Home Latest News ಶರಣ್ ಪಂಪ್ ವೆಲ್ ಗೆ ಪ್ರವೇಶ ನಿರ್ಬಂಧ ಖಂಡಿಸಿ ಪ್ರತಿಭಟನೆ
Latest NewschikamagalurHomenamma chikmagalur

ಶರಣ್ ಪಂಪ್ ವೆಲ್ ಗೆ ಪ್ರವೇಶ ನಿರ್ಬಂಧ ಖಂಡಿಸಿ ಪ್ರತಿಭಟನೆ

Share
Share

ಚಿಕ್ಕಮಗಳೂರು ಜಿಲ್ಲೆಗೆ ವಿ.ಎಚ್.ಪಿ ಮುಖಂಡ ಶರಣ್ ಪಂಪ್ ವೆಲ್ ಗೆ ಪ್ರವೇಶ ನಿರ್ಬಂಧ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲು ನಿರ್ಧರಿಸಿದ್ದು, ಜಿಲ್ಲಾಧಿಕಾರಿ ಕಚೇರಿಗೆ ತೆರಳದಂತೆ ಬ್ಯಾರಿಕೆಡ್ ಹಾಕಿದ್ದರಿಂದ ಎಸ್. ಪಿ .ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವರಾಜ್ ಶೆಟ್ಟಿ, ಶ್ರೀಕಾಂತ್ ಪೈ ಇತರೆ ಮುಖಂಡರು ನಿರ್ಬಂಧ ಹೇರಿದ ಜಿಲ್ಲಾಡಳಿತ ಕ್ರಮವನ್ನು ಟೀಕಿಸಿದರು.

ನಿರ್ಬಂಧ ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ ಮಾತನಾಡಿ ಶರಣ್ ಪಂಪ್ ವೆಲ್ ನಗರದಲ್ಲಿ ಬೈಠಕ್ ನಡೆಸಲು ಆಗಮಿಸಬೇಕಿತ್ತು ಆದರೆ ಈ ನಿರ್ಧಾರದಿಂದ ಎಲ್ಲರಿಗೂ ನೋವುಂಟಾಗಿದೆ ಎಂದರು.

ಶರಣ್ ಹಿಂದೆಯೂ ಹಲವು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿದ್ದು ಎಂದೂ ಕೂಡ ಸಮಸ್ಯೆ ಆಗಿಲ್ಲವಾದರೂ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ ಎಂದರು.

ಸಂಜೆಯ ಒಳಗೆ ಈ ನಿರ್ಧಾರವನ್ನು ಹಿಂಪಡೆಯುವ ಭರವಸೆ ಜಿಲ್ಲಾಧಿಕಾರಿ ನೀಡಿದ್ದು, ಅದು ಈಡೇರದಿದ್ದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ಇಂದೆ ಸಭೆ ನಡೆಸುವುದಾಗಿ ತಿಳಿಸಿದರು.

ಭಜರಂಗದಳ ಮುಖಂಡ ಮಹೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಪಂಪ್ ವೆಲ್ ಅವರಿಂದ ಆಗದಿದ್ದರೂ ಜಿಲ್ಲಾಡಳಿತದ ಈ ನಿರ್ಧಾರ ಖಂಡನೀಯ ಎಂದರು. ಪುಷ್ಪರಾಜ್, ಪ್ರದೀಪ್, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಿದ್ದು,200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಡಿಸಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.

Protest against entry restrictions to Sharan Pump Well

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

ಚಿಕ್ಕಮಗಳೂರು:  ದೇಶದ ಅಭಿವೃದ್ಧಿಯ ಸಂಕೇತವೇ ರೈಲ್ವೆಯಾಗಿದ್ದು, ರೈಲ್ವೆ ಇಲಾಖೆಯನ್ನು ಎಷ್ಟು ಮಟ್ಟಿಗೆ ಅಭಿವೃದ್ಧಿಪಡಿಸುತ್ತೇವೆಯೋ ಅಷ್ಟು ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ...

ಗುಡುಗು ಸಿಡಿಲಿನ ಆರ್ಭಟಕ್ಕೆ ಬಸ್ ತಂಗುದಾಣದನಲ್ಲಿದ್ದ ದಂಪತಿ ಗಾಯ

ಎನ್.ಆ‌ರ್.ಪುರ: ಕಾಫಿನಾಡಿನಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಗುಡುಗು ಸಿಡಿಲಿನ ಆರ್ಭಟಕ್ಕೆ ದಂಪತಿ ಗಾಯಗೊಂಡಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಸೀಗುವಾನಿ ಗ್ರಾಮದಲ್ಲಿ ಸಂಭವಿಸಿದೆ. ಮಂಜುನಾಥ ಮತ್ತು ಮಮತಾ ಎಂಬ ದಂಪತಿ ಎನ್.ಆರ್.ಪುರ...

Related Articles

ಧಾರಾಕಾರ ಮಳೆಗೆ ಕಾಫಿಸಿಟಿ ಫುಲ್ ಕೂಲ್

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವರುಣನ ಅಬ್ಬರ ಜೋರಾಗಿದ್ದು ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಕಾಫಿ ಸಿಟಿ ಈಗ...

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಮಲೆನಾಡಿಗರು ಆಕ್ರೋಶ

ಕಳಸ: ಸರ್ಕಾರದ ಬೇಜವಾಬ್ದಾರಿತನ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಮಲೆನಾಡಿಗರು ಆಕ್ರೋಶದ ತೊಡೆ ತಟ್ಟಿದ್ದಾರೆ. ಸ್ವಾತಂತ್ರ್ಯ...

ಭಾರಿ ಮಳೆಯ ಆರ್ಭಟಕ್ಕೆ ಮೆಸ್ಕಾಂಗೆ 3.21 ಕೋಟಿ ಹಾನಿ

ಚಿಕ್ಕಮಗಳೂರು: ಮುಂಗಾರುಪೂರ್ವ ಮಳೆ ಮತ್ತು ಭಾರಿ ಗಾಳಿಯ ಆರ್ಭಟಕ್ಕೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮೆಸ್ಕಾಂ ವ್ಯಾಪ್ತಿಯಲ್ಲಿ ಭಾರಿ...

ಅಜ್ಜಂಪುರದ ರಸ್ತೆ ಅಪಘಾತದಲ್ಲಿ ಚಾಲಕನ ಸಾವು

ಅಜ್ಜಂಪುರ: ಬುಕ್ಕಂಬುದಿಯಿಂದ ಅಜ್ಜಂಪುರ ರಸ್ತೆಯ ಸಿದ್ದಾಪುರ ತಿರುವಿನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿದ್ದಾಪುರ...