ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯದ ಅಪಚಾರ ಏಪ್ರಿಲ್ ೨೩ ರಂದು ಪಶ್ಚಿಮಬಂಗಾಳದಲ್ಲಿ ನಡೆಯುತ್ತಿದೆ. ಇದನ್ನು ವಿರೋಧಿಸಿ ಅದೇ ದಿನ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಎದ್ದೇಳು ಕರ್ನಾಟಕ ರಾಜ್ಯ ಸಂಚಾಲಕ ಗೌಸ್‌ಮೊಹಿಯುದ್ದೀನ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ, ಆ ರಾಜ್ಯದಲ್ಲಿ ಸುಮಾರು ಅರ್ಧಕೋಟಿ ಮತದಾರರ ಹಕ್ಕನ್ನು ಕಸಿದುಕೊಂಡು ಚುನಾವಣೆ ನಡೆಸಲಾಗುತ್ತಿದೆ.ಪ್ರಜಾತಂತ್ರ ಪ್ರೇಮಿಗಳ ಎದೆಗೆ ಇರಿದಂತಾಗಿದೆ. ಪಶ್ಚಿಮಬಂಗಾಳಕ್ಕೆ ಬಂದಿರುವ ಸ್ಥಿತಿ ಕರ್ನಾಟಕಕ್ಕೂ ಬರುವ ಸಾಧ್ಯತೆಗಳಿದ್ದು, ಈ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.
ಸುಮಾರು ೧೩ ರಾಜ್ಯಗಳ ೬.೫ ಕೋಟಿ ಜನರ ಮತದಾನದಹಕ್ಕು ರದ್ದಾಗಿದೆ. ಇದು ಹಂತಹಂತವಾಗಿ ದೇಶದ ವಿದ್ಯಾಮಾನವಾಗಲಿದೆ. ಭಾರತದ ಪ್ರಜಾತಂತ್ರಕ್ಕೆ ಇಂಜೆಕ್ಷನ್ ಮೂಲಕ ವಿಷ ಉಣಿಸಲಾಗುತ್ತಿದೆ. ನಾವುಗಳ ಮೌನವಹಿಸುತ್ತಾ ಸಾಗಿದರೆ ಈ ದೇಶ ದೇಶವಾಗಿ ಉಳಿಯುವುದಿಲ್ಲ ಎಂದರು.
ಬೆಂಗಳೂರಿನಲ್ಲಿ ವಿವಿಧ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಏ ೨೩ರ ಕರಾಳ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.ಕರ್ನಾಟಕದಲ್ಲಿ ಎಸ್‌ಐಆರ್ ವಿರೋಧಿಸುತ್ತಿರುವ ಪ್ರಗತಿಪರ ಸಂಘಟನೆಗಳು, ಜಾತ್ಯತೀತ ಪಕ್ಷಗಳು ಒಗ್ಗೂಡಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ನೀಡಿರುವ ಮತದಾನದ ಹಕ್ಕನ್ನು ಕಳೆದುಕೊಳ್ಳಲು ನಾವು ಇಚ್ಚಿಸುವುದಿಲ್ಲವೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಬಿ.ದಿವಾಕರ ಹೇಳಿದರು. ಏ ೨೩ ರಂದು ನಡೆಯುವ ಪ್ರತಿಭಟನೆಗೆ ಪ್ರಗತಿಪರರು ಕೈಜೋಡಿಸಬೇಕು.ಕರ್ನಾಟಕಕ್ಕೆ ಬರಲಿರುವ ಅಪಾಯವನ್ನು ತಡೆಯಬೇಕಾಗಿದೆ ಎಂದು ಹೇಳಿದರು. ಯುಸೂಫ್‌ಹಾಜಿ ಮನವಿ ಮಾಡಿದರು.
ಎದ್ದೇಳು ಕರ್ನಾಟಕ ಜಿಲ್ಲಾ ಸಮಿತಿ ಸಂಚಾಲಕ ಟಿ.ಎಲ್.ಗಣೇಶ್, ಮಹಿಳಾ ಘಟಕದ ಸಂಚಾಲಕರಾದ ಅರುಣಾಕ್ಷಿ, ರೀತು, ಮಹಮ್ಮದ್ ಅತಿಕ್ ಇದ್ದರು.
Protest at Freedom Park Bengaluru condemning the atrocities on April 23
Leave a comment