Home namma chikmagalur ರಾಜ್ಯಸರ್ಕಾರದ ವೈಫಲ್ಯತೆ ಖಂಡಿಸಿ ಜೆಡಿಎಸ್ ಪ್ರತಿಭಟನೆ
namma chikmagalurchikamagalurHomeLatest News

ರಾಜ್ಯಸರ್ಕಾರದ ವೈಫಲ್ಯತೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

Share
Share

ಚಿಕ್ಕಮಗಳೂರು: ರಾಜ್ಯಸರ್ಕಾರದ ಆಡಳಿತ ವೈಫಲ್ಯತೆ ಹಾಗೂ ಹಲವು ಇಲಾಖೆಗಳಲ್ಲಿ ಭಾರೀ ಭ್ರಷ್ಟಚಾರ ಎಸಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡರುಗಳು ಪಕ್ಷದ ಕಚೇರಿ ಮುಂಭಾಗದಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೂ ಭ್ರಷ್ಟಚಾರ ಮುಗಿಲುಮುಟ್ಟಿದೆ. ಭ್ರಷ್ಟಚಾರದಲ್ಲಿ ಸಂಪೂರ್ಣವಾ ಗಿ ಮುಳುಗಿರುವ ರಾಜ್ಯಸರ್ಕಾರ ಕೂಡಲೇ ಅಧಿಕಾರವನ್ನು ತ್ಯಜಿಸಬೇಕಿದೆ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸ್ವಪಕ್ಷ ಶಾಸಕರಿಂದಲೇ ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೇಳೆಯುವ ಕ್ರಮವಾಗಿದೆ. ಸ ರ್ಕಾರದ ವಾಲ್ಮೀಕಿ ಹಗರಣ ಕೋಟ್ಯಾಂತರ ಹಣವನ್ನು ದುರುಪಯೋಗ ಮಾಡಿಕೊಂಡಿರುವ ವಿರುದ್ಧ ವಿ ಧಾನ ಪರಿಷತ್ ಸಭೆಯೊಳಗೆ ಹೋರಾಟ ರೂಪಿಸಿದ ಪರಿಣಾಮ ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಮಾತನಾಡಿ ರಾಜ್ಯನಾಯಕರ ಆದೇಶದನ್ವಯ ಜಿಲ್ಲೆಯಾದ್ಯಂತ ಭ್ರಷ್ಟ ರಾಜ್ಯಸರ್ಕಾರದ ವಿರುದ್ಧ ಅಭಿಯಾನ ಹಮ್ಮಿಕೊಂಡು ಎಳೆ ಎಳೆಯಾಗಿ ಬಿಚ್ಚಿಸುವ ಕೆಲಸ ಜೆಡಿಎಸ್ ಕಾರ್ಯಕರ್ತರು ಮಾಡಲಿದ್ದಾರೆ. ಜೊತೆಗೆ ಯುವನಾಯಕ ನಿಖಿಲ್‌ಕುಮಾರಸ್ವಾಮಿ ಜನಾಂದೋಲನ ಹಾ ಗೂ ಸದಸ್ಯತ್ವ ಅಭಿಯಾನ ನಡೆಸಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಿ ಕಾರ್ಯಕರ್ತರಲ್ಲಿ ಹುರುಪು ತು ಂಬುತ್ತಿದ್ದಾರೆ ಎಂದರು.

ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಮಾತನಾಡಿ ವಾಲ್ಮೀಕಿ, ಮುಡ, ಪಡಿತರ ಚೀಟಿ ಹಗರಣ ಮ ತ್ತು ವಸತಿ ಯೋಜನೆಯ ಭ್ರಷ್ಟಚಾರ ಸೇರಿದಂತೆ ಸಾಲು ಸಾಲು ಹಗರಣಗಳು ರಾಜ್ಯಸರ್ಕಾರದಲ್ಲಿ ಕೇಳಿ ಬರುತ್ತಿದೆ. ಆರ್ಥಿಕ ಸಬಲರಾದವರಿಗೆ ಮಾತ್ರ ವಸತಿ ಎಂಬ ನಿಯಮ ರೂಫಿಸಿ ಬಡವರನ್ನು ಕೆಳತಳ್ಳುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಗೋಪಿ, ಶೀಲಾ ದಿನೇಶ್, ಮಾಜಿ ಸದಸ್ಯ ದಿನೇಶ್, ಜೆಡಿ ಎಸ್ ಜಿಲ್ಲಾ ಉಪಾದ್ಯಕ್ಷ ಲಕ್ಷ್ಮಣ್‌ಗೌಡ, ತಾ.ಪಂ. ಮಾಜಿ ಸದಸ್ಯ ಆನಂದ್‌ನಾಯ್ಕ್, ಮುಖಂಡರುಗಳಾದ ಡಿ.ಜೆ.ಸುರೇಶ್, ದೇವರಾಜ್‌ಅರಸ್, ನಂದೀಶ್, ಮೂರ್ತಿ, ಚೇತನ್, ಸಿದ್ದಿಕ್, ಜಾಕರೀಯಾ ಜಾಕೀರ್, ಈಶ್ವರೇಗೌಡ, ರವಿ, ಸತೀಶ್, ಜಯಂತಿ, ರತ್ನ ಮತ್ತಿತರರಿದ್ದರು.

JDS protests condemning the failure of the state government

 

Share

Leave a comment

Leave a Reply

Your email address will not be published. Required fields are marked *

Don't Miss

ಕಡೂರು ತಾಲೂಕು ಸರ್ಕಾರದ ಬರಪಟ್ಟಿಗೆ ವೈ.ಎಸ್.ವಿ. ದತ್ತಾ ಆಗ್ರಹ

ಕಡೂರು: ಇಡೀ ಜಿಲ್ಲೆಯಲ್ಲಿ ಅತ್ಯಂತ ಬರಗಾಲಕ್ಕೆ ತುತ್ತಾಗಿರುವ ತಾಲೂಕು ಎಂದರೆ ಕಡೂರು ತಾಲೂಕು, ಈ ಸಾಲಿನಲ್ಲಿ ಪ್ರಾರಂಭದಿಂದಲೂ  ಮಳೆ ಬಂದಿಲ್ಲ, ಮುಂಗಾರು ಬಿತ್ತನೆ ಆಗಿಲ್ಲ, ಆಗಸ್ಟ್ ತಿಂಗಳು ಕಳೆಯುತ್ತಾ ಬಂದರು ರಾಗಿ...

ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ನಗರದ ಟಿಪ್ಪುನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ ಬೃಹತ್ ಕಟೌಟ್‌ಗೆ ಪಾಕಿಸ್ತಾನ ಪರವಾದ ಹಾಡನ್ನು ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದನ್ನು ಖಂಡಿಸಿ, ರಾಷ್ಟ್ರ ಸುರಕ್ಷಾ ಸಮಿತಿ...

Related Articles

ಕಸಾಪ ಅಧ್ಯಕ್ಷಗಿರಿಗೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಸರ್ಕಾರ ಚುನಾವಣಾಧಿಕಾರಿಯನ್ನು...

ಚಿಕ್ಕೊಳಲೆ ಸುತ್ತ ಕುರುಡು ಕಾಡುಕೋಣದ ಉಪಟಳ

ಚಿಕ್ಕಮಗಳೂರು: ನಗರದ ಸಮೀಪದ ಚಿಕ್ಕೊಳಲೆ ಸುತ್ತಮುತ್ತ ಹಲವು ದಿನಗಳಿಂದ ಕಣ್ಣು ಕಾಣದ ಕಾಡುಕೋಣವೊಂದು ಸುತ್ತಾಡುತ್ತಿದ್ದು, ಗ್ರಾಮಸ್ಥರಲ್ಲಿ...

ರಾಜಕಾರಣದಲ್ಲೂ ಮಹಿಳೆಯರು ಸ್ಥಾನಮಾನಕ್ಕಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು

ಚಿಕ್ಕಮಗಳೂರು:  ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ ನೇತೃತ್ವದ ರಚನೆಯಾದ ನೂತನ ಸಚಿವ...

ಗುಟ್ಕಾ ನಿಷೇಧ ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರತಿಭಟನೆ

ಚಿಕ್ಕಮಗಳೂರು: ಗುಟ್ಕಾ ನಿಷೇಧದ ಕುರಿತು ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ಅಡಕೆ ಬೆಲೆ ಕುಸಿದು ರೈತರು...