Home namma chikmagalur ಆನ್‌ಲೈನ್ ಮೂಲಕ ೧೦ ಲಕ್ಷ ರೂ. ಲಪಟಾಯಿಸಿದ ಖದೀಮರು
namma chikmagalurchikamagalurCrime NewsHomeLatest News

ಆನ್‌ಲೈನ್ ಮೂಲಕ ೧೦ ಲಕ್ಷ ರೂ. ಲಪಟಾಯಿಸಿದ ಖದೀಮರು

Share
Share

ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ಅನುಮಾನಾಸ್ಪದ ಲಿಂಕ್ ಆಪ್‌ಫೈಲನ್ನು ಕ್ಲಿಕ್ ಮಾಡಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡ ಪರಿಣಾಮವಾಗಿ ಸೈಬರ್ ಖದೀಮರು ರಿಮೋಟ್ ಆಕ್ಸ್‌ಸ್ ಪಡೆದು ಅವರ ಬ್ಯಾಂಕ್ ಖಾತೆಗಳಿಂದ ೧೦,೬೫,೮೯೯ ರೂ ಹಣವನ್ನು ಲಪಟಾಯಿಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಮಹಿಳೆಯೋರ್ವರು ೨ ಬ್ಯಾಂಕ್ ಖಾತೆಗಳ ಬ್ಯಾಲೆನ್ಸ್‌ನ್ನು ಚೆಕ್ ಮಾಡಿದಾಗ ಎರಡೂ ಖಾತೆಗಳಲ್ಲಿಯೂ ಗಮನಕ್ಕೆ ಬಾರದ ರೀತಿಯಲ್ಲಿ ಹಣ ಕಡಿತಗೊಂಡಿರುವುದು ಕಂಡುಬಂದಿರುತ್ತದೆ.

ಈ ವಿಷಯವಾಗಿ ಸಂಬಂಧಪಟ್ಟ ಬ್ಯಾಂಕ್‌ನಲ್ಲಿ ವಿಚಾರಿಸಿದ್ದು ಪೇಟಿಯಂ ಆಪ್ ಮುಖಾಂತರ ಯಾವುದೋ ಮೊಬೈಲ್ ಗೇಮಿಂಗ್ ಆಪ್‌ಗಳಿಗೆ ಹಣ ಕಟಾವು ಆಗಿರುವ ಬಗ್ಗೆ ಬ್ಯಾಂಕ್ ನವರು ಮಾಹಿತಿ ನೀಡಿರುತ್ತಾರೆ.

ಆದರೆ ಪೇಟಿಯಂ ಆಪ್‌ಯಾಗಲಿ ಅಥವಾ ಯಾವುದೇ ಗೇಮ್ ಆಪ್‌ಆಗಲಿ ಮಹಿಳೆಯು ತನ್ನ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿರುವುದಿಲ್ಲ ಆದರೆ ಸೈಬರ್ ವಂಚಕರು ಮಹಿಳೆಯ ಮೊಬೈಲ್ ಗೆ ಆಪ್‌ಫೈಲನ್ನು ಕಳುಹಿಸಿ ಆಕ್ಸ್‌ಸ್ ಮೊಬೈಲ್‌ನ ಸಂಪೂರ್ಣ ಪಡೆದುಕೊಂಡು ಪೆಟಿಎಂ ಆಪ್‌ನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ ೨ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಜೂನ್ ೨೪ ರಿಂದ ಆಗಸ್ಟ್ ೧೦ರವರೆಗೆ ಒಟ್ಟು ೧೦,೬೫,೮೯೯ ರೂ.ಗಳನ್ನು ಸೈಬರ್ ವಂಚಕರು ಬೇರೆ ಬೇರೆ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿ ಮಹಿಳೆಗೆ ವಂಚನೆ ಮಾಡಿರುತ್ತಾರೆ.

ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ ೧೫ ರಂದು ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.ಆದ್ದರಿಂದ ಮೊಬೈಲ್‌ಗಳಿಗೆ ಬರುವಂತಹ ಯಾವುದೇ ರೀತಿಯ ಅಪರಿಚಿತ, ಅನುಮಾನಾಸ್ಪದ ಆಪ್‌ಫೈಲ್‌ಗಳನ್ನು ಸೂಕ್ತ ಪರಿಶೀಲನೆಗೆ ಒಳಪಡಿಸದೇ ಇನ್‌ಸ್ಟಾಲ್ ಮಾಡಿಕೊಳ್ಳಬಾರದಾಗಿ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವತಿಯಿಂದ ವಿನಂತಿಸಲಾಗಿದೆ.ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾಗಿದ್ದಲ್ಲಿ ಕೂಡಲೇ ತಡಮಾಡದೇ ಅಗತ್ಯ ಮಾಹಿತಿಯೊಂದಿಗೆ ಟೋಲ್ ಫ್ರೀ ಸಂಖ್ಯೆ ೧೯೩೦ಕ್ಕೆ ಕರೆಮಾಡಿ ದೂರು ದಾಖಲಿಸುವಂತೆ ತಿಳಿಸಲಾಗಿದೆ.

Officials embezzled Rs 10 lakh online

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....