Home namma chikmagalur chikamagalur ಸ್ವಾಭಿಮಾನ ಬದುಕಿನ ಹಣತೆ ಹಚ್ಚಿಸಿದವರು ಪ್ರೊ.ಕೃಷ್ಣಪ್ಪನವರು
chikamagalurHomeLatest Newsnamma chikmagalur

ಸ್ವಾಭಿಮಾನ ಬದುಕಿನ ಹಣತೆ ಹಚ್ಚಿಸಿದವರು ಪ್ರೊ.ಕೃಷ್ಣಪ್ಪನವರು

Share
Share

ಚಿಕ್ಕಮಗಳೂರು: ದಲಿತ, ಶೋಷಿತ ಹಾಗೂ ಅನ್ಯಾಯಕ್ಕೆ ಒಳಗಾಗಿದ್ಧ ಸಮುದಾಯಗ ಳಿಗೆ ಸ್ವಾಭಿಮಾನ ಬದುಕಿನ ಹಣತೆ ಹಚ್ಚಿದವರು ದಸಂಸ ಸ್ಥಾಪಕ ಪ್ರೊ.ಬಿ.ಕೃ?ಪ್ಪ ಅವರು ಎಂದು ದಸಂಸ ರಾಜ್ಯ ಸಂಚಾಲಕ ಮರ್ಲೆ ಅಣ್ಣಯ್ಯ ಹೇಳಿದರು.

ನಗರದ ಜಿ.ಪಂ. ಆವರಣದಲ್ಲಿ ಮಂಗಳವಾರ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನದ ಪ್ರಯುಕ್ತ ಡಾ|| ಬಿ. ಆರ್.ಅಂಬೇಡ್ಕರ್ ಪುತ್ಥಳಿಗೆ ಹಾಗೂ ದಸಂಸ ಸಂಸ್ಥಾಪಕ ಬಿ.ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರವರ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಶೋಷಿತ ಸಮುದಾಯಕ್ಕೆ ಅವರ ಆದರ್ಶವೇ ಅಂತಿಮ ಎಂದು ಮನಗಂಡು ಅದರಂತೆ ದಸಂಸ ಎಂಬ ಸಾಮಾಜಿಕ ಚಳವಳಿ ಕಟ್ಟಿ ರಾಜ್ಯದಲ್ಲಿ ದಲಿತ ಸಮೂಹಕ್ಕೆ ಸ್ವಾಭಿಮಾನದ ಸಂಕೇತವಾಗಿದ್ದಾರೆಂದು ಹೇಳಿದರು.

ಪ್ರೊ.ಬಿ.ಕೃ?ಪ್ಪನವರು ೭೦ರ ದಶಕದಲ್ಲಿ ಅಂಬೇಡ್ಕರವರ ವಿಚಾರಧಾರೆಯಲ್ಲಿ ಡಿಎಸ್‌ಎಸ್ ಎಂಬ ಸಂ ಘಟನೆ ಸ್ಥಾಪಿಸಿ, ಸಂವಿಧಾನ ಬದ್ಧವಾಗಿ ದಲಿತ ಸಮೂಹಕ್ಕೆ ಸಿಗಬೇಕಾದ ಎಲ್ಲ ಅವಕಾಶಗಳಿಗಾಗಿ ದಲಿತ ಚಳವಳಿ ಕಟ್ಟಿದ ಧೀಮಂತ ನಾಯಕರಾಗಿದ್ದು, ಅವರ ಜನ್ಮದಿನ ಆಚರಿಸುತ್ತಿರುವುದು ಸಂತಸದ ವಿ?ಯ ಎಂದರು.

