ಚಿಕ್ಕಮಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ ಎಂದು ಬಡಿದುಕೊಂಡರೂ ಸಮೀಕ್ಷೆಗೆ ಬಂದವರು ಮೊದಲು ಕೇಳುವ ಪ್ರಶ್ನೆ ಧರ್ಮ ಯಾವುದು? ಜಾತಿ ಯಾವುದು ? ಉಪ ಜಾತಿ ಯಾವುದು ಎಂಬುದನ್ನು ನೋಡಿದರೆ ಇದು ಯಾವ ಸಮೀಕ್ಷೆ ಎಂಬ ಹಲವು ಅನುಮಾನಗಳು ಮತ್ತು ಸಂಶಯ ಬರುತ್ತದೆ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.
150 ಮನೆಗಳಲ್ಲಿ ಒಬ್ಬರನ್ನು ಸಮೀಕ್ಷೆಗೆ ನಿಗದಿಪಡಿಸಲಾಗಿದೆ. ಸಮೀಕ್ಷೆ ಪಟ್ಟಿಯಲ್ಲಿ 60 ಪ್ರಶ್ನೆ ಗಳಿವೆ ಇದರಲ್ಲಿ ಐದಾರು ಪ್ರಶ್ನೆ ಮಾತ್ರ ಕೇಳಲಾಗುತ್ತದೆ.ಪ್ರಶ್ನೆಗಳಿಗೆ ಅವರೇ ಉತ್ತರ ಬರೆದು ಕೊಳ್ಳುತ್ತಾರೆ. ಉತ್ತರಿಸಿದವರಿಗೆ ತಾನು ಕೊಟ್ಟ ಉತ್ತರವನ್ನು ಬರೆದುಕೊಂಡಿದ್ದಾರೆ ಎಂಬುದಕ್ಕೆ ಗ್ಯಾರಂಟಿ ಏನು ಎಂಬ ಅನುಮಾನ ಸಹಜ ಹೀಗಾಗಿ ಹಲವು ಅನುಮಾನಕ್ಕೆ ಆಸ್ಪದವಾಗಿದೆ.ಇನ್ನೂ ಗ್ರಾಮೀಣ ಜನರ ಮತ್ತು ಅನಕ್ಷರಸ್ಥರ ಪರಿಸ್ಥಿತಿ ಏನು ? ಮತ್ತು ಹೇಗೆ ?
ಸಮೀಕ್ಷೆ ಮಾಡಲು ಬಹುತೇಕ ಶಿಕ್ಷಣ ಇಲಾಖೆಯವರನ್ನು ನೇಮಕ ಮಾಡಲಾಗಿದೆ.ಇವರಿಗೆ ಮೊಬೈಲ್ ನಲ್ಲಿ ಫೀಡ್ ಮಾಡಲು ಹೇಳಲಾಗಿದೆ.ಮೊಬೈಲ್ ನ್ನು ಅಪರೇಟ್ ಮಾಡಲು ಕಷ್ಟವಾಗುತ್ತಿದೆ. ಬಂದರು ಅಯ್ಕೆ ಮಾಡಿ ಕೊಳ್ಳುವಾಗ ಗೊಂದಲಕ್ಕೆ ಒಳಾಗಾಗುತ್ತಿದ್ದಾರೆ.ಸರ್ವರ್ ಸಮಸ್ಯೆ, ರೇಷನ್ ಕಾರ್ಡ್ ತೆಗೆಯುತ್ತಾರೆ ಎಂದು ಕೆಲವರು ತಪ್ಪು, ತಪ್ಪು ಮಾಹಿತಿ ಕೊಡುತ್ತಿದ್ದಾರೆ.ಇನ್ನೂ ಕೆಲವರು ಸಮೀಕ್ಷೆ ನಿರಾಕರಣೆ ಮಾಡುತ್ತಿದ್ದಾರೆ.
ಸಮೀಕ್ಷೆ ಬಂದವರು ಮೊದಲ ಪ್ರಶ್ನೆ ನಿಮ್ಮ ಧರ್ಮ ಯಾವುದು ? ಜಾತಿ ಯಾವುದು? ಉಪ ಜಾತಿ ಯಾವುದು ಎಂದು ಕೇಳುತ್ತಿರುವುದು ಹಲವು ಅನುಮಾನ ಮತ್ತು ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಸಮೀಕ್ಷೆಯಲ್ಲಿ ಅರ್ಧ ಸತ್ಯ ಮಾತ್ರ ತಿಳಿಯಬಹುದು.
ಧರ್ಮದ ಕಾಲಂ ನಲ್ಲಿ ಲಿಂಗಾಯತ ಎಂದು ಹೇಳಿದರೆ ಇತರೆ ಎಂದು ಬರೆದುಕೊಳ್ಳುತ್ತಿದ್ದಾರೆ.ಉಪ ಜಾತಿ ಹೆಸರು ಹೇಳಿದರೆ ಇದು ಜಾತಿನಾ ಎಂದು ಕೇಳುತ್ತಿದ್ದಾರೆ.ಒಟ್ಟಾರೆ ಐದಾರು ಪ್ರಶ್ನೆಗಳಿಗೆ ಉತ್ತರ ಬರೆದುಕೊಂಡು ಹೋಗುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.
ಸಮೀಕ್ಷೆಗೆ ಬರುವವರು ಖಾಸಗಿ ವ್ಯಕ್ತಿಗಳನ್ನು ಸಹಾಯ ಕ್ಕಾಗಿ ಜೊತೆಯಲ್ಲಿ ಕರೆದುಕೊಂಡು ಬರುತ್ತಿದ್ದು ಅವರಿಗೆ ಒಂದು ಮನೆಗೆ ಸಮೀಕ್ಷೆಗೆ ಐವತ್ತು ರೂಗಳನ್ನು ಕೊಡುತ್ತಿದ್ದಾರೆ.ಶಿಕ್ಷಕರಿಗೆ ಕಷ್ಟವಾಗುತ್ತಿರುವಾಗ ಖಾಸಗಿ ವ್ಯಕ್ತಿಗಳನ್ನು ನಂಬುವುದು ಹೇಗೆ ?
ದಾಖಲೆಗಳನ್ನು ಪಡೆಯುವುದಿಲ್ಲ ಬರೀ ಆಧಾರ್ ಕಾರ್ಡ್ ಮತ್ತು ಪೋಟೋ ತೆಗೆದು ಕೊಳ್ಳುತ್ತಿದ್ದಾರೆ.ಯಾವುದೇ ಸಹಿ ಕೂಡ ಪಡೆಯುತ್ತಿಲ್ಲ ಆಗಾದರೆ ಸಮೀಕ್ಷೆಗೆ ಖಾತರಿ ಏನು ?
ಸಮೀಕ್ಷೆ ಕೇವಲ ಹನ್ನೊಂದು ದಿನದಲ್ಲಿ ಮುಗಿಸುತ್ತೇವೆ ಎಂದು ಸಮೀಕ್ಷೆ ನಡೆಸುವವರನ್ನು ಕತ್ತೆ ಮೇಲೆ ಕೂರಿಸಿ ಕುದುರೆ ಮೇಲೆ ಸವಾರಿ ಮಾಡುವ ಅಧಿಕಾರಸ್ಥರು ಚಾಟಿ ಬೀಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಸಂಶಯ ಬರುವುದು ಸಹಜ.
Officials on horseback conducting a survey on donkeys?
Leave a comment