Home namma chikmagalur ಧರ್ಮ ಸಂಸ್ಥಾಪನೆಗೆ ಜೀವನ ಮುಡಿಪಾಗಿಟ್ಟವನು ಶ್ರೀಕೃಷ್ಣ
namma chikmagalurchikamagalurHomeLatest News

ಧರ್ಮ ಸಂಸ್ಥಾಪನೆಗೆ ಜೀವನ ಮುಡಿಪಾಗಿಟ್ಟವನು ಶ್ರೀಕೃಷ್ಣ

Share
Share

ಚಿಕ್ಕಮಗಳೂರು: : ದ್ವಾಪರ ಯುಗದಲ್ಲಿ ಅಧರ್ಮದ ನಾಶಕ್ಕಾಗಿಯೇ ಅವತರಿಸಿ ಧರ್ಮ ಸಂಸ್ಥಾಪನೆ ಮತ್ತು ಭಕ್ತರ ರಕ್ಷಣೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟವನು ಭಗವಾನ್ ಶ್ರೀಕೃಷ್ಣ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಜರುಗಿದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ವಸುದೇವ-ದೇವಕಿಯ ಪುತ್ರನಾಗಿ ಜನಿಸಿದ ಶ್ರೀಕೃಷ್ಣ ಮುಂದೆ ನಂದಗೋಕುಲದಲ್ಲಿ ಬೆಳೆದು ಯಶೋದೆಯ ಮಗನಾಗಿಯೂ ಗಮನ ಸೆಳೆಯುತ್ತಾನೆ. ಶ್ರೀಕೃಷ್ಣ ಬಾಲ್ಯದಲ್ಲಿ ತುಂಟತನದ ಮೂಲಕವೂ ವಿಶೇಷವಾಗಿ ಗೋಚರಿಸುತ್ತಾನೆ ಎಂದರು.

ಭಗವದ್ಗೀತೆಯಲ್ಲಿ ನೀಡಿದ ನೀತಿಯ ಉಪದೇಶ ಶ್ರೀಕೃಷ್ಣನ ಜೀವನಾನುಭವ ಎಂದರೆ ತಪ್ಪಾಗಲಾರದು. ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿದ್ದ ಶ್ರೀಕೃಷ್ಣ ಪಾಂಡವ ಪಕ್ಷಪಾತಿಯಾದರೂ ಧರ್ಮ ಪರಿಪಾಲಕನಾಗಿ ಗುರುತಿಸಿಕೊಳ್ಳುವ ಪರಿ ಅನನ್ಯವಾದುದು. ಅರ್ಜುನನಿಗೆ ಗೀತೋಪದೇಶದ ಮೂಲಕ ಸತ್ಯದ ಅರಿವು ಮೂಡಿಸಿದ ಶ್ರೀಕೃಷ್ಣನ ಆದರ್ಶಗಳು ಸೇರಿದಂತೆ ಆತನ ಬದುಕಿನ ಹಲವಾರು ಮಹತ್ವದ ಘಟ್ಟಗಳನ್ನು ನಾವು ಅರಿತುಕೊಳ್ಳುವುದು ಅಗತ್ಯ. ನಮ್ಮೆಲ್ಲರ ಜೀವನೋತ್ಸಾಹದ ಸಂಕೇತವಾಗಿರುವ ಶ್ರೀಕೃ?ನ ಪ್ರಬುದ್ಧತೆ ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.

ಶ್ರೀಕೃ?ನ ಕುರಿತು ವಿಶೇ? ಉಪನ್ಯಾಸ ನೀಡಿದ ಸಾಹಿತಿಗಳಾದ ಚಟ್ನಹಳ್ಳಿ ಮಹೇಶ್ ಅವರು, ಧರ್ಮದ ಏಕಮೇವ ಉದ್ಧಾರವೇ ಶ್ರೀಕೃ?ನ ಜನ್ಮಕ್ಕೆ ಕಾರಣ. ಜಗತ್ತಿನ ಸಂರಕ್ಷಕ ಶ್ರೀಕೃ?ನ ವಿಶೇ? ಗುಣಗಳು ಗಮನ ಸೆಳೆಯುತ್ತವೆ. ಇಂದಿಗೂ ಸಹ ಶ್ರೀಕೃ?ನ ವ್ಯಕ್ತಿತ್ವ ಮಾದರಿಯಾಗಿದೆ ಎಂದರು.

ಶ್ರೀಕೃ? ಉತ್ತಮ ರಾಜನೀತಿಜ್ಞನಾಗಿದ್ದು, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿ?ವಾಗಿ ನಿಲ್ಲುತ್ತಾನೆ. ಕಲಿಯುಗದಲ್ಲಿ ನಡೆಯಬಹುದಾದ ವಿದ್ಯಮಾನಗಳ ಬಗ್ಗೆ ದ್ವಾಪರ ಯುಗದಲ್ಲಿಯೇ ಶ್ರೀಕೃಷ್ಣ ತಿಳಿಸಿದ್ದ. ಧರ್ಮ, ಪರಂಪರೆ, ಸಾತ್ವಿಕತೆಯ ರಕ್ಷಣೆಗೆ ಶ್ರೀಕೃ? ಕಾರಣನಾದ. ಶ್ರೀಕೃಷ್ಣನ ಸಂದೇಶವನ್ನು ಮನು? ತಿಳಿದುಕೊಂಡರೆ ಅಧಿಕಾರದ ಲಾಲಸೆ. ತಪ್ಪು ಕಲ್ಪನೆ. ಅಹಂಕಾರ. ಭಿನ್ನಾಭಿಪ್ರಾಯಗಳನ್ನು ತೊರೆದು ಸರಳ ಜೀವನ ಕಂಡುಕೊಳ್ಳಬಹುದು ಎಂದು ಹೇಳಿದರು.

ಉಪತಹಸೀಲ್ದಾರ್ ರಾಮ್‌ರಾವ್ ದೇಸಾಯಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಇದೇ ವೇಳೆ ಶ್ರೀಕೃ? ಹಾಗೂ ರಾಧೆಯ ವೇ?ಧಾರಿಗಳ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದ ಚಿಕ್ಕ ಮಕ್ಕಳು ಮಕ್ಕಳಿಗೆ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು. ಸ್ವಾಗತಿಸಿದ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ರಮೇಶ್ ಪ್ರಾಸ್ತ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಹಳ್ಳಿಕಾರ್ ಸಂಘದ ಜಿಲ್ಲಾ ಅಧ್ಯಕ್ಷ ಕೋಟೆ ಸೋಮಣ್ಣ, ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.

Lord Krishna dedicated his life to establishing religion.

 

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....