ರೈತರು, ಕೂಲಿ ಕಾರ್ಮಿಕರು, ಬಡವರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಕೃಷ್ಣಪ್ಪನವರು ಹೋ ರಾಟಕ್ಕೆ ಮಾದರಿಯಾಗಿದವರು. ಬಡವರ ಮನೆ, ಗುಡಿಸಲಿನಲ್ಲಿ ಹೋರಾಟದ ದೀಪ ಹಚ್ಚಿದ್ದು, ಅದನ್ನು ಆರದಂತೆ ನೋಡಿಕೊಳ್ಳಿ ಎಂದು ಹೇಳುವ ಮೂಲಕ ಹೋರಾಟದ ಕಿಚ್ಚು ಬೆಳೆಸಿದವರು ಎಂದರು.

ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ ಪ್ರೊ.ಬಿ.ಕೆ ಅವರು ರಾಜ್ಯ ದಲ್ಲಿ ದಲಿತ ಚಳವಳಿಯನ್ನು ಹುಟ್ಟುಹಾಕಿದ ಮಹಾನ್ ನಾಯಕ. ದಲಿತರ ಪರ ಹೋರಾಡಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಅವರ ಹೋರಾಟದ ಮನೋಭಾವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಂಜಯ್ಯ, ವಿಭಾಗೀಯ ಸಂಘಟನಾ ಸಂಚಾಲಕ ಸಂತೋಷ್ ಲಕ್ಯಾ, ಮಹಿಳಾ ಸಂಚಾಲಕಿ ಶೇಷಮ್ಮ, ಮುಖಂಡರುಗಳಾದ ಚಂದ್ರು, ಅಂತೋಣಿಯಮ್ಮ, ಪ್ರಕಾಶ್, ಲಕ್ಷ್ಮಣ್, ಜವರಯ್ಯ, ನಾಗರಾಜ್, ಆರ್.ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Prof. Krishnappa was the one who instilled the value of self-respect in life.

Share

Leave a comment

Leave a Reply

Your email address will not be published. Required fields are marked *

Don't Miss

5.50 ಕೋಟಿಯ ಟಿಂಬರ್ ವ್ಯವಹಾರದಲ್ಲಿ ವಂಚನೆ

ಚಿಕ್ಕಮಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಂಬರ್ ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ವಂಚನೆ, ಜಗಳ ಹಾಗೂ ಕೊಲೆ ಬೆದರಿಕೆ ಪ್ರಕರಣವೊಂದು ಆಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಗೋಣಿಕೊಪ್ಪ...

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್ ಮಾತು ಕೇಳಿದ ಮೇಲೆ ರಾಜೀನಾಮೆ ಕೊಟ್ಟಿದ್ದು ,ಯಾವ ಕಿತ್ತಾಟವೂ ನಡೆಯಲಿಲ್ಲಾ ಅಷ್ಟೊಂದು ತಣ್ಣಗೆ ಪ್ರತಿಕ್ರಿಯೆ...

Related Articles

ಬೆಲೆಏರಿಕೆ ಖಂಡಿಸಿ ನಗರದಲ್ಲಿ ಬ್ಲಾಕ್‌ಕಾಂಗ್ರೆಸ್ ವಿನೂತನ ಪ್ರತಿಭಟನೆ

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಚಿಕ್ಕಮಗಳೂರು ಹಾಗೂ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್...

ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ ಬಂಧನ

ಚಿಕ್ಕಮಗಳೂರು: ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್‌ಗೆ ಮಧ್ಯರಾತ್ರಿ ನುಗ್ಗಿ ಯುವಕಮೋರ್ವ ಓಡಾಟ ನಡೆಸಿರುವ ಘಟನೆ...

ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ

ಕೊಟ್ಟಿಗೆಹಾರ : ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮಳೆಗಾಲದ...

ತೀವ್ರಗೊಂಡ ಉದ್ಯಮಿ ಪತ್ನಿಯ ಆತ್ಮಹತ್ಯೆ ಪ್ರಕರಣ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದ್ದು ನಗರದ ಉದ್ಯಮಿ ರಾಜೇಶ್ ಅವರ ಪತ್ನಿ ಸುಮ (55)...