Home Crime News ಎರಡು ಗುಂಪುಗಳ ನಡುವೆ ಗಲಾಟೆ – ಇಬ್ಬರ ಯುವಕರ ಸ್ಥಿತಿ ಗಂಭೀರ
Crime NewschikamagalurHomeLatest Newsnamma chikmagalur

ಎರಡು ಗುಂಪುಗಳ ನಡುವೆ ಗಲಾಟೆ – ಇಬ್ಬರ ಯುವಕರ ಸ್ಥಿತಿ ಗಂಭೀರ

Share
Share

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಇಬ್ಬರ ಯುವಕರ ಸ್ಥಿತಿ ಗಂಭೀರವಾಗಿರುವ ಘಟನೆ ನಗರದ ಟೌನ್ ಕ್ಯಾಟೀನ್ ವೃತ್ತದಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ.

ಮಾರಾಮಾರಿಯಲ್ಲಿ ಅಜಯ್ (೨೩) ಹಾಗೂ ಯತೀಶ್ (೨೩) ಎಂಬುವರ ಸ್ಥಿತಿ ಗಂಭೀರವಾಗಿದೆ. ಅಜಯ್ ತಲೆಗೆ ೭ ರಿಂದ ೮ ಕಡೆ ಹೊಡೆತ ಬಿದಿದ್ದು, ಯತೀಶ್ ಎಡಗೈಗೆ ಗಂಭೀರ ಗಾಯವಾಗಿದೆ.

ಇಬ್ಬರು ಯುವಕರಿಗೆ ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲೆಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ದಿನಗಳಲ್ಲಿ ೧೭-೧೮ ವರ್ಷ ವಯೋಮಾನದ ಯುವಕರು ಬಡಿದಾಡಿಕೊಳ್ಳುತ್ತಿರುವ ಪ್ರಕರಣಗಳು ಚಿಕ್ಕಮಗಳೂರು ನಗರ ಪ್ರದೇಶದಲ್ಲಿ ಹೆಚ್ಚುತ್ತಿದೆ.

ಇಬ್ಬರು ಯುವಕರ ಪೋಷಕರು ಪ್ರತಿನಿತ್ಯ ಕೂಲಿ ಮಾಡಿ ಜೀವನ ಸಾಗಿಸುವಂತಾಗಿದೆ. ಹೆಚ್ಚಿನ ಯುವಕರು ಗಾಂಜಾ, ಮದ್ಯ ಸೇವಿಸಿ ಹೊಡೆದಾಡಿಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ಇಂತಹ ಯುವಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.

ಇಂತಹ ಘಟನೆ ನಡೆಯದಂತೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Clashes between two groups

Share

Leave a comment

Leave a Reply

Your email address will not be published. Required fields are marked *

Don't Miss

ಕಡೂರು ತಾಲೂಕು ಸರ್ಕಾರದ ಬರಪಟ್ಟಿಗೆ ವೈ.ಎಸ್.ವಿ. ದತ್ತಾ ಆಗ್ರಹ

ಕಡೂರು: ಇಡೀ ಜಿಲ್ಲೆಯಲ್ಲಿ ಅತ್ಯಂತ ಬರಗಾಲಕ್ಕೆ ತುತ್ತಾಗಿರುವ ತಾಲೂಕು ಎಂದರೆ ಕಡೂರು ತಾಲೂಕು, ಈ ಸಾಲಿನಲ್ಲಿ ಪ್ರಾರಂಭದಿಂದಲೂ  ಮಳೆ ಬಂದಿಲ್ಲ, ಮುಂಗಾರು ಬಿತ್ತನೆ ಆಗಿಲ್ಲ, ಆಗಸ್ಟ್ ತಿಂಗಳು ಕಳೆಯುತ್ತಾ ಬಂದರು ರಾಗಿ...

ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ನಗರದ ಟಿಪ್ಪುನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ ಬೃಹತ್ ಕಟೌಟ್‌ಗೆ ಪಾಕಿಸ್ತಾನ ಪರವಾದ ಹಾಡನ್ನು ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದನ್ನು ಖಂಡಿಸಿ, ರಾಷ್ಟ್ರ ಸುರಕ್ಷಾ ಸಮಿತಿ...

Related Articles

ಕಸಾಪ ಅಧ್ಯಕ್ಷಗಿರಿಗೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಸರ್ಕಾರ ಚುನಾವಣಾಧಿಕಾರಿಯನ್ನು...

ಚಿಕ್ಕೊಳಲೆ ಸುತ್ತ ಕುರುಡು ಕಾಡುಕೋಣದ ಉಪಟಳ

ಚಿಕ್ಕಮಗಳೂರು: ನಗರದ ಸಮೀಪದ ಚಿಕ್ಕೊಳಲೆ ಸುತ್ತಮುತ್ತ ಹಲವು ದಿನಗಳಿಂದ ಕಣ್ಣು ಕಾಣದ ಕಾಡುಕೋಣವೊಂದು ಸುತ್ತಾಡುತ್ತಿದ್ದು, ಗ್ರಾಮಸ್ಥರಲ್ಲಿ...

ರಾಜಕಾರಣದಲ್ಲೂ ಮಹಿಳೆಯರು ಸ್ಥಾನಮಾನಕ್ಕಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು

ಚಿಕ್ಕಮಗಳೂರು:  ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ ನೇತೃತ್ವದ ರಚನೆಯಾದ ನೂತನ ಸಚಿವ...

ಗುಟ್ಕಾ ನಿಷೇಧ ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರತಿಭಟನೆ

ಚಿಕ್ಕಮಗಳೂರು: ಗುಟ್ಕಾ ನಿಷೇಧದ ಕುರಿತು ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ಅಡಕೆ ಬೆಲೆ ಕುಸಿದು ರೈತರು...