ. ವಯಸ್ಸು ಮತ್ತು ಹಿರಿತನಆಧರಿಸಿ ಭಾಷಾ ಸಂಸ್ಕೃತಿಯನ್ನು ರೂಢಿಸಿಕೊಳ್ಳಲಿ ಎಂದು ಕುಹಕವಾಡಿದರು.

ಇಂತಹ ದ್ವೇಷ ಭಾಷಣಗಳನ್ನು ಮಾಡಿ ಸಮಾಜ ಹೊಡೆಯುವ ಬದಲು ಕ್ಷೇತ್ರದ ಅಭಿವೃದ್ಧಿಗೆ ಸಿ.ಟಿ.ರವಿಯವರು ಮುಂದಾಗುವಂತೆ ಆಗ್ರಹಿಸಿದರು. ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಮಾಡಿದ ದ್ವೇಷ ಬಾಷಣದ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡುಅವರಿಗೆ ನೋಟೀಸ್ ನೀಡಲು ಹೋದ ಪೋಲಿಸ್ ಅಧಿಕಾರಿ ಅವರಿಗೆ ಸೆಲ್ಯೂಟ್ ಹೊಡೆದಿರುವುದು ಖಂಡನೀಯ ಎಂದ ಅವರು ಪೋಲಿಸ್ ಅಧಿಕಾರಿಗಳು ಪುಂಡರನ್ನು ಪುಂಡರಂತೆಯೇ ಕಾಣಬೇಕು, ಗಲಭೆಕೋರರನ್ನು ಗಲಭೆಕೋರರಂತೆಯೇ ಕಾಣಬೇಕು ಅವರಿಗೆ ಸೆಲ್ಯೂಟ್ ಹೊಡೆಯಬೇಡಿ ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮೀಸಲಾತಿ ವಿರೋಧಿ ಆಂದೋಲನ ಆರಂಭದ ಪ್ರಯತ್ನ ನಡೆಸುವ ಮೊದಲು ದೇಶದ ಎಲ್ಲಾವರ್ಗದ, ಜಾತಿಯ ಜನರು ಮೀಸಲಾತಿಯ ಫಲಾನುಭವಿಗಳು ಎಂಬುದನ್ನು ಮನ ಗಾಣಬೇಕಿದೆ ಎಂದರು.

ಬಿಜೆಪಿ.ಸಂಘಪರಿವಾರದವರು ಮೀಸಲಾತಿ ವಿರೋಧಿಸು ವುದರಲ್ಲಿ ವಿಶೇಷವೇನಿಲ್ಲಾ.ಅವರೇ ಹೇಳುವಂತೆ ಗೋಳ್ವಾಳ್ಕರ್ ರಚಿಸಿರುವ ಆರ್.ಎಸ್.ಎಸ್ ಗ್ರಂಥ ಬಂಚ್ ಆಫ್ ಥಾಟ್ಸ್ ನಲ್ಲಿಯೇ ಉಲ್ಲೇಖಿಸಲಾಗಿದೆ ಎಂದು ಹೇಳಿದ ಅವರು ಬಿಜೆಪಿ ಭಾರತೀಯತೆಯ ಜನಮಾನಸವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಇತ್ತೀಚೆಗೆ ಬಿಜೆಪಿಗರು ಅಂಬೇಡ್ಕರ್ ಮತ್ತು ಸಂವಿಧಾನವನ್ನು ಧೃತರಾಷ್ಟ್ರನ ಆಲಿಂಗನದ ಭಾಗವಾಗಿ ಆಲಂಗಿಸುತ್ತಲೇ ಮೀಸಲಾತಿ ವಿರೋಧಿ ಹುನ್ನಾರ ನಡೆಸುತ್ತಿದ್ದು ಅವರ ಪ್ರಯತ್ನ ಸಫಲವಾಗುವುದಿಲ್ಲಾ ಎಂದರು. ಬಿಜೆಪಿಯವರು ಮತಚೋರಿ ನಡೆಸಿರುವುದಕ್ಕೆ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವೇ ನಿದರ್ಶನ ಎಂದ ಅವರು ಈ ಪ್ರಕರಣದಲ್ಲಿ ಅಂದಿನ ಜಿಲ್ಲಾಧಿಕಾರಿ ರಮೇಶ್ ರವರ ಮೇಲೆ ಸರ್ಕಾIರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಪ್ರಚಾರಸಮಿತಿಯ ಅಧ್ಯಕ್ಷ ಸೈಯ್ಯದ್ ಹನೀಫ್ ಮಾತನಾಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಆಧಾರದಲ್ಲಿ ನ್ಯಾಯಾಲಯ ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್‌ರವರ ಸದಸ್ಯತ್ವವನ್ನು ರದ್ದುಗೊಳಿಸಿ ಹಲವುದಿನಗಳೇ ಕಳೆದಿದ್ದರೂ ಈವರೆಗೂ ರಾಜೀನಾಮೆ ನೀಡದೆ ಇಂದು ಸಲ್ಲಿಸಿದ್ದಾರೆ ಎಂದು ಟೀಕಿಸಿದರು.

ಗೋಷ್ಟಿಯಲ್ಲಿ ಮುಖಂಡರಾದ ಕುಕ್ಕುಡಿಗೆ ರವೀಂದ್ರ,ಚಂದ್ರು,ಪ್ರಶಾಂತ್ ,ಮಂಜುನಾಥ್ ,ಮಹೇಶ್ವರಪ್ಪ,ಹೆಚ್.ಸಿ ಗಂಗಾಧರ್ ಇದ್ದರು.

It is condemnable to build an organization based on hate speech.

Share

Leave a comment

Leave a Reply

Your email address will not be published. Required fields are marked *

Don't Miss

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ನೀಡಿರುವ ಹೇಳಿಕೆಯನ್ನು...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ ತಾಂತ್ರಿಕ ಅಡಚಣೆಗಳನ್ನು ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್...

Related Articles

ಭದ್ರೆಯ ಕೃಪೆಯಿಂದ ಕೋಡಿಬಿದ್ದ ಕುಕ್ಕಸಮುದ್ರ ಕೆರೆ

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿದು ಬಂದ ಭದ್ರಾ ನೀರು ಕಡೂರು...

ಮಹೇಶ್ ಜೋಷಿಗೆ ಹಿನ್ನೆಡೆ-ಮತ್ತೆ ಕೋರ್ಟ್ ನಲ್ಲಿ ಹೋರಾಟಕ್ಕೆ ಜಯ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದಿದೆ ಎನ್ನಲಾದ ಆಡಳಿತಾತ್ಮಕ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಕುರಿತು ಹಿರಿಯ ಸಾಹಿತಿಗಳು,...

ಅ.8ರಂದು ಚಿಕ್ಕಮಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಮಹಿಳಾ ಮಹಾಸಭೆ

ಚಿಕ್ಕಮಗಳೂರು:  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಮಿತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಮಿತಿ...

 ಅ.8ರಂದು ಚಿಕ್ಕಮಗಳೂರಿನಲ್ಲಿ ಇಂಡಿಯಾ ಒಕ್ಕೂಟದ ಪ್ರತಿಭಟನೆ

ಚಿಕ್ಕಮಗಳೂರು: ದೇಶಾದ್ಯಂತ ನಡೆಯುತ್ತಿರುವ ‘ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ–ದೇಶ ಬಚಾವೋ’ ಚಳುವಳಿಯ ಭಾಗವಾಗಿ ಅ.8ರಂದು ಚಿಕ್ಕಮಗಳೂರು...