Home ಆಶ್ರಯ ಆಸ್ಪತ್ರೆಯಲ್ಲಿ ನರವಿಜ್ಞಾನ ವಿಭಾಗದ ಕೇಂದ್ರ ಉದ್ಘಾಟನೆ
HomechikamagalurLatest Newsnamma chikmagalur

ಆಶ್ರಯ ಆಸ್ಪತ್ರೆಯಲ್ಲಿ ನರವಿಜ್ಞಾನ ವಿಭಾಗದ ಕೇಂದ್ರ ಉದ್ಘಾಟನೆ

Share
Share

ಚಿಕ್ಕಮಗಳೂರು: ವೈದ್ಯಕೀಯ ಲೋಕದಲ್ಲಿ ಚಿಕಿತ್ಸೆಗೆ ಅನುಕೂಲವಾಗಲು ಹೊಸ ವಿಭಾ ಗಗಳನ್ನು ಸ್ಥಾಪಿಸುವ ಮೂಲಕ ಆಶ್ರಯ ಆಸ್ಪತ್ರೆ ರೋಗಿಗಳ ಸಮಗ್ರ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಆಶ್ರಯ ಆಸ್ಪತ್ರೆಯಲ್ಲಿ ನರವಿಜ್ಞಾನ ವಿಭಾಗದ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತ ನಾಡಿದ ಅವರು ಆಧುನಿಕತ ಜಗತ್ತಿನಲ್ಲಿ ರೋಗಿಗಳ ಆರೋಗ್ಯ ಸುಧಾರಿಸಲು ಹೊಸ ತಂತ್ರಜ್ಞಾನದಡಿ ಹೆಜ್ಜೆ ಇಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜಿಲ್ಲೆಯಲ್ಲೇ ಮೊಟ್ಟಮೊದಲ ರೋಗಿಗಳ ಅನುಕೂಲಕ್ಕೆ ಸಕಲ ಸಲವತ್ತು ಹಾಗೂ ವ್ಯವಸ್ಥೆಯಿತ ರೂಪ ದಲ್ಲಿ ಆರೈಕೆ ನೀಡುತ್ತಿರುವ ಆಶ್ರಯ ಆಸ್ಪತ್ರೆ ಎಂದ ಅವರು ಇದೀಗ ನೂತನವಾಗಿ ನರರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲು ನರವಿಜ್ಞಾನ ಕೇಂದ್ರ ಸ್ಥಾಪಿಸಿರುವುದು ಜನತೆಗೆ ಬಹಳಷ್ಟು ಒಳಿತಾಗಲಿದೆ ಎಂದರು.

ಜನಸಾಮಾನ್ಯರು ಆರೋಗ್ಯದ ವಿಷಯದಲ್ಲಿ ಅಸಡ್ಡೆ ವಹಿಸದೇ ಜವಾಬ್ದಾರಿಯಾಗಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಆಕಸ್ಮಿಕವಾಗಿ ಜರುಗುವ ಕೆಲವು ಅನಾರೋಗ್ಯ ಸಮಸ್ಯೆಗಳಿಗೆ ಸ್ಥಳೀಯವಾಗೇ ಚಿಕಿತ್ಸೆಗಳು ಲಭ್ಯವಾದರೆ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮನುಷ್ಯನ ಪ್ರಾಣ ಉಳಿಸುವ ವೈದ್ಯರನ್ನು ದೇವರಿಗೆ ಒಲಿಸುತ್ತೇವೆ. ವೈದ್ಯರು ಹಣ ಗಳಿಕೆ ಎನ್ನದೇ ಸೇವಾ ಮನೋಭಾವದಲ್ಲಿ ಕಾರ್ಯನಿರ್ವಹಿಸಬೇಕು. ಈ ಹಿಂದೆ ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿರುವ ವೈದ್ಯರು, ದಾದಿಯರು ಸೇವೆ ಮರೆಯುವಂತಿಲ್ಲ ಎಂದು ಸ್ಮರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಅಶ್ವಥ್‌ಬಾಬು ಮಾತನಾಡಿ ಬಹುತೇಕ ಚಿಕಿತ್ಸೆಯ ಎಲ್ಲಾ ವಿಭಾಗಗಳ ನ್ನು ಸ್ಥಾಪಿಸುವ ಮೂಲಕ ಆಶ್ರಯ ಆಸ್ಪತ್ರೆ ಮಲ್ಟಿಸ್ಪೆಷಾಲಿಟಿಯಾಗಿ ಪರಿವರ್ತನೆಯಾಗಿದೆ. ಜೊತೆಗೆ ಸ್ವಚ್ಚತೆ, ವೈದ್ಯರು, ಸಿಬ್ಬಂದಿಗಳ ಸೇವೆ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಆಶಿಸಿದರು.

ನರರೋಗ ತಜ್ಞ ಡಾ|| ಎಂ.ಎಸ್.ಸುಮುಖ್ ಮಾತನಾಡಿ ನರರೋಗ ಎಂಬುದು ಬಹುದಿನಗಳ ಕಾಡು ವ ಕಾಯಿಲೆಯಾದ ಕಾರಣ ದೂರದೂರಿಗಳಿಗೆ ಚಿಕಿತ್ಸೆ ತೆರಳಲು ಜಿಲ್ಲೆಯ ಜನತೆಗೆ ಕಷ್ಟಸಾಧ್ಯ. ತಾವು ಕೂ ಡಾ ಇದೇ ಜಿಲ್ಲೆಯವರಾದ ಕಾರಣ ನರರೋಗ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರೆ ಸ್ಥಳೀಯರಿಗೆ ಅನುಕೂಲ ವಾಗಲಿದೆ ಎಂದು ತಿಳಿಸಿದರು

ಆಶ್ರಯ ಆಸ್ಪತ್ರೆ ಸಂಸ್ಥಾಪಕ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಪ್ರಸ್ತುತ ಆಸ್ಪತ್ರೆ ೮೮ರ ಕಾಲ ಘಟ್ಟದಲ್ಲಿ ಕೇವಲ ೧೫ ಬೆಡ್‌ಗಳೊಂದಿಗೆ ಆರಂಭಿಸಿ ಇದೀಗ ೧೫೦ ಬೆಡ್‌ಗಳು ಸ್ಥಾಪಿಸಿ ಚಿಕಿತ್ಸೆ ಪೂರಕವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತನೆಯಾಗುವ ಮೂಲಕ ಜನತೆಯ ಅವಶ್ಯಕತೆಗೆ ಅನುಗುಣವಾ ಗಿ ಚಿಕಿತ್ಸೆ ನೀಡುತ್ತಿದೆ ಎಂದರು.

ಆಸ್ಪತ್ರೆಯ ಡಾ|| ಅನಿಕೇತ್ ಮಾತನಾಡಿ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಳ ಅನುಕೂಲಕ್ಕೆ ಒಟ್ಟು ೧೬ ವಿಭಾಗಗಳು ಚಾಲ್ತಿಯಲ್ಲಿದ್ದು, ಇದೀಗ ಸೂಪರ್ ಸ್ಪೆಷಾಲಿಟಿಯಡಿ ೯ನೇ ವಿಭಾಗವಾಗಿ ನರವಿಜ್ಞಾನ ಕೇಂದ್ರ ಸ್ಥಾಪಿಸುವ ಮುಖೇನಾ ಆಸ್ಪತ್ರೆ ಹಂತ ಹಂತವಾಗಿ ಮೇಲ್ದಜೇಗೇರುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಆಸ್ಪತ್ರೆಯ ಸಂಸ್ಥಾ ಪಕರಾದ ಡಾ|| ಶುಭ ವಿಜಯ್, ಆಡಳಿತ ವ್ಯವಸ್ಥಾಪಕ ಜಿ.ಪುರುಷೋತ್ತಮ್, ವಿವಿಧ ವಿಭಾಗದ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.

Neurology Department Center inaugurated at Ashraya Hospital

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಗೆ ಮಂತ್ರಿಯಂತೆ, ಮಂತ್ರಿ ಇಲ್ಲವೇ, ಇಲ್ಲ ಸಾಧ್ಯವಿಲ್ಲ !

ಚಿಕ್ಕಮಗಳೂರು: ಕಳೆದ ಇಪ್ಪತೈದು ವರ್ಷಗಳಿಂದ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಲ್ಲಾ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿಯಾದರೂ ಜಿಲ್ಲೆಯವರಿಗೆ ಮಂತ್ರಿ...

ಸಿದ್ದರಾಮಯ್ಯ ಪರವಾಗಿ ಅಹಿಂದ ಸಂಘಟನೆ ರಾಜ್ಯದಾದ್ಯಂತ ಹೋರಾಟ

ಚಿಕ್ಕಮಗಳೂರು: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿರುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಜಿಲ್ಲಾ ಅಹಿಂದ ಘಟಕದ ಅಧ್ಯಕ್ಷ ತ್ರಿಭುವನ್ ಎತ್ತಿನಮನೆ ತಿಳಿಸಿದರು. ಸಿದ್ದರಾಮಯ್ಯ ಅವರನ್ನು ಕೈಬಿಟ್ಟರೆ ರಾಜ್ಯದಲ್ಲಿ ಅಹಿಂದ ವರ್ಗದ ಜನರ...

Related Articles

ತಾಲೂಕು ರೈತ ಸಂಘದ ಅಧ್ಯಕ್ಷರಾಗಿ ಹಾದಿಹಳ್ಳಿ ಭದ್ರೇಗೌಡ ಆಯ್ಕೆ

ಚಿಕ್ಕಮಗಳೂರು :ಕರ್ನಾಟಕ ರೈತ ಸಂಘದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ ಹಾದಿಹಳ್ಳಿ ಭದ್ರೇಗೌಡ ಆಯ್ಕೆಯಾಗಿದ್ದಾರೆಂದು ರೈತ ಸಂಘದ...

ಜಿಲ್ಲೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ

ಚಿಕ್ಕಮಗಳೂರು: ಸಂಚಾರಿ ಹೈಕೋರ್ಟ್ ಪೀಠವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದು ಸೂಕ್ತವೆಂದು ವಕೀಲರ ಸಂಘದ ಅಧ್ಯಕ್ಷ...

ಬೀಗ ಹಾಕಿದ್ದ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು ಕಳ್ಳತನ

ಮೂಡಿಗೆರೆ : ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ನಗದು ಹಣ ಹಾಗೂ...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